ನವದೆಹಲಿ: ಡೆಲ್ಲಿ ಕ್ಯಾಪಿಟಲ್ಸ್ ತಂಡ ನೂತನ ಮುಖ್ಯಕೋಚ್ (Delhi Capitals Head Coach) ಆಗಿ ಹೇಮಂಗ್ ಬದಾನಿ (Hemang Badani) ಹಾಗೂ ಕ್ರಿಕೆಟ್ ನಿರ್ದೇಶಕರಾಗಿ ವೇಣುಗೋಪಾಲ್ ರಾವ್ ನೇಮಕಗೊಂಡಿದ್ದಾರೆ. ಈ ಬಗ್ಗೆ ಡೆಲ್ಲಿ ಕ್ಯಾಪಿಟಲ್ಸ್ ತಂಡ ಅಧಿಕೃತ ಘೋಷಣೆ ಮಾಡಿದೆ.
🚨𝐀𝐍𝐍𝐎𝐔𝐍𝐂𝐄𝐌𝐄𝐍𝐓🚨
We’re delighted to welcome Venugopal Rao & Hemang Badani in their roles as Director of Cricket (IPL) & Head Coach (IPL) respectively 🫡
Here’s to a new beginning with a roaring vision for success 🙌
Click here to read the full story 👇🏻… pic.twitter.com/yorgd2dXop
— Delhi Capitals (@DelhiCapitals) October 17, 2024
Advertisement
7 ಆವೃತ್ತಿ ಕಳೆದರೂ ಐಪಿಎಲ್ ಟ್ರೋಫಿ (IPL Trophy) ತಂದುಕೊಡುವಲ್ಲಿ ವಿಫಲರಾದ ರಿಕಿ ಪಾಟಿಂಗ್ (Ricky Ponting) ಅವರನ್ನು ಡೆಲ್ಲಿ ಕ್ಯಾಪಿಟಲ್ಸ್ ಫ್ರಾಂಚೈಸಿ ಮುಖ್ಯ ಕೋಚ್ ಹುದ್ದೆಯಿಂದ ವಜಾಗೊಳಿಸಿತ್ತು. ಈ ಬೆನ್ನಲ್ಲೇ ಮುಖ್ಯಕೋಚ್ ಹುದ್ದೆಗೆ ಸೌರವ್ ಗಂಗೂಲಿ ಅವರ ಹೆಸರು ಕೇಳಿಬಂದಿತ್ತು. ಆದ್ರೆ ಡೆಲ್ಲಿ ಕ್ಯಾಪಿಲಟ್ಸ್ ಫ್ರಾಂಚೈಸಿ ಅಚ್ಚರಿ ಎನ್ನುವಂತೆ ಹೇಮಂಗ್ ಬದಾನಿ ಅವರನ್ನು ಮುಖ್ಯಕೋಚ್ ಆಗಿ ನೇಮಕ ಮಾಡಿಕೊಂಡಿದೆ. ಅಲ್ಲದೇ ಸೌರವ್ ಗಂಗೂಲಿ ಅವರ ಬದಲಿಗೆ ಕ್ರಿಕೆಟ್ ನಿರ್ದೇಶಕರನ್ನಾಗಿ ವೇಣುಗೋಪಾಲ್ ರಾವ್ ಅವರನ್ನ ನೇಮಿಸಿಕೊಂಡಿದೆ. ಇದನ್ನೂ ಓದಿ: IPL ಟ್ರೋಫಿ ತಂದುಕೊಡದಿದ್ದಕ್ಕೆ ತಲೆದಂಡ – ಡೆಲ್ಲಿ ಕ್ಯಾಪಿಟಲ್ಸ್ ಕೋಚ್ ಹುದ್ದೆಯಿಂದ ರಿಕಿ ಪಾಂಟಿಂಗ್ಗೆ ಕೊಕ್!
Advertisement
Advertisement
47 ವರ್ಷವಯಸ್ಸಿನ ಹೇಮಂಗ್ ಬದಾನಿ ಟೀಂ ಇಂಡಿಯಾದಲ್ಲಿ 4 ಟೆಸ್ಟ್ ಹಾಗೂ 40 ಏಕದಿನ ಪಂದ್ಯಗಳನ್ನಾಡಿದ ಅನುಭವ ಹೊಂದಿದ್ದಾರೆ. ಅಲ್ಲದೇ 2021-23 ರವರೆಗೆ ಸನ್‌ರೈಸರ್ಸ್ ಹೈದರಾಬಾದ್ ತಂಡದ ಫೀಲ್ಡಿಂಗ್ ಕೋಚ್ ಆಗಿ ಕಾರ್ಯ ನಿರ್ವಹಿಸಿದ್ದಾರೆ. ಲಂಕಾ ಪ್ರೀಮಿಯರ್ ಲೀಗ್‌ನಲ್ಲಿ ಜಾಫ್ನಾ ಕಿಂಗ್ಸ್ ಫ್ರಾಂಚೈಸಿ ಕೋಚ್ ಆಗಿ ಬ್ಯಾಕ್ ಟು ಬ್ಯಾಕ್ 2 ಪ್ರಶಸ್ತಿಗಳನ್ನ ತಂದುಕೊಟ್ಟಿದ್ದಾರೆ. ಇದನ್ನೂ ಓದಿ: ಕಿವೀಸ್ ವೇಗಿಗಳ ಆರ್ಭಟ; 46ಕ್ಕೆ ಭಾರತ ಆಲೌಟ್ – ಕೆಟ್ಟ ದಾಖಲೆ ಹೆಗಲಿಗೇರಿಸಿಕೊಂಡ ಟೀಂ ಇಂಡಿಯಾ
Advertisement
SA20 ಲೀಗ್‌ನ ಉದ್ಘಾಟನಾ ಆವೃತ್ತಿಯಲ್ಲೇ ಸನ್‌ರೈಸರ್ಸ್ ಈಸ್ಟರ್ನ್ ಕೇಪ್ ತಂಡದ ಬ್ಯಾಟಿಂಗ್ ಕೋಚ್ ಆಗಿ ಪ್ರಶಸ್ತಿ ಗೆದ್ದುಕೊಡುವಲ್ಲಿ ಯಶಸ್ವಿಯಾಗಿದ್ದರು. ಜೊತೆಗೆ ಈ ವರ್ಷದ ILT20 ನಲ್ಲಿ ದುಬೈ ಕ್ಯಾಪಿಟಲ್ಸ್ ತಂಡದ ಮುಖ್ಯ ಕೋಚ್ ಆಗಿದ್ದರು. ಇವರ ನೇತೃತ್ವದಲ್ಲೇ ದುಬೈ ಕ್ಯಾಪಿಟಲ್ಸ್ ತಂಡ ಫೈನಲ್ ತಲುಪಿತ್ತು. ಇದೀಗ ಡೆಲ್ಲಿ ಕ್ಯಾಪಿಟಲ್ಸ್ ಮುಖ್ಯಕೋಚ್ ಆಗಿ ನೇಮಕಗೊಂಡಿದ್ದಾರೆ.
ಈ ಬಗ್ಗೆ ಹರ್ಷ ವ್ಯಕ್ತಪಡಿಸಿರುವ ಬದಾನಿ, ದೆಹಲಿ ಕ್ಯಾಪಿಟಲ್ಸ್ ಫ್ರಾಂಚೈಸಿ ಸೇರುತ್ತಿರುವುದು ನನಗೆ ಹೆಮ್ಮೆ ಎನಿಸಿದೆ. ನನ್ನ ಮೇಲೆ ನಂಬಿಕೆ ಇಟ್ಟಿದ್ದಕ್ಕಾಗಿ ನಮ್ಮ ಮಾಲೀಕರಿಗೆ ನಾನು ತುಂಬಾ ಕೃತಜ್ಞನಾಗಿದ್ದೇನೆ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ನ್ಯೂಜಿಲೆಂಡ್ ವಿರುದ್ಧದ ಪಂದ್ಯದಲ್ಲಿ ಬರೋಬ್ಬರಿ 8 ಕ್ಯಾಚ್ ಬಿಟ್ಟ ಪಾಕ್ – ಚರ್ಚೆ ಹುಟ್ಟುಹಾಕಿದ ಕಳಪೆ ಫೀಲ್ಡಿಂಗ್
ಇದಕ್ಕೂ ಮುನ್ನ ರಿಕಿ ಪಾಂಟಿಂಗ್ ಡೆಲ್ಲಿ ಕ್ಯಾಪಿಟಲ್ಸ್ ತಂಡದ ಮುಖ್ಯಕೋಚ್ ಆಗಿದ್ದರು. ಆಸ್ಟ್ರೇಲಿಯಾ ತಂಡದ ಮಾಜಿ ನಾಯಕರೂ ಆಗಿರುವ ರಿಕಿ ಪಾಂಟಿಂಗ್ ಕಳೆದ 7 ಆವೃತ್ತಿಗಳಿಂದ ಡೆಲ್ಲಿ ಕ್ಯಾಪಿಟಲ್ಸ್ ಮುಖ್ಯಕೋಚ್ ಆಗಿ ಸೇವೆ ಸಲ್ಲಿಸುತ್ತಿದ್ದರು. ಡೆಲ್ಲಿ ಕ್ಯಾಪಿಟಲ್ಸ್ ಸೇರುವ ಮುನ್ನ ಪಾಂಟಿಂಗ್ ಮುಂಬೈ ಇಂಡಿಯನ್ಸ್ ತಂಡವನ್ನು ಮುನ್ನಡೆಸಿದ್ದರು. 2020ರಲ್ಲಿ ಪಾಂಟಿಂಗ್ ಅವರ ಸಾರಥ್ಯದಲ್ಲೇ ಡೆಲ್ಲಿ ತಂಡ ಫೈನಲ್ ಪ್ರವೇಶಿಸಿತ್ತು. ಆದ್ರೆ ಮುಂಬೈ ಇಂಡಿಯನ್ಸ್ (Mumbai Indians) ವಿರುದ್ಧ ಸೋತು ಪ್ರಶಸ್ತಿ ಗೆಲ್ಲಲು ವಿಫಲವಾಯಿತು.