ಮುಂಬೈ: ಈಗಾಗಲೇ ಭಾರಿ ಕುತೂಲ ಹೆಚ್ಚಿಸಿರುವ 2025ರ ಐಪಿಎಲ್ ಮೆಗಾ ಹರಾಜು (IPL Mega Auction) ಪ್ರಕ್ರಿಯೆಯನ್ನು ಭಾರತದಿಂದ ಆಚೆ ನಡೆಸಲು ಬಿಸಿಸಿಐ (BCCI) ನಿರ್ಧರಿಸಿದೆ ಎಂದು ವರದಿಗಳು ತಿಳಿಸಿವೆ.
ವರದಿಗಳ ಪ್ರಕಾರ, 2025ರ ಐಪಿಎಲ್‌ಗೆ (IPL 2025) ನಡೆಯಲಿರುವ ಮೆಗಾ ಹರಾಜು ಸೌದಿ ಅರೇಬಿಯಾದ ರಿಯಾದ್‌ನಲ್ಲಿ (Saudi Arabia’s Riyadh) ನಡೆಸಲು ಬಿಸಿಸಿಐ ತೀರ್ಮಾನಿಸಿದೆ. ಬಿಸಿಸಿಐ ಪಟ್ಟಿಯಲ್ಲಿ ದುಬೈ, ಸಿಂಗಾಪುರ, ಲಂಡನ್ ಮತ್ತು ವಿಯೆನ್ನಾದಂತಹ ಹಲವು ನಗರಗಳು ಆಯ್ಕೆಯಲ್ಲಿದ್ದವು. ವ್ಯಾಪಕ ಹುಡುಕಾಟದ ನಂತರ ಎರಡು ದಿನಗಳ ಮೆಗಾ ಹರಾಜನ್ನು ಸೌದಿ ಅರೇಬಿಯಾ ರಿಯಾದ್‌ನಲ್ಲಿ ನಡೆಸಲು ತೀರ್ಮಾನಿಸಲಾಗಿದೆ ಎಂದು ಹೇಳಲಾಗುತ್ತಿದೆ. ಎಲ್ಲವೂ ಅಂದುಕೊಂಡಂತೆ ನಡೆದರೆ, ಮುಂದಿನ ನವೆಂಬರ್ ನವೆಂಬರ್ 24 ಮತ್ತು 25 ರಂದು ರಿಯಾದ್‌ನಲ್ಲಿ ಮೆಗಾ ಹರಾಜು ನಡೆಯಲಿದೆ.
ಈಗಾಗಲೇ 2025-2027ರ ಆವೃತ್ತಿಗಳಿಗೆ ಹೊಸ ನಿಯಮ ಜಾರಿಗೊಳಿಸಿರುವ ಬಿಸಿಸಿಐ, ಇದೇ ಅಕ್ಟೋಬರ್ 31ರ ಸಂಜೆ 5 ಗಂಟೆಯ ಒಳಗೆ ಎಲ್ಲಾ ಫ್ರಾಂಚೈಸಿಗಳು ರಿಟೇನ್ ಆಟಗಾರರ ಪಟ್ಟಿಯನ್ನು ಸಲ್ಲಿಕೆ ಮಾಡುವಂತೆ ಸೂಚಿಸಿದೆ. ಇದನ್ನೂ ಓದಿ: ಚಾಂಪಿಯನ್ ಕಿವೀಸ್ ಮಹಿಳಾ ತಂಡಕ್ಕೆ 19.6 ಕೋಟಿ ಬಹುಮಾನ – ಟೀಂ ಇಂಡಿಯಾಕ್ಕೆ ಸಿಕ್ಕಿದ್ದೆಷ್ಟು?
ಐಪಿಎಲ್ ಹರಾಜು ಯಾವಾಗ?
ಐಪಿಎಲ್ ಮೆಗಾ ಹರಾಜು ನವೆಂಬರ್ 24 ಮತ್ತು 25ರಂದು ನಡೆಯಲಿದೆ ಎಂಬ ನಿರೀಕ್ಷೆ ಇದೆ. ಇದೇ ಸಮಯದಲ್ಲಿ ಭಾರತ ಮತ್ತು ಆಸ್ಟ್ರೇಲಿಯಾ ನಡುವೆ ಬಾರ್ಡರ್ ಗವಾಸ್ಕರ್ ಟ್ರೋಫಿ ಟೆಸ್ಟ್ ಸರಣಿ ಸಹ ನಿಗದಿಯಾಗಿದೆ. ನವೆಂಬರ್ 22ರಿಂದ 26ರ ವರೆಗೆ ಆಸ್ಟ್ರೇಲಿಯಾದ ಪರ್ತ್‌ನಲ್ಲಿ ಮೊದಲ ಟೆಸ್ಟ್ ಪಂದ್ಯ ನಡೆಯಲಿದೆ. ಹೀಗಾಗಿ ಮಿಲಿಯನ್ ಡಾಲರ್ ಟೂರ್ನಿಯ ಮೆಗಾ ಹರಾಜು ಮತ್ತು ಪರ್ತ್ ಟೆಸ್ಟ್ ನಡುವೆ ಯಾವುದೇ ರೀತಿಯ ಸಂಭಾವ್ಯ ಘರ್ಷಣೆ ನಡೆಯದಂತೆ ಖಚಿತಪಡಿಸಿಕೊಳ್ಳಲು ಬಿಸಿಸಿಐ ನಿರ್ಧರಿಸಿದೆ. ಇದನ್ನೂ ಓದಿ: ICC Women’s T20 World Cup | ನ್ಯೂಜಿಲೆಂಡ್‌ಗೆ ಚೊಚ್ಚಲ ಚಾಂಪಿಯನ್ ಕಿರೀಟ
ಇಂಡಿಯನ್ ಪ್ರೀಮಿಯರ್ ಲೀಗ್ ಫ್ರಾಂಚೈಸಿಗಳು ಭಾರತದಲ್ಲಿಯೇ ಹರಾಜು ಪ್ರಕ್ರಿಯೆ ಆಯೋಜಿಸುವಂತೆ ಬಿಸಿಸಿಐಗೆ ಮನವಿ ಮಾಡಿದ್ದವು. ಆದರೆ ಬಿಸಿಸಿಐ ಈ ಆಯ್ಕೆಯನ್ನು ತಳ್ಳಿಹಾಕಿತು. ಹೀಗಾಗಿ ಸೂಕ್ತ ಪ್ರಯಾಣದ ವ್ಯವಸ್ಥೆ ಮಾಡಲು ಮೆಗಾ ಹರಾಜಿನ ಸ್ಥಳ ಮತ್ತು ದಿನಾಂಕಗಳ ಕುರಿತು ಕ್ರಿಕೆಟ್ ಮಂಡಳಿಯ ಅಂತಿಮ ನಿರ್ಧಾರಕ್ಕಾಗಿ ಕಾಯುತ್ತಿವೆ. ಇದನ್ನೂ ಓದಿ: ಆರ್‌ಸಿಬಿ ಸೇರುವಂತೆ ರೋಹಿತ್‌ಗೆ ಆಫರ್ – ಹಿಟ್‌ಮ್ಯಾನ್‌ಗೆ ಆಫರ್ ಕೊಟ್ಟಿದ್ಯಾರು?