ಧರ್ಮಶಾಲಾ: ಸತತ ಸೋಲುಗಳಿಂದ ಕಂಗೆಟ್ಟಿರುವ ಪಂಜಾಬ್ ಕಿಂಗ್ಸ್ (PKBS) ತಂಡ ಇಂದು ಮುಂಬೈ ಇಂಡಿಯನ್ಸ್ (MI) ವಿರುದ್ಧ ಸೆಣಸಾಟ ನಡೆಸಲಿದೆ. ಟೂರ್ನಿಯ ಆರಂಭದಲ್ಲಿ ಉತ್ತಮ ಪ್ರದರ್ಶನ ನೀಡಿದ ಪಂಜಾಬ್ ನಾಲ್ಕು ಸೋಲುಗಳ ಬಳಿಕ ಈ ಪಂದ್ಯದಲ್ಲಿ ಗೆಲುವಿನ ಹಳಿಗೆ ಮರಳಲು ಪ್ರಯತ್ನಿಸುತ್ತಿದೆ.
ಇಂಡಿಯನ್ ಪ್ರೀಮಿಯರ್ ಲೀಗ್‌ನ 58ನೇ ಪಂದ್ಯ ಇಂದು ಹಿಮಾಚಲ ಪ್ರದೇಶ ಕ್ರಿಕೆಟ್ ಅಸೋಸಿಯೇಷನ್ ಕ್ರೀಡಾಂಗಣದಲ್ಲಿ ನಡೆಯಲಿದೆ. ಪ್ರಸ್ತುತ ಪಾಯಿಂಟ್ಸ್ ಟೇಬಲ್‌ನಲ್ಲಿ 13 ಅಂಕಗಳೊAದಿಗೆ ನಾಲ್ಕನೇ ಸ್ಥಾನದಲ್ಲಿರುವ ಶ್ರೇಯಸ್ ಐಯ್ಯರ್ ನೇತೃತ್ವದ ಪಂಜಾಬ್ ತಂಡ ಗೆಲುವಿನ ಹುಡುಕಾಟದಲ್ಲಿದೆ. ಮುಂಬೈ ಇಂಡಿಯನ್ಸ್ ತಂಡ 11 ಪಂದ್ಯಗಳಲ್ಲಿ ಕೇವಲ 6 ಅಂಕ ಮಾತ್ರ ಹೊಂದಿದ್ದು, ಈಗಾಗಲೇ ಅಧಿಕೃತವಾಗಿ ಟೂರ್ನಿಯಿಂದ ಹೊರಬಿದ್ದಿದ್ದು, ಔಪಚಾರಿಕ ಪಂದ್ಯವನ್ನಾಡಲಿದೆ.
ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ಹಾಗೂ ಗುಜರಾತ್ ಟೈಟಾನ್ಸ್ ತಂಡಗಳು ತಲಾ 16 ಪಾಯಿಂಟ್ಸ್ಗಳೊAದಿಗೆ ಈಗಾಗಲೇ ಪ್ಲೇ ಆಫ್ ಸ್ಥಾನ ಖಚಿತಪಡಿಸಿಕೊಂಡಿವೆ. ಪಂಜಾಬ್ ಕಿಂಗ್ಸ್ ಪ್ಲೇ ಆಫ್‌ಗೆ ಎಂಟ್ರಿ ಕೊಡಲು ಕನಿಷ್ಟ ಇನ್ನು ಎರಡು ಗೆಲವು ಅನಿವಾರ್ಯ. ಹಾಗಾಗಿ ಇಂದಿನ ಮುಂಬೈ ವಿರುದ್ಧದ ಪಂದ್ಯ ಪಿಬಿಕೆಎಸ್‌ಗೆ ನಿರ್ಣಾಯಕವಾಗಲಿದೆ. ಒಂದು ವೇಳೆ ಇಂದು ಪಂಜಾಬ್ ಕಿಂಗ್ಸ್ ಸೋತರೆ ಚೆನ್ನೈ ತಂಡಕ್ಕೆ ಪ್ಲೇ ಆಫ್ ಹಾದಿ ಸುಗಮವಾಗಲಿದೆ.
ಪಿಚ್ ರಿಪೋರ್ಟ್ ಹೇಗಿದೆ?
ಧರ್ಮಶಾಲಾ ಕ್ರೀಡಾಂಗಣ ಬ್ಯಾಟಿಂಗ್ ಸ್ನೇಹಿ ಪಿಚ್ ಆಗಿದ್ದು, ಸ್ಪಿನ್ ಬೌಲರ್‌ಗಳಿಗಿಂತಲೂ ವೇಗಿಗಳು ಅದರಲ್ಲೂ ಬೌನ್ಸರ್‌ಗಳಿಗೆ ಹೆಚ್ಚು ಸಹಕಾರಿಯಾಗಿದೆ. ಎರಡನೇ ಇನಿಂಗ್ಸ್ನಲ್ಲಿ ಇಬ್ಬನಿ ಮತ್ತು ಮಳೆ ಸಾಧ್ಯತೆ ಹೆಚ್ಚಿರುವುದರಿಂದ ಟಾಸ್ ಗೆದ್ದ ತಂಡ ಮೊದಲು ಬೌಲಿಂಗ್ ಆಯ್ಕೆ ಮಾಡಿಕೊಳ್ಳಬಹುದು.
ಪಂಜಾಬ್ ಕಿಂಗ್ಸ್ ಸಂಭವನೀಯ ಆಡುವ ತಂಡ:
ಪ್ರಿಯಾAಶ್ ಆರ್ಯ, ಪ್ರಬ್ಸಿಮ್ರಾನ್ ಸಿಂಗ್ (ವಿ.ಕೀ) ಕೂಪರ್ ಕೊನೊಲಿ, ಶ್ರೇಯಸ್ ಅಯ್ಯರ್ (ನಾಯಕ), ಮಾರ್ಕಸ್ ಸ್ಟೊಯಿನಿಸ್, ಸೂರ್ಯಾಂಶ್ ಶೆಡ್ಜ್, ಮಾರ್ಕೊ ಜಾನ್ಸೆನ್, ಲಾಕಿ ಫರ್ಗುಸನ್, ಅರ್ಷದೀಪ್ ಸಿಂಗ್, ಯಜುವೇಂದ್ರ ಚಹಲ್, ಯಶ್ ಠಾಕೂರ್.
ಮುಂಬೈ ಇಂಡಿಯನ್ಸ್ ಸಂಭವನೀಯ ಆಡುವ ತಂಡ:
ರಿಯಾನ್ ರಿಕೆಲ್ಟನ್ (ವಿ.ಕೀ) ನಮನ್ ಧೀರ್, ಸೂರ್ಯಕುಮಾರ್ ಯಾದವ್ (ನಾಯಕ), ತಿಲಕ್ ವರ್ಮಾ, ವಿಲ್ ಜಾಕ್ಸ್, ರಾಜ್ ಬಾವಾ, ಕಾರ್ಬಿನ್ ಬಾಷ್, ಶಾರ್ದೂಲ್ ಠಾಕೂರ್, ದೀಪಕ್ ಚಾಹರ್, ಗಜನ್ಫರ್, ಜಸ್ಪ್ರೀತ್ ಬುಮ್ರಾ.

