– ಮೊದಲ ಸ್ಥಾನಕ್ಕೆ ಆರ್‌ಸಿಬಿ ಹೈಜಂಪ್
ರಾಯ್‌ಪುರ: ಇಂಡಿಯನ್ ಪ್ರೀಮಿಯರ್ ಲೀಗ್ 2026ರ ಹೈ-ವೋಲ್ಟೇಜ್ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ತಂಡವು ಮುಂಬೈ ಇಂಡಿಯನ್ಸ್ (MI) ವಿರುದ್ಧ 2 ವಿಕೆಟ್‌ಗಳ ರೋಚಕ ಜಯ ದಾಖಲಿಸಿದೆ. ಅನುಭವಿ ವೇಗಿ ಭುವನೇಶ್ವರ್ ಕುಮಾರ್ ಅವರ ಆಲ್‌ರೌಂಡ್ ಪ್ರದರ್ಶನದ ಬಲದಿಂದ ಆರ್‌ಸಿಬಿ ಅಂಕಪಟ್ಟಿಯಲ್ಲಿ ಮೊದಲ ಸ್ಥಾನಕ್ಕೆ ಜಿಗಿದಿದೆ. ಮೊದಲ ಸ್ಥಾನಕ್ಕೆ ಜಿಗಿಯಲು ಕಾರಣವಾಗಿದ್ದು ಭುವನೇಶ್ವರ್ ಕುಮಾರ್(Bhuvneshwar Kumar) ಕೊನೆಯ ಓವರ್‌ನಲ್ಲಿ ಸಿಡಿಸಿದ ಸಿಕ್ಸ್ (Six) ಎನ್ನುವುದು ವಿಶೇಷ.
ಕೊನೆಯ 12 ಎಸೆತಗಳಲ್ಲಿ ಆರ್‌ಸಿಬಿ ಗೆಲ್ಲಲು 18 ರನ್ ಬೇಕಿತ್ತು. ಈ ಹಂತದಲ್ಲಿ ಆರ್‌ಸಿಬಿ ಸುಲಭವಾಗಿ ಗೆಲ್ಲಬಹುದು ಎಂಬ ನಿರೀಕ್ಷೆ ಇತ್ತು. ಆದರೆ ಯಾರ್ಕರ್ ಸ್ಪೆಷಲಿಸ್ಟ್ ಬುಮ್ರಾ 19ನೇ ಓವರ್‌ನಲ್ಲಿ ಕೇವಲ 3 ರನ್ ಮಾತ್ರ ನೀಡಿದ್ದರಿಂದ ಪಂದ್ಯ ಮುಂಬೈ ಕಡೆ ವಾಲಿ ರೋಚಕ ಘಟ್ಟಕ್ಕೆ ತಿರುಗಿತು.
WHAT ON EARTH HAVE WE JUST WITNESSED! 🤯
Bhuvneshwar Kumar & Rasikh Dar, take a bow ❤️
Updates ▶️ https://t.co/wYlCB10dhm#TATAIPL | #KhelBindaas | #RCBvMI | @RCBTweets pic.twitter.com/tqkuPMEsHR
— IndianPremierLeague (@IPL) May 10, 2026
ಕೊನೆಯ 6 ಎಸೆತಗಳಲ್ಲಿ 15 ರನ್ ಅಗತ್ಯವಿತ್ತು. ಸ್ಟೈಕ್‌ನಲ್ಲಿ ರೋಮಾರಿಯೋ ಶೆಫರ್ಡ್ ಇದ್ದರೆ ನಾನ್ ಸ್ಟ್ರೈಕ್‌ನಲ್ಲಿ ರಸೀಕ್ ಸಲಾಂ ಇದ್ದರು. ರಾಜಾ ಬಾವಾ ಎಸೆದ ಮೊದಲ ಎಸೆತ ವೈಡ್ ಆದರೆ ಎರಡನೇ ಎಸೆತ ನೋಬಲ್ ಆಗಿತ್ತು. ಈ ಎಸೆತದಲ್ಲಿ 1 ರನ್ ಓಡಿದ್ದರಿಂದ 2 ರನ್ ಬಂತು. ಫ್ರಿ ಹಿಟ್ ಎಸೆತದಲ್ಲಿ ರೋಮಾರಿಯೋ ಶೆಫರ್ಡ್ 1 ರನ್ ಪಡೆದಿದ್ದರಿಂದ ಕೊನೆಯ 5 ಎಸೆತಗಳಲ್ಲಿ11 ರನ್ ಬೇಕಿತ್ತು.
ಎರಡನೇ ಎಸೆತದಲ್ಲಿ ವೈಡ್ ಜೊತೆಗೆ 1 ರನ್ ಓಡಿದ್ದರಿಂದ 2 ರನ್ ಬಂತು. ಅಷ್ಟೇ ಅಲ್ಲದೇ ಸ್ಟ್ರೈಕ್‌ಗೆ ಶೆಫರ್ಡ್ ಬಂದರು. ಮೂರನೇ ಎಸೆತದಲ್ಲಿ ಶೆಫರ್ಡ್ ಬಲವಾಗಿ ಹೊಡೆಯಲು ಹೋಗಿ ಬ್ಯಾಕ್‌ವರ್ಡ್ ಪಾಯಿಂಟ್‌ನಲ್ಲಿ ತಿಲಕ್ ವರ್ಮಾಗೆ ಕ್ಯಾಚ್ ನೀಡಿ ಔಟಾದರು. ಇದನ್ನೂ ಓದಿ: ಕೊನೆ ಓವರ್‌ನಲ್ಲಿ ಭುವನೇಶ್ವರ್ ಸಿಕ್ಸರ್; ಆರ್‌ಸಿಬಿಗೆ 2 ವಿಕೆಟ್‌ಗಳ ರೋಚಕ ಜಯ- ಪ್ಲೇ ಆಫ್ ರೇಸ್‌ನಿಂದ ಮುಂಬೈ ಔಟ್
#RCB fans, how are the nerves now? 😅❤️
🎥 An 𝗮𝗯𝘀𝗼𝗹𝘂𝘁𝗲𝗹𝘆 𝗺𝗶𝗻𝗱-𝗯𝗹𝗼𝘄𝗶𝗻𝗴 finish in Raipur takes @RCBTweets to the 🔝 of the points table 🔢👏
Scorecard ▶️ https://t.co/wYlCB10dhm#TATAIPL | #KhelBindaas | #RCBvMI pic.twitter.com/BcYyHO01gB
— IndianPremierLeague (@IPL) May 10, 2026
ಕೊನೆಯ 3 ಎಸೆತದಲ್ಲಿ 10 ರನ್ ಬೇಕು. ಜೊತೆಗೆ ಸಿಕ್ಸ್ ಅಥವಾ ಬೌಂಡರ್ ಸಿಡಿಸುವುದು ಅನಿವಾರ್ಯವಾಗಿತ್ತು. ಭುವನೇಶ್ವರ್ ಕುಮಾರ್‌ಗೆ ಎಸೆದ ಮೊದಲ ಎಸೆತ ವೈಡ್ ಆಗಿತ್ತು. 4ನೇ ಎಸೆತವನ್ನು ಭುವಿ ಕವರ್ ಕಡೆಗೆ ಅಟ್ಟಿ ಸಿಕ್ಸ್ ಸಿಡಿಸುವ ಮೂಲಕ ಪಂದ್ಯಕ್ಕೆ ಯಾರೂ ಉಹಿಸಿದ ರೋಚಕ ತಿರುವು ನೀಡಿದರು. 5ನೇ ಎಸೆತದಲ್ಲಿ ಒಂಟಿ ರನ್ ಸಿಡಿಸಿದರು.
ಕೊನೆಯ ಎಸೆತದಲ್ಲಿ 2 ರನ್ ಅಗತ್ಯವಿತ್ತು. ಸ್ಟ್ರೈಕ್‌ನಲ್ಲಿ ರಸೀಕ್ ಸಲಾಂ ಬಲವಾಗಿ ಹೊಡೆಯಲು ಯತ್ನಿಸಿದರೂ ಬಾಲ್ ಬೌಲರ್ ಬಾವಾ ಕೈಗೆ ತಗುಲಿ ಲಾಂಗ್ ಆನ್ ಕಡೆಗೆ ಹೋಯಿತು. ಇಬ್ಬರು ಬ್ಯಾಟರ್‌ಗಳು 2 ರನ್ ಓಡಿದರು. ಅದರಲ್ಲೂ ರಸಿಕ್ ಎರಡನೇ ರನ್ ಓಡುವಾಗ ಡೈವ್ ಮಾಡಿ ಕ್ರೀಸ್ ತಲುಪಿ ಆರ್‌ಸಿಬಿಗೆ ಜಯವನ್ನು ತಂದುಕೊಟ್ಟರು. ಡೈವ್ ಸ್ವಲ್ಪ ತಪ್ಪಿದರೂ ರನೌಟ್ ಆಗುವ ಸಾಧ್ಯತೆ ಇತ್ತು. ಈ ಸೋಲಿನೊಂದಿಗೆ ಪ್ಲೇ ಆಫ್ ರೇಸ್‌ನಿಂದ ಮುಂಬೈ ನಿರ್ಗಮಿಸಿತು. ಇದನ್ನೂ ಓದಿ: ಕೇವಲ 13 ಎಸೆತಕ್ಕೆ ವೇಗದ ಅರ್ಧಶತಕ; ಜೈಸ್ವಾಲ್ ದಾಖಲೆ ಸರಿಗಟ್ಟಿದ ಉರ್ವಿಲ್
ದಶಕದ ಸಿಕ್ಸ್:
ಭುವಿಗೆ ಬ್ಯಾಟಿಂಗ್ ಸಿಗುವುದು ಬಹಳ ಕಡಿಮೆ. ಐಪಿಎಲ್‌ನಲ್ಲಿ ಇಲ್ಲಿಯವರೆಗೆ ಭುವನೇಶ್ವರ್ ಕುಮಾರ್ ಕೇವಲ 4 ಸಿಕ್ಸ್ ಸಿಡಿಸಿದ್ದಾರೆ. 2013, 2015, 2016ರಲ್ಲಿ ಸಿಕ್ಸ್ ಹೊಡೆದಿದ್ದರು. ಈಗ 10 ವರ್ಷದ ಬಳಿಕ ಸಿಕ್ಸ್ ಸಿಡಿಸುವ ಮೂಲಕ ಆರ್‌ಸಿಬಿಗೆ ರೋಚಕ ಗೆಲುವು ತಂದುಕೊಟ್ಟಿದ್ದಾರೆ.
Precision. Control. Class. 🎯
Bhuvneshwar Kumar sits atop the wicket charts with 21 scalps ❤️
Will he become the first bowler with three Purple Caps in #TATAIPL? 🟣👑#KhelBindaas | @BhuviOfficial pic.twitter.com/v70l42YUCJ
— IndianPremierLeague (@IPL) May 10, 2026
ಈ ಪಂದ್ಯದಲ್ಲಿ ಭುವಿ 2 ಎಸೆತಗಳಲ್ಲಿ 7 ರನ್ ಸಿಡಿಸುವ ಜೊತೆಗೆ 4 ಓವರ್ ಎಸೆದು 23 ರನ್ ನೀಡಿ ಅಮೂಲ್ಯ 4 ವಿಕೆಟ್ ಪಡೆದಿದ್ದರು. ರಿಯಾನ್ ರಿಕಲ್ಟನ್, ರೋಹಿತ್ ಶರ್ಮಾ, ಸೂರ್ಯಕುಮಾರ್ ಯಾದವ್, ತಿಲಕ್‌ವರ್ಮಾ ಅವರ ವಿಕೆಟ್ ಪಡೆದು ಮುಂಬೈ ರನ್ ಓಟಕ್ಕೆ ಕಡಿವಾಣ ಹಾಕಿದ್ದಕ್ಕೆ ಅರ್ಹವಾಗಿಯೇ ಪಂದ್ಯಶ್ರೇಷ್ಠ ಗೌರವಕ್ಕೆ ಪಾತ್ರವಾದರು. 2026 ರ ಟೂರ್ನಿಯಲ್ಲಿ 11 ಪಂದ್ಯವಾಡಿ 21 ವಿಕೆಟ್ ಪಡೆದಿರುವ ಭುವಿ ಈಗ ಪರ್ಪಲ್ ಕ್ಯಾಪ್ ಪಡೆದಿದ್ದಾರೆ.

