ಜೈಪುರ: ಶನಿವಾರ ನಡೆದ ಐಪಿಎಲ್ (IPL) ಪಂದ್ಯದಲ್ಲಿ ಗುಜರಾತ್ ಟೈಟಾನ್ಸ್(Gujarat Titans) ವಿರುದ್ಧ ಸೋತ ರಾಜಸ್ಥಾನ್ ರಾಯಲ್ಸ್(Rajasthan Royals) ಕೆಟ್ಟ ದಾಖಲೆಯೊಂದನ್ನು (Record) ಬರೆದಿದೆ.
ಜೈಪುರದ ಸವಾಯ್ ಮಾನ್ ಸಿಂಗ್ ಕ್ರೀಡಾಂಗಣದಲ್ಲಿ ನಡೆದ ಗುಜರಾತ್ ಟೈಟಾನ್ಸ್ ವಿರುದ್ಧದ ಪಂದ್ಯದಲ್ಲಿ ರಾಜಸ್ಥಾನ್ ಬೌಲರ್‌ಗಳು ಕಳಪೆ ಪ್ರದರ್ಶನ ನೀಡಿದ್ದರು. ಉತ್ತಮ ಬ್ಯಾಟಿಂಗ್ ಪ್ರದರ್ಶನ ನೀಡಿದ ಗುಜರಾತ್ ಟೈಟನ್ಸ್ 4 ವಿಕೆಟ್‌ಗಳ ನಷ್ಟಕ್ಕೆ 229 ರನ್‌ಗಳಿಸಿತು. ಜಿಟಿ ನೀಡಿದ್ದ ಬೃಹತ್ ರನ್‌ಗಳನ್ನು ಚೇಸ್ ಮಾಡಿದ ರಾಜಸ್ಥಾನ್ ಕೇವಲ 152 ರನ್‌ಗಳಿಗೆ ಆಲೌಟ್ ಆಗುವ ಮೂಲಕ ಸೋಲೊಪ್ಪಿಕೊಂಡಿತು.
ಬೇಡದ ದಾಖಲೆ ಏನದು?
ಈ ಕಳಪೆ ಪ್ರದರ್ಶನದಿಂದ ಈ ಐಪಿಎಲ್ ಸೀಸನ್‌ನಲ್ಲಿ ಏಳು ಬಾರಿ 200 ಕ್ಕೂ ಹೆಚ್ಚು ರನ್‌ಗಳನ್ನು ಬಿಟ್ಟುಕೊಟ್ಟ ಏಕೈಕ ತಂಡ ಎಂಬ ಬೇಡದ ದಾಖಲೆಗೆ ರಾಜಸ್ಥಾನ್ ರಾಯಲ್ಸ್ ಪಾತ್ರವಾಯಿತು.

ರಿಯಾನ್ ಪರಾಗ್ ಲಭ್ಯವಿಲ್ಲದ ಕಾರಣ ಯಶಸ್ವಿ ಜೈಸ್ವಾಲ್ ಈ ಪಂದ್ಯದಲ್ಲಿ ರಾಜಸ್ಥಾನ ತಂಡವನ್ನು ಮುನ್ನಡೆಸಿದ್ದರು. ಜೈಸ್ವಾಲ್ ಟಾಸ್ ಗೆದ್ದು ಮೊದಲು ಫೀಲ್ಡಿಂಗ್ ಆಯ್ಕೆ ಮಾಡಿಕೊಂಡರು. ಗುಜರಾತ್‌ನ ಆರಂಭಿಕರಾದ ಸಾಯಿ ಸುದರ್ಶನ್ (55) ಮತ್ತು ಶುಭ್ಮನ್ ಗಿಲ್ (84) ಉತ್ತಮ ಜೊತೆಯಾಟವಾಡಿದರು. ಈ ಮೂಲಕ ಟೈಟಾನ್ಸ್ ನಿಗದಿತ 20 ಓವರ್‌ಗಳಲ್ಲಿ 4 ವಿಕೆಟ್‌ಗಳ ನಷ್ಟಕ್ಕೆ 229 ರನ್‌ಗಳ ಬೃಹತ್ ಸ್ಕೋರ್ ಗಳಿಸಿತು. ರಾಜಸ್ಥಾನ್ ಬೌಲರ್‌ಗಳಲ್ಲಿ, ಬ್ರಿಜೇಶ್ ಶರ್ಮಾ 2 ವಿಕೆಟ್ ಪಡೆದರು ಆದರೆ 47 ರನ್‌ಗಳನ್ನು ಬಿಟ್ಟುಕೊಟ್ಟರು. ರವೀಂದ್ರ ಜಡೇಜಾ ಮತ್ತು ಯಶ್ ರಾಜ್ ಪುಂಜಾ ತಲಾ ಒಂದು ವಿಕೆಟ್ ಪಡೆದರು.
ರಾಜಸ್ಥಾನ ರಾಯಲ್ಸ್ ತಂಡಕ್ಕೆ ಇದು ಸತತ ಎರಡನೇ ಕಹಿ ಅನುಭವ. 2025 ರ ಸೀಸನ್‌ನಲ್ಲಿ ರಾಜಸ್ಥಾನ ಬೌಲರ್‌ಗಳು 14 ಪಂದ್ಯಗಳಲ್ಲಿ 7 ಬಾರಿ 200ಕ್ಕೂ ಹೆಚ್ಚು ರನ್‌ಗಳನ್ನು ಬಿಟ್ಟುಕೊಟ್ಟಿದ್ದರು. ಈ ಸೀಸನ್‌ನಲ್ಲಿ ಆಡಿದ 11 ಪಂದ್ಯಗಳಲ್ಲೇ ತಂಡ 7 ಬಾರಿ 200 ಕ್ಕೂ ಹೆಚ್ಚು ರನ್‌ಗಳನ್ನು ಬಿಟ್ಟುಕೊಟ್ಟಿದೆ.
ಐಪಿಎಲ್ ಇತಿಹಾಸದಲ್ಲಿ ಯಾವುದೇ ತಂಡ ಎರಡು ವಿಭಿನ್ನ ಸೀಸನ್‌ಗಳಲ್ಲಿ ಏಳು ಬಾರಿ 200ಕ್ಕೂ ಹೆಚ್ಚು ರನ್‌ಗಳನ್ನು ಬಿಟ್ಟುಕೊಟ್ಟಿಲ್ಲ. 2025 ರಲ್ಲಿ ಸನ್‌ರೈಸರ್ಸ್ ಹೈದರಾಬಾದ್, ಲಕ್ನೋ ಸೂಪರ್‌ಜೈಂಟ್ಸ್ ಮತ್ತು ಪಂಜಾಬ್ ಕಿಂಗ್ಸ್ ಸಹ ಈ ಬೇಡದ ಸಾಧನೆಯನ್ನು ದಾಖಲಿಸಿದ್ದರೂ, ರಾಜಸ್ಥಾನ ಸತತ ಎರಡು ವರ್ಷಗಳ ಕಾಲ ಈ ಕೆಟ್ಟ ದಾಖಲೆಯನ್ನು ಸಾಧಿಸಿದೆ.
ಈ ಸೀಸನ್‌ನಲ್ಲಿ ರಾಜಸ್ಥಾನ್ ರಾಯಲ್ಸ್ ಈಗಾಗಲೇ 11 ಪಂದ್ಯಗಳನ್ನು ಆಡಿದೆ. ಅದರಲ್ಲಿ 6 ಪಂದ್ಯಗಳಲ್ಲಿ ಗೆಲುವು ಸಾಧಿಸಿದ್ದು, 5 ಪಂದ್ಯಗಳಲ್ಲಿ ಸೋಲು ಕಂಡಿದೆ. ಸದ್ಯ ತಂಡವು ಪಾಯಿಂಟ್ಸ್ ಟೇಬಲ್‌ನಲ್ಲಿ ನಾಲ್ಕನೇ ಸ್ಥಾನದಲ್ಲಿದೆ.
ರಾಜಸ್ಥಾನ ಮಾತ್ರವಲ್ಲ ಈ ಹಿಂದೆ ಹಲವು ತಂಡಗಳು 7 ಬಾರಿ 200ಕ್ಕೂ ಹೆಚ್ಚು ರನ್‌ಗಳನ್ನು ಬಿಟ್ಟುಕೊಟ್ಟಿವೆ. ಸನ್‌ರೈಸರ್ಸ್ ಹೈದರಾಬಾದ್ (2024), ರಾಜಸ್ಥಾನ ರಾಯಲ್ಸ್ (2025), ಲಕ್ನೋ ಸೂಪರ್ ಜೈಂಟ್ಸ್ (2025), ಪಂಜಾಬ್ ಕಿಂಗ್ಸ್ (2025) ಒಂದೇ ಆವೃತ್ತಿಯಲ್ಲಿ 7 ಬಾರಿ 200ಕ್ಕೂ ಹೆಚ್ಚು ರನ್‌ಗಳನ್ನು ಬಿಟ್ಟುಕೊಟ್ಟಿವೆ.

