Connect with us

2018 ಐಪಿಎಲ್ ಹರಾಜು – ಮೊದಲ ದಿನವೇ ಆಟಗಾರರಿಗೆ ಧಮಾಕಾ

2018 ಐಪಿಎಲ್ ಹರಾಜು – ಮೊದಲ ದಿನವೇ ಆಟಗಾರರಿಗೆ ಧಮಾಕಾ

ಬೆಂಗಳೂರು: ಪ್ರಸಕ್ತ ಸಾಲಿನ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಆಟಗಾರರ ಹರಾಜು ಪ್ರಕ್ರಿಯೆ ನಗರದಲ್ಲಿ ನಡೆಯುತ್ತಿದ್ದು, ಟೀಂ ಪ್ರಾಂಚೈಸಿಗಳು ಹಣದ ಹೊಳೆ ಹರಿಸಿ ಆಟಗಾರರನ್ನು ಖರೀಧಿಸಿದ್ದಾರೆ. ಅದರಲ್ಲೂ ಈ ಬಾರಿಯ ಐಪಿಎಲ್‍ನಲ್ಲಿ ಕರ್ನಾಟಕದ ಆಟಗಾರರಿಗೆ ನಿರೀಕ್ಷೆ ಮೀರಿದ ಬಂಪರ್ ಆಫರ್ ಲಭಿಸಿದೆ.

ಪ್ರಮುಖವಾಗಿ ಈ ಬಾರಿ 2 ಕೋಟಿ ರೂ. ಮೂಲ ಬೆಲೆ ನಿಗದಿಪಡಿಸಿದ್ದ ಕೆ.ಎಲ್ ರಾಹುಲ್ ರನ್ನು ಕಿಂಗ್ಸ್ ಇಲೆವೆನ್ ತಂಡ ಬರೋಬ್ಬರಿ 11 ಕೋಟಿ ರೂ. ಕೊಟ್ಟು ಖರೀದಿಸಿದೆ. ಅದೇ ರೀತಿ ಮನೀಶ್ ಪಾಂಡೆಗೆ 11 ರೂ. ಕೋಟಿ ಕೊಟ್ಟು ಸನ್ ರೈಸರ್ಸ್ ಹೈದರಾಬಾದ್ ತನ್ನ ತೆಕ್ಕೆಗೆ ಸೇರಿಸಿಕೊಂಡಿದೆ. ಕರುಣ್ ನಾಯರ್ ಅವರಿಗೆ 5.6 ಕೋಟಿ ರೂ. ನೀಡಿ ಪಂಜಾಬ್ ಖರೀದಿಸಿದೆ. ರಾಬಿನ್ ಉತ್ತಪ್ಪ ಅವರನ್ನು ಕೊಲ್ಕತ್ತಾ ನೈಟ್ ರೈಡರ್ಸ್ ತಂಡ 6.40 ಕೋಟಿ ರೂ. ನೀಡಿ ಖರೀದಿಸಿದೆ.

 ಇಂದು ಹರಾಜಿನಲ್ಲಿ ಅತಿ ಹೆಚ್ಚು ಮೊತ್ತ ಪಡೆದ ಟಾಪ್ ಟೆನ್ ಆಟಗಾರರ ಪಟ್ಟಿ
1. ಬೆನ್ ಸ್ಟೋಕ್ಸ್ – ರಾಜಸ್ಥಾನ ರಾಯಲ್ಸ್ – 12.5 ಕೋಟಿ ರೂ.
2. ಮನೀಶ್ ಪಾಂಡೆ – ಸನ್‍ರೈಸರ್ಸ್ ಹೈದ್ರಾಬಾದ್ – 11 ಕೋಟಿ ರೂ.
3. ಕೆ. ಎಲ್ ರಾಹುಲ್ – ಕಿಂಗ್ಸ್ ಇಲೆವೆನ್ ಪಂಜಾಬ್ – 11 ಕೋಟಿ ರೂ.
4. ಕ್ರಿಸ್ ಲಿನ್ – ಕೊಲ್ಕತ್ತಾ ನೈಟ್ ರೈಡರ್ಸ್ – 9.6 ಕೋಟಿ ರೂ.
5. ಮಿಚೆಲ್ ಸ್ಟಾರ್ಕ್ – ಕೊಲ್ಕತ್ತಾ ನೈಟ್ ರೈಡರ್ಸ್ -9.4 ಕೋಟಿ ರೂ.
6. ಗ್ಲೇನ್ ಮ್ಯಾಕ್ಸ್ ವೆಲ್ – ಡೆಲ್ಲಿ ಡೇರ್ ಡೆವಿಲ್ಸ್ – 9 ಕೋಟಿ ರೂ.
7. ಕೃನಾಲ್ ಪಾಂಡ್ಯ – ಮುಂಬೈ ಇಂಡಿಯನ್ಸ್‌ – 8.8 ಕೋಟಿ ರೂ.
8. ಸಂಜು ಸ್ಯಾಮ್ಸನ್‌ – ರಾಜಸ್ಥಾನ ರಾಯಲ್ಸ್‌ – 8 ಕೋಟಿ ರೂ.
9. ಕೇದಾರ್‌ ಜಾಧವ್‌ –  ಚೆನ್ನೈ ಸೂಪರ್‌ ಕಿಂಗ್ಸ್‌ – 7.8 ಕೋಟಿ ರೂ.
10. ಆರ್.ಅಶ್ವಿನ್ – ಕಿಂಗ್ಸ್ ಇಲೆವೆನ್ ಪಂಜಾಬ್ – 7.6 ಕೋಟಿ ರೂ.

ಹರಾಜಿನಲ್ಲಿ ಖರೀದಿಯಾದ ಯುವ ಆಟಗಾರರು :
1) ಸಿದ್ಧಾರ್ಥ್ ಕೌಲ್ – ಸನ್ ರೈಸರ್ಸ್ ಹೈದರಾಬಾದ್ – 3.8 ಕೋಟಿ ರೂ.
2) ಬಸಿಲ್ ಥಾಂಪಿ – ಸನ್ ರೈಸರ್ಸ್ ಹೈದರಾಬಾದ್ -95 ಲಕ್ಷ ರೂ.
3) ಸೂರ್ಯ ಕುಮಾರ್ ಯಾದವ್ – ಮುಂಬೈ ಇಂಡಿಯನ್ಸ್ – 3.2 ಕೋಟಿ ರೂ.
4) ಶುಬ್ಮಾನ್ ಗಿಲ್ – ಕೊಲ್ಕತ್ತಾ ನೈಟ್ ರೈಡರ್ಸ್ – 1.8 ಕೋಟಿ ರೂ.
5) ಕುಲ್ವಂತ್ ಖೇಜ್ರೋಲಿಯಾ – ರಾಯಲ್ ಚಾಲೆಂಜರ್ಸ್ ಬೆಂಗಳೂರು – 85 ಲಕ್ಷ

ಹರಾಜಿನಲ್ಲಿ ಮಾರಾಟವಾಗದ ಪ್ರಮುಖ ಆಟಗಾರರು : ಐಪಿಎಲ್‍ನಲ್ಲಿ ಅತಿ ಹೆಚ್ಚು ಸಿಕ್ಸರ್ ಸಿಡಿಸಿದ ದಾಖಲೆ ಹೊಂದಿರುವ ಕ್ರಿಸ್ ಗೇಲ್ ಹಾಗೂ ವಿಕೆಟ್ ದಾಖಲೆ ಹೊಂದಿರುವ ಲಸಿಂತ್ ಮಲಿಂಗಾ ಇಬ್ಬರೂ ಮಾರಾಟವಾಗದೇ ಉಳಿದರು. ಐಸಿಸಿ ಟಿ-20 ಬೌಲಿಂಗ್ ರ್ಯಾಂಕಿಂಗ್‍ನಲ್ಲಿ ನಂ. 1 ಸ್ಥಾನದಲ್ಲಿರುವ ನ್ಯೂಜಿಲೆಂಡ್‍ನ ಇಶ್ ಸೋಧಿ, ವೇಗದ ಬೌಲರ್ ಇಶಾಂತ್ ಶರ್ಮಾ, ಟಿಮ್ ಸೌಥಿ, ಮುರಳಿ ವಿಜಯ್, ಜಾಯ್ ರೂಟ್, ಹಿಮಾಂಶು ರಾಣಾ, ಮುಚೇಲ್ ಜಾನ್ಸನ್ ಮಾರಟವಾಗದೆ ಉಳಿದರು.

Advertisement
Advertisement