– ಸೋಲಿನ ಬಳಿಕ ನಾಯಕ ಫಾಫ್ ಡು ಪ್ಲೆಸಿಸ್ ಹೇಳಿದ್ದೇನು?
ಕೋಲ್ಕತ್ತಾ: ಇಲ್ಲಿನ ಈಡನ್ ಗಾರ್ಡನ್‌ನಲ್ಲಿ ಕೆಕೆಆರ್ ವಿರುದ್ಧ ನಡೆದ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ 1 ರನ್ ವಿರೋಚಿತ ಸೋಲಿಗೆ ತುತ್ತಾಯಿತು. ಆದ್ರೆ ಈ ಪಂದ್ಯದಲ್ಲಿ ಆರ್‌ಸಿಬಿ ತಂಡ 20 ರನ್ ಹೆಚ್ಚುವರಿಯಾಗಿ ಬಿಟ್ಟುಕೊಟ್ಟಿದ್ದೇ ಸೋಲಿಗೆ ಕಾರಣವಾಯ್ತಾ ಅನ್ನೋ ಪ್ರಶ್ನೆ ಹುಟ್ಟಿಕೊಂಡಿದೆ. ಅಲ್ಲದೇ ಇಂದಿನ ಸೋಲಿಗೆ ಕಾರಣಗಳೇನು ಎಂಬುದನ್ನು ಅಭಿಮಾನಿಗಳು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಳ್ಳುತ್ತಿದ್ದಾರೆ.
Advertisement
ಕೆಕೆಆರ್‌ಗೆ 20 ರನ್ ಎಕ್ಸ್‌ಟ್ರಾ ಲಾಭವಾಯ್ತಾ?
ಹೌದು. ಆರಂಭದಲ್ಲಿ ರನ್ ಚಚ್ಚಿಸಿಕೊಂಡರೂ ಬಳಿಕ ಬಿಗಿ ಹಿಡಿತ ಸಾಧಿಸಲು ಮುಂದಾಗಿದ್ದ ಆರ್‌ಸಿಬಿ ಬೌಲರ್‌ಗಳು ಬಳಿಕ ವೈಡ್, ನೋಬಾಲ್, ಲೆಗ್ ಬೈಸ್‌ಗಳ ಮೂಲಕ ರನ್ ಬಿಟ್ಟುಕೊಟ್ಟರು. ಬೈಸ್, ಲೆಗ್‌ಬೈಸ್, ನೋಬಾಲ್ ಹಾಗೂ ವೈಡ್ ಮೂಲಕ ಕ್ರಮವಾಗಿ 4,7,2,7 ರನ್‌ಗಳನ್ನು ಬಿಟ್ಟುಕೊಟ್ಟರು. ಪರಿಣಾಮ ಕೆಕೆಆರ್ 220 ರನ್‌ಗಳ ಗಡಿ ದಾಟಲು ಸಾಧ್ಯವಾಯಿತು. ಇದನ್ನೂ ಓದಿ: ಇಂಪ್ಯಾಕ್ಟ್ ಪ್ಲೇಯರ್ ನಿಯಮಕ್ಕೆ ರೋಹಿತ್ ವಿರೋಧ; ಬಿಸಿಸಿಐ ಹೇಳಿದ್ದೇನು? – ಏನಿದು ಇಂಪ್ಯಾಕ್ಟ್ ಪ್ಲೇಯರ್ ರೂಲ್ಸ್?
Advertisement
Advertisement
2 ಓವರ್‌ನಲ್ಲಿ 38 ರನ್ ಕೊಟ್ಟ ಯಶ್ ದಯಾಳ್:
200 ರನ್‌ಗಳ ಒಳಗೆ ಕೆಕೆಆರ್ ತಂಡವನ್ನು ಕಟ್ಟಿಹಾಕುವ ಪ್ರಯತ್ನದಲ್ಲಿದ್ದ ಆರ್‌ಸಿಬಿಗೆ ಯಶ್ ದಯಾಳ್ ದುಬಾರಿಯಾದರು. 16 ಓವರ್ ಮುಕ್ತಾಯಕ್ಕೆ ಕೆಕೆಆರ್ 5 ವಿಕೆಟ್‌ಗೆ 155 ರನ್ ಗಳಿಸಿತ್ತು. ಆದ್ರೆ 17ನೇ ಓವರ್‌ನಲ್ಲೇ ಯಶ್ ದಯಾಳ್, 2 ವೈಡ್, ನೋಬಾಲ್, ಬೈಸ್ ಮಾತ್ರವಲ್ಲದೇ ಸಿಕ್ಸರ್-ಬೌಂಡರಿ ಚಚ್ಚಿಸಿಕೊಂಡು 22 ರನ್ ಬಿಟ್ಟುಕೊಟ್ಟರು. ಅಲ್ಲದೇ 19ನೇ ಓವರ್‌ನಲ್ಲಿ ಮೊಹಮ್ಮದ್ ಸಿರಾಜ್ ಸಿಕ್ಸರ್-ಬೌಂಡರಿ, ವೈಡ್ ಮೂಲಕ 20 ರನ್ ಬಿಟ್ಟುಕೊಟ್ಟರು. ಬಳಿಕ ಕೊನೇ ಓವರ್‌ನಲ್ಲೇ ಯಶ್ ದಯಾಳ್ ಮತ್ತೆ 16 ರನ್ ಚಚ್ಚಿಸಿಕೊಂಡರು. ಇದು ಆರ್‌ಸಿಬಿ ತಂಡಕ್ಕೆ ದುಬಾರಿಯಾಯಿತು. ಇದನ್ನೂ ಓದಿ: ಟಿ20 ವಿಶ್ವಕಪ್: ಐರ್ಲೆಂಡ್, ಸ್ಕಾಟ್ಲೆಂಡ್ ತಂಡಗಳಿಗೆ ಕರ್ನಾಟಕದ ‘ನಂದಿನಿ’ ಪ್ರಯೋಜಕತ್ವ
Advertisement
2023ರ ಐಪಿಎಲ್‌ನಲ್ಲಿ ಗುಜರಾತ್ ಟೈಟಾನ್ಸ್ ತಂಡದಲ್ಲಿದ್ದ ಯಶ್ ದಯಾಳ್ ಇದೇ ರೀತಿ ತಂಡದ ಸೋಲಿಗೆ ಕಾರಣವಾಗಿದ್ದರು. ಕೊನೇ ಓವರ್‌ನಲ್ಲಿ 29 ರನ್ ಬೇಕಿದ್ದಾಗ ರಿಂಕು ಸಿಂಗ್ ಅವರಿಂದ ಸತತ 5 ಸಿಕ್ಸರ್ ಚಚ್ಚಿಸಿಕೊಂಡಿದ್ದರು. ಇದನ್ನೂ ಓದಿ: ಕೊನೇ ಓವರ್‌ನಲ್ಲಿ 6,6,6; ಹೋರಾಡಿ ಸೋತ ಆರ್‌ಸಿಬಿ – ಕೆಕೆಆರ್‌ಗೆ 1 ರನ್ ರೋಚಕ ಜಯ
ಅಬ್ಬರಿಸದ ಡಿಕೆ, ಕೈಕೊಟ್ಟ ಗ್ರೀನ್:
ಹಿಂದಿನ ಪಂದ್ಯದಲ್ಲಿ ಸನ್ ರೈಸರ್ಸ್ ಹೈದರಾಬಾದ್ ವಿರುದ್ಧ 35 ಎಸೆತಗಳಲ್ಲಿ ಸ್ಫೋಟಕ 85 ರನ್ ಚಚ್ಚಿದ್ದ ದಿನೇಶ್ ಕಾರ್ತಿಕ್ ಕೆಕೆಆರ್ ಪರ ಅಬ್ಬರಿಸುವಲ್ಲಿ ವಿಫಲರಾದರು. 18 ಎಸೆತಗಳಲ್ಲಿ 25 ರನ್ ಗಳಿಸಿ ಔಟಾದರು. ಅಲ್ಲದೇ ದುಬಾರಿ ಬೆಲೆಗೆ ಆರ್‌ಸಿಬಿ ತಂಡಕ್ಕೆ ಬಿಕರಿಯಾದ ಕ್ಯಾಮರೂನ್ ಗ್ರೀನ್ ಕೇವಲ 6 ರನ್ ಗಳಿಸಿ ಪೆವಿಲಿಯನ್‌ಗೆ ಮರಳಿದರು. ಇದು ತಂಡದ ಸೋಲಿಗೆ ಕಾರಣವಾಯಿತು.
ಪಂದ್ಯದ ಸೋಲಿನ ಬಳಿಕ ಪೋಸ್ಟ್ ಪ್ರೆಸೆಂಟೇಷನ್‌ನಲ್ಲಿ ಮಾತನಾಡಿದ ನಾಯಕ ಫಾಫ್ ಡು ಪ್ಲೆಸಿಸ್, ನಾವು ಗೆಲುವಿನ ಹಾದಿಗೆ ಮರಳಲು ಹತಾಶರಾಗಿದ್ದೇವೆ. ನಮಗೆ ನಂಬಲಸಾಧ್ಯವಾದ ಅಭಿಮಾನಿ ಬಳಗವಿದೆ. ಪ್ರತಿ ಪಂದ್ಯದಲ್ಲೂ ಗೆದ್ದರೂ ಸೋತರೂ ʻಆರ್‌ಸಿಬಿ, ಆರ್‌ಸಿಬಿ ಘೋಷಣೆ ಮೊಳಗುತ್ತಲೇ ಇರುತ್ತದೆ. ಆದರೀಗ ನಮ್ಮ ಅಭಿಮಾನಿಗಳು ಹೆಮ್ಮೆಪಡುವಂತೆ ಮಾಡುದರಲ್ಲೂ ನಾವು ವಿಫಲರಾಗಿದ್ದೇವೆ ಎಂದು ಬೇಸರ ಹೊರಹಾಕಿದ್ದಾರೆ.
ಟಾಸ್ ಸೋತು ಮೊದಲು ಫೀಲ್ಡಿಂಗ್‌ಗೆ ಇಳಿದ ಆರ್‌ಸಿಬಿ ಬ್ಯಾಟಿಂಗ್ ಮಾಡುವ ಅವಕಾಶವನ್ನು ಕೋಲ್ಕತ್ತಾ ನೈಟ್‌ರೈಡರ್ಸ್‌ಗೆ ಬಿಟ್ಟುಕೊಟ್ಟಿತು. ಮೊದಲು ಬ್ಯಾಟಿಂಗ್ ಮಾಡಿದ ಕೆಕೆಆರ್ ತಂಡ 20 ಓವರ್‌ಗಳಲ್ಲಿ 6 ವಿಕೆಟ್ ನಷ್ಟಕ್ಕೆ ಬರೋಬ್ಬರಿ 222 ರನ್ ಬಾರಿಸಿತ್ತು. 223 ರನ್‌ಗಳ ಬೃಹತ್ ಮೊತ್ತದ ಗುರಿ ಬೆನ್ನತ್ತಿದ ಆರ್‌ಸಿಬಿ 20 ಓವರ್‌ಗಳಲ್ಲಿ 9 ವಿಕೆಟ್ ನಷ್ಟಕ್ಕೆ 221 ರನ್ ಗಳಿಸಿ ವಿರೋಚಿತ ಸೋಲನುಭವಿಸಿತು.
ಕೊನೇ ಓವರ್ ಥ್ರಿಲ್ಲರ್:
223 ರನ್‌ಗಳ ಬೃಹತ್ ಮೊತ್ತದ ಗುರಿ ಬೆನ್ನತ್ತಿದ ಆರ್‌ಸಿಬಿ ಗೆಲುವಿಗೆ ಕೊನೇ ಓವರ್‌ನಲ್ಲಿ 21 ರನ್ ಅಗತ್ಯವಿತ್ತು. ಮಿಚೆಲ್ ಸ್ಟಾರ್ಕ್ ಬೌಲಿಂಗ್‌ನಲ್ಲಿದ್ದರು. ಈ ವೇಳೆ ಕ್ರೀಸ್‌ನಲ್ಲಿದ್ದ ಕರ್ಣ್ ಶರ್ಮಾ (Karn Sharma) ಮೊದಲ ಎಸೆತದಲ್ಲೇ ಸಿಕ್ಸರ್ ಬಾರಿಸಿದ್ರು. 2ನೇ ಎಸೆತದಲ್ಲಿ ರನ್ ಗಳಿಸುವಲ್ಲಿ ವಿಫಲರಾದರೂ 3-4ನೇ ಎಸೆತಗಳನ್ನು ಸತತವಾಗಿ ಸಿಕ್ಸರ್‌ಗೆ ಅಟ್ಟಿದರು. ಈ ವೇಳೆ ಪಂದ್ಯ ರೋಚಕ ಹಂತಕ್ಕೆ ತಿರುಗಿತ್ತು. ಡಗೌಟ್‌ನಲ್ಲಿದ್ದ ಆಟಗಾರರು ಮಾತ್ರವಲ್ಲದೇ ಅಭಿಮಾನಿಗಳಲ್ಲೂ ಹೃದಯ ಬಡಿತ ಹೆಚ್ಚಾಗಿತ್ತು. ಮೈ ರೋಮಾಂಚನಗೊಳಿಸುವಂತಿತ್ತು. ಆದ್ರೆ ಕೊನೇ 2 ಎಸೆತಗಳಲ್ಲಿ ಮೂರು ರನ್‌ಗಳ ಬೇಕಿದ್ದಾಗಲೇ ಕರ್ಣ್ ಶರ್ಮಾ 1 ರನ್ ಕದಿಯಲು ಯತ್ನಿಸಿ ಸ್ಟಾರ್ಕ್‌ಗೆ (Mitchell Starc) ಕ್ಯಾಚ್ ನೀಡಿ ಔಟಾದರು. ಕೊನೇ ಎಸೆತದಲ್ಲಿ ಸ್ಟ್ರೈಕ್ ಮಾಡಿದ ಲಾಕಿ ಫರ್ಗೂಸನ್ 2 ರನ್ ಕದಿಯಲು ಯತ್ನಿಸಿ ರನೌಟ್‌ಗೆ ತುತ್ತಾದರು. ಇದರಿಂದ ಆರ್‌ಸಿಬಿ 1 ರನ್‌ನಿಂದ ವಿರೋಚಿತ ಸೋಲಿಗೆ ತುತ್ತಾಯಿತು.