ಮುಂಬೈ: 2024ರ ಐಪಿಎಲ್‌ನಲ್ಲಿ ಅಮೋಘ ಪ್ರದರ್ಶನ ನೀಡಿದರೂ ವಿರೋಚಿತ ಸೋಲುಗಳಿಂದಲೇ ಪ್ಲೇ ಆಫ್ ನಿಂದ ದೂರ ಉಳಿದ ಪಂಜಾಬ್ ಕಿಂಗ್ಸ್ (PBKS) ಈ ಬಾರಿ ಕೇವಲ ಇಬ್ಬರು ಆಟಗಾರರನ್ನು ಮಾತ್ರ ಉಳಿಸಿಕೊಂಡಿದೆ.
🚨 PUNJAB KINGS WILL HAVE 110.5CR PURSE AT IPL 2025 MEGA AUCTION. 🚨 pic.twitter.com/OYK8xZXnJQ
— Mufaddal Vohra (@mufaddal_vohra) October 31, 2024
Advertisement
ಶಶಾಂಕ್ ಸಿಂಗ್ (Shashank Singh) ಅವರನ್ನು 5.5 ಕೋಟಿ ರೂ.ಗೆ ಹಾಗೂ ಆರಂಭಿಕ ಆಟಗಾರ ಪ್ರಭ್‌ಸಿಮ್ರನ್ ಸಿಂಗ್ (Prabhsimran Singh) ಅವರನ್ನು 4 ಕೋಟಿ ರೂ.ಗೆ ಧಾರಣೆ ಮಾಡಿಕೊಂಡಿದೆ. ಉಳಿದೆಲ್ಲ ಸ್ಟಾರ್ ಆಟಗಾರರನ್ನ ಹೊರದಬ್ಬಿದೆ. ಇದರಿಂದ ಪರ್ಸ್‌ನಲ್ಲಿ 110 ಕೋಟಿ ರೂ. ಬಾಕಿ ಉಳಿಸಿಕೊಂಡಿದೆ. ಇದನ್ನೂ ಓದಿ: IPL Retention | ಸಂಭಾವನೆ ಹೆಚ್ಚಿಸಿಕೊಂಡ ಕ್ಲಾಸೆನ್ – ಬರೋಬ್ಬರಿ 23 ಕೋಟಿ ರೂ.ಗೆ ರೀಟೆನ್
Advertisement
Advertisement
ದಾಖಲೆ ಬೆಲೆಯ ಆಟಗಾರ ಔಟ್:
2023ರ ಐಪಿಎಲ್‌ಗೆ ನಡೆದ ಮಿನಿ ಹರಾಜಿನಲ್ಲಿ ಪಂಜಾಬ್ ಕಿಂಗ್ಸ್ ಆವೃತ್ತಿಗೆ 18.50 ಕೋಟಿ ರೂ.ಗೆ ಬಿಕರಿಯಾಗಿದ್ದ ಆಲ್‌ರೌಂಡರ್ ಸ್ಯಾಮ್ ಕರ್ರನ್ (Sam Curran) ರಿಟೇನ್ ಪಟ್ಟಿಯಲ್ಲಿ ಸ್ಥಾನ ಪಡೆದುಕೊಳ್ಳಲು ವಿಫಲರಾಗಿದ್ದಾರೆ.
Advertisement
2022ರ ಟಿ20 ವಿಶ್ವಕಪ್ ಫೈನಲ್ ಪಂದ್ಯದಲ್ಲಿ ಆಲ್‌ರೌಂಡರ್ ಪ್ರದರ್ಶನ ನೀಡಿ ಗಮನ ಸೆಳೆದಿದ್ದ ಸ್ಯಾಮ್ ಕರ್ರನ್ ಅವರನ್ನು ಪಂಜಾಬ್ ಕಿಂಗ್ಸ್ 18.50 ಕೋಟಿ ರೂ.ಗೆ ಖರೀದಿ ಮಾಡಿತ್ತು. ಇದನ್ನೂ ಓದಿ: IPL Retention | ಕೆಕೆಆರ್‌ನಿಂದ ಸ್ಟಾರ್ಕ್, ಶ್ರೇಯಸ್ ಔಟ್ – ರಿಂಕು ಸಂಭಾವನೆ ಕೋಟಿ ಕೋಟಿ ಏರಿಕೆ!
2025 ರಿಂದ 2027ರ ಐಪಿಎಲ್ ಆವೃತ್ತಿಗಳಿಗೆ ಹೊಸ ನಿಯಮ ಘೋಷಣೆ ಮಾಡಿರುವ ಬಿಸಿಸಿಐ, ನವೆಂಬರ್ 24 ಮತ್ತು 25 ರಂದು ಸೌದಿ ಅರೇಬಿಯಾದ ರಿಯಾದ್‌ನಲ್ಲಿ ಮೆಗಾ ಹರಾಜು ನಡೆಸಲು ತೀರ್ಮಾನಿಸಿದೆ. ಇದನ್ನೂ ಓದಿ: IPL Retention | ಲಕ್ನೋದಿಂದ ರಾಹುಲ್ ಔಟ್ – ಪೂರನ್, ರಾಕೆಟ್ ವೇಗಿ ಮಯಾಂಕ್‌ಗೆ ಬಂಪರ್ ಗಿಫ್ಟ್