ತನ್ನ ಚೊಚ್ಚಲ ಐಪಿಎಲ್‌ನಲ್ಲೇ ಉದ್ಧಟತನ – ಒಂದು ಪಂದ್ಯಕ್ಕೆ ದಿಗ್ವೇಶ್ ಅಮಾನತು, ಭಾರೀ ದಂಡ

Public TV
1 Min Read
Digvesh Rathi

ಲಕ್ನೋ: ತನ್ನ ಚೊಚ್ಚಲ ಐಪಿಎಲ್‌ ಆವೃತ್ತಿಯಲ್ಲೇ ಉದ್ಧಟತನ ತೋರಿದ ಲಕ್ನೋ ಸೂಪರ್‌ ಜೈಂಟ್ಸ್‌ (LSG) ತಂಡದ ಆಟಗಾರ ದಿಗ್ವೇಶ್ ರಾಥಿಗೆ (Digvesh Rathi) ಐಪಿಎಲ್‌ ಮಂಡಳಿ ಬಿಸಿ ಮುಟ್ಟಿಸಿದೆ. .

ರಾಥಿ 2 ಹೆಚ್ಚುವರಿ ಡಿಮೆರಿಟ್‌ ಅಂಕ ಪಡೆದಿದ್ದಕ್ಕಾಗಿ 1 ಪಂದ್ಯದಿಂದ ಅಮಾನತುಗೊಳಿಸಿದೆ. ಅಲ್ಲದೇ ಸೋಮವಾರ ಸನ್‌ ರೈಸರ್ಸ್‌ ಹೈದರಾಬಾದ್‌ ವಿರುದ್ಧ ನಡೆದ ಪಂದ್ಯದಲ್ಲಿ ಅಭಿಷೇಕ್‌ ಶರ್ಮಾ (Abhishek Sharma) ಔಟಾದ ಬಳಿಕ ಉದ್ಧಟತನಕ್ಕಾಗಿ ತೋರಿ ಐಪಿಎಲ್‌ ನಿಯಮಗಳನ್ನು ಉಲ್ಲಂಘಿಸಿದ್ದಕ್ಕಾಗಿ ಪಂದ್ಯದ ಶೇ.50ರಷ್ಟು ಶುಲ್ಕವನ್ನು ದಂಡ ವಿಧಿಸಿದೆ. ಇನ್ನೂ ರಾಥಿ ಜೊತೆ ಮೈದಾನದಲ್ಲೇ ಜಗಳಕ್ಕಿಳಿದಿದ್ದ ಸನ್‌ರೈಸರ್ಸ್‌ ತಂಡದ ಆರಂಭಿಕ ಆಟಗಾರ ಅಭಿಷೇಕ್ ಶರ್ಮಾಗೆ ಪಂದ್ಯ ಶುಲ್ಕದ ಶೇ.25 ರಷ್ಟು ದಂಡ ವಿಧಿಸಲಾಗಿದೆ.

Digvesh Rathi 3

ಅಭಿ ಜೊತೆಗೆ ಕಿರಿಕ್‌ ಆಗಿದ್ದೇಕೆ?
ಸ್ಫೋಟಕ ಪ್ರದರ್ಶನ ನೀಡುತ್ತಿದ್ದ ಅಭಿಷೇಕ್ ಶರ್ಮಾ ವಿಕೆಟ್‌ ಪಡೆದ ದಿಗ್ವೇಶ್‌, ನೋಟ್‌ ಬುಕ್‌ ಸೆಲೆಬ್ರೇಷನ್‌ ಮಾಡಿದರು. ಇದೇ ವೇಳೆ ಹೊರ ನಡಿ ಎನ್ನುವಂತೆ ಕೈ ಸನ್ನೆ ತೋರಿಸಿದ್ರು. ದಿಗ್ವೇಶ್ ನಡೆಯಿಂದ ಕುಪಿತಗೊಂಡ ಅಭಿ ಪ್ರತ್ಯುತ್ತರ ನೀಡಲು ಮುಂದಾದರು. ಇಬ್ಬರ ನಡುವಣ ಜಗಳವು ತಾರಕ್ಕೇರುತ್ತಿದ್ದಂತೆ, ಅಂಪೈರ್ ಹಾಗೂ ಸಹ ಆಟಗಾರರು ಮಧ್ಯ ಪ್ರವೇಶಿಸಿ, ಪರಿಸ್ಥಿತಿ ತಿಳಿಗೊಳಿಸಿದ್ರು.

ಹಾಲಿ ಆವೃತ್ತಿಯಲ್ಲಿ ದಿಗ್ವೇಶ್ ರಾಥಿ ಆರ್ಟಿಕಲ್ 2.5ರ ಅಡಿಯಲ್ಲಿ ಮಾಡಿದ 3ನೇ ಹಂತದ ಅಪರಾಧ ಇದಾಗಿದ್ದು, ಈ ಬಾರಿ ಎರಡು ಡಿಮೆರಿಟ್ ಪಾಯಿಂಟ್‌ಗಳನ್ನು ಗಳಿಸಿದ್ದಾರೆ.

Digvesh Rathi 2

ಇದಕ್ಕೂ ಮುನ್ನ ಏ.1ರಂದು ಪಂಜಾಬ್ ಕಿಂಗ್ಸ್ ವಿರುದ್ಧ ಒಂದು ಮತ್ತು ಏಪ್ರಿಲ್ 4 ರಂದು ಮುಂಬೈ ಇಂಡಿಯನ್ಸ್ ವಿರುದ್ಧ ಎರಡು ಡಿಮೆರಿಟ್ ಪಾಯಿಂಟ್‌ಗಳನ್ನು ಗಳಿಸಿದ್ದಾರೆ. ಸದ್ಯ ದಿಗ್ವೇಶ್ ರಾಥಿ ಡಿಮೆರಿಟ್ ಪಾಯಿಂಟ್ 5 ಕ್ಕೇರಿದ್ದು, ಮೇ 22 ರಂದು ಅಹಮದಾಬಾದ್‌ನಲ್ಲಿ ಗುಜರಾತ್ ಟೈಟಾನ್ಸ್ ವಿರುದ್ಧದ ಪಂದ್ಯಕ್ಕೆ ಅಮಾನತುಗೊಂಡಿದ್ದಾರೆ.

Share This Article