ಬೆಂಗಳೂರು: ರಣಜಿ ಟೂರ್ನಿಯಲ್ಲಿ ಬರೋಡಾ ವಿರುದ್ಧದ ಪಂದ್ಯದಲ್ಲಿ ಮುಂಬೈ ಒಂದೇ ಓವರ್ ನಲ್ಲಿ ಸತತ ಐದು ಸಿಕ್ಸರ್ ಸಿಡಿಸಿದ್ದ ಮುಂಬೈ ಆಲ್ ರೌಂಡರ್ ಶಿವಂ ದುಬೆ ಅವರ ಅದೃಷ್ಟವೇ ಬದಲಾಗಿದೆ.
ಜೈಪುರದಲ್ಲಿ ನಡೆದ ಐಪಿಎಲ್ ಹರಾಜು ಪ್ರಕ್ರಿಯೆಯಲ್ಲಿ ದುಬೆ ಅವರನ್ನು 5 ಕೋಟಿ ರೂ. ನೀಡಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಖರೀದಿಸಿದೆ.
Advertisement
Advertisement
25 ವರ್ಷದ ಎಡಗೈ ಬ್ಯಾಟ್ಸ್ ಮನ್ ಶಿವಂ ದುಬೆ ಅವರು ರಣಜಿ ಟ್ರೋಫಿ ಅಂತಿಮ ದಿನವಾದ ಸೋಮವಾರ ಎಡಗೈ ಸ್ಪಿನ್ನರ್ ಸ್ವಪ್ನಿಲ್ ಸಿಂಗ್ ಓವರ್ ನಲ್ಲಿ ಐದು ಎಸೆತಗಳಲ್ಲಿ ಐದು ಸಿಕ್ಸರ್ ಸಿಡಿಸಿದ್ದರು. ಮೊದಲ ಇನ್ನಿಂಗ್ಸ್ ನಲ್ಲಿ 37 ರನ್(45 ಎಸೆತ, 5 ಬೌಂಡರಿ, 1 ಸಿಕ್ಸರ್) ಹೊಡೆದಿದ್ದ ದುಬೆ ಎರಡನೇ ಇನ್ನಿಂಗ್ಸ್ ನಲ್ಲಿ 76 ರನ್(60 ಎಸೆತ, 3 ಬೌಂಡರಿ, 7 ಸಿಕ್ಸರ್) ಚಚ್ಚಿದ್ದರು.
Advertisement
ಹರಾಜು ವೇಳೆ 20 ಲಕ್ಷ ರೂ. ಮೂಲ ಬೆಲೆ ಹೊಂದಿದ್ದ ಶಿವಂ ದುಬೆ ಅವರ ರಣಜಿಯಲ್ಲಿ ಸ್ಫೋಟಕ ಆಟದಿಂದಾಗಿ ಫ್ರಾಂಚೈಸಿಗಳು ಖರೀದಿಸಲು ಆಸಕ್ತಿ ತೋರಿದ ಪರಿಣಾಮ ಕೊನೆಗೆ ಆರ್‌ಸಿಬಿ ಗೆ ಮಾರಾಟವಾಗಿದ್ದಾರೆ.
Advertisement
6 ಅಡಿ ಎತ್ತರ ಇರುವ ದುಬೆ ಗಂಟೆಗೆ 130 ಕಿ.ಮೀ ವೇಗದಲ್ಲಿ ಬೌಲಿಂಗ್ ಮಾಡುವ ಸಾಮಥ್ರ್ಯವನ್ನು ಹೊಂದಿದ್ದಾರೆ. ಕಳೆದ ವರ್ಷ ರಣಜಿಯಲ್ಲಿ ಒಟ್ಟು 454 ರನ್ ಸಿಡಿಸಿದ್ದ ದುಬೆ 21 ವಿಕೆಟ್ ಪಡೆದಿದ್ದರು. 2 ಶತಕ ಮತ್ತು 2 ಅರ್ಧ ಶತಕ ಸಿಡಿಸಿ ಮುಂಚಿದ್ದರು. ಮುಂಬೈ ಟಿ20 ಟೂರ್ನಿಯಲ್ಲಿ ಪ್ರವೀಣ್ ತಾಂಬೆ ಎಸೆದ ಓವರಿನ 5 ಎಸೆತವನ್ನು ಸಿಕ್ಸರ್ ಗೆ ಅಟ್ಟಿದ್ದರು.
6 ಪ್ರಥಮ ದರ್ಜೆ ಪಂದ್ಯದಲ್ಲಿ ಶಿವಂ ದುಬೆ 567 ರನ್ ಹೊಡೆದಿದ್ದು ಇದರಲ್ಲಿ 2 ಶತಕ, 22 ವಿಕೆಟ್ ಪಡೆದಿದ್ದಾರೆ. 18 ಲಿಸ್ಟ್ ಎ ಪಂದ್ಯವಾಡಿದ್ದು, 248 ರನ್ ಮತ್ತು 23 ವಿಕೆಟ್ ಪಡೆದಿದ್ದಾರೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv