IPL 2024: ಕಳೆದ 6 ವರ್ಷಗಳಲ್ಲಿ ಕ್ವಾಲಿಫೈಯರ್-1 ಗೆದ್ದೋರೇ ಚಾಂಪಿಯನ್!

Public TV
2 Min Read
KKR

– ಸಾಧಕರ ಎಲೈಟ್‌ ಲಿಸ್ಟ್‌ ಸೇರಿದ ಕೆಕೆಆರ್‌
– ಆರ್‌ಸಿಬಿ ಹೊಗಳಿದ ಆಂಡ್ರೆ ರಸ್ಸೆಲ್‌

ಅಹಮದಾಬಾದ್‌: ಸನ್‌ ರೈಸರ್ಸ್‌ ಹೈದರಾಬಾದ್‌ ವಿರುದ್ಧ 8 ವಿಕೆಟ್‌ಗಳ ಭರ್ಜರಿ ಗೆಲುವು ಸಾಧಿಸಿ 4ನೇ ಬಾರಿಗೆ ಫೈನಲ್‌ಗೆ ಲಗ್ಗೆಯಿಟ್ಟಿರುವ ಕೋಲ್ಕತ್ತಾ ನೈಟ್‌ ರೈಡರ್ಸ್‌ ತಂಡ ಈ ಬಾರಿ ಟ್ರೋಫಿ ಮುಡಿಗೇರಿಸಿಕೊಳ್ಳಲಿದೆ ಎಂದು ಕ್ರಿಕೆಟ್‌ ತಜ್ಞರು ಭವಿಷ್ಯ ನುಡಿದಿದ್ದಾರೆ. ಏಕೆಂದರೆ ಕಳೆದ 6 ವರ್ಷಗಳಲ್ಲಿ ನಡೆದ ಐಪಿಎಲ್‌ ಆವೃತ್ತಿಗಳಲ್ಲಿ ಐಪಿಎಲ್‌ ಕ್ವಾಲಿಫೈರ್‌-1 ನಲ್ಲಿ ಗೆದ್ದ ತಂಡಗಳೇ ಚಾಂಪಿಯನ್‌ ಪಟ್ಟ ಮುಡಿಗೇರಿಸಿಕೊಂಡಿರುವುದು ಇದಕ್ಕೆ ಸಾಕ್ಷಿಯಾಗಿದೆ.

2018ರಲ್ಲಿ ಚೆನ್ನೈ ಸೂಪರ್‌ ಕಿಂಗ್ಸ್‌, 2019 ಮತ್ತು 2020ರಲ್ಲಿ ಮುಂಬೈ ಇಂಡಿಯನ್ಸ್‌, 2021ರಲ್ಲಿ ಸಿಎಸ್‌ಕೆ, 2022ರಲ್ಲಿ ಗುಜರಾತ್‌ ಟೈಟಾನ್ಸ್‌, 2023ರಲ್ಲಿ ಸಿಎಸ್‌ಕೆ ತಂಡಗಳು ಕ್ವಾಲಿಫೈಯರ್‌-1ನಲ್ಲಿ ಗೆಲುವು ಸಾಧಿಸಿ ಚಾಂಪಿಯನ್‌ ಪಟ್ಟವನ್ನು ತಮ್ಮದಾಗಿಸಿಕೊಂಡಿವೆ. ಇದೀಗ 17ನೇ ಆವೃತ್ತಿಯ ಕ್ವಾಲಿಫೈಯರ್‌-1 ನಲ್ಲಿ ಗೆದ್ದು ಫೈನಲ್‌ ಪ್ರವೇಶಿಸಿರುವ ಕೆಕೆಆರ್‌ ಚಾಂಪಿಯನ್‌ ಪಟ್ಟಕ್ಕೆ ಕೊರಳೊಡ್ಡಲಿದೆಯೇ ಎಂಬುದನ್ನು ಕಾದುನೋಡಬೇಕಿದೆ. ಇದನ್ನೂ ಓದಿ: ರಾಜಸ್ಥಾನ್‌ಗೆ ಇಂದು ರಾಯಲ್‌ ಚಾಲೆಂಜ್‌ – ಮೋದಿ ಅಂಗಳದಲ್ಲಿ ಬೆಂಗಳೂರು ಬಾಯ್ಸ್‌ ಕೈಹಿಡಿಯುತ್ತಾ ಗೆಲುವು?

KKR 2

ದಿಗ್ಗಜ ತಂಡಗಳ ಎಲೈಟ್‌ ಪಟ್ಟಿ ಸೇರಿದ ಕೆಕೆಆರ್‌:
17ನೇ ಆವೃತ್ತಿಯಲ್ಲಿ ನಾಲ್ಕನೇ ಬಾರಿಗೆ ಫೈನಲ್‌ ಪ್ರವೇಶಿಸಿರುವ ಕೋಲ್ಕತ್ತಾ ನೈಟ್‌ ರೈಡರ್ಸ್‌ ತಂಡವು ಹೆಚ್ಚು ಬಾರಿ ಐಪಿಎಲ್‌ ಫೈನಲ್‌ ಪ್ರವೇಶಿಸಿದ ತಂಡಗಳ ಎಲೈಟ್‌ ಪಟ್ಟಿ ಸೇರಿದೆ. ಈ ಪಟ್ಟಿಯಲ್ಲಿ ಸಿಎಸ್‌ಕೆ ಅಗ್ರಸ್ಥಾನದಲ್ಲಿದೆ. ಸಿಎಸ್‌ಕೆ 10 ಬಾರಿ ಫೈನಲ್‌ ಪ್ರವೇಶಿಸಿದ್ದರೆ ಮುಂಬೈ 6 ಬಾರಿ, ಕೋಲ್ಕತ್ತಾ ನೈಟ್‌ರೈಡರ್ಸ್‌ 4 ಬಾರಿ ಹಾಗೂ ಆರ್‌ಸಿಬಿ 3 ಬಾರಿ ಫೈನಲ್‌ ಪ್ರವೇಶಿಸಿದ ತಂಡಗಳಾಗಿವೆ. ಇದನ್ನೂ ಓದಿ: ಆರ್‌ಸಿಬಿಗಾಗಿ ಬಿಡ್‌ ಮಾಡಿದಾಗ, ನನ್ನಿಂದ ಉತ್ತಮ ಆಯ್ಕೆ ಸಾಧ್ಯವಿಲ್ಲವೆಂದು ನನ್ನ ಆಂತರಿಕ ಪ್ರವೃತ್ತಿ ಹೇಳ್ತಿತ್ತು: ಮಲ್ಯ

KKR 3

ಆರ್‌ಸಿಬಿ ಹೊಗಳಿದ ರಸ್ಸೆಲ್‌:
ಇನ್ನೂ ಕೆಕೆಆರ್‌ ಗೆಲುವಿನ ನಂತರ ಪೋಸ್ಟ್‌ ಪ್ರೆಸೆಂಟೇಷನ್‌ನಲ್ಲಿ ಮಾತನಾಡಿದ ಆಲ್‌ರೌಂಡರ್‌ ಆಂಡ್ರೆ ರಸ್ಸೆಲ್‌, ಪ್ಲೇ ಆಫ್‌ ಪ್ರವೇಶಿಸಿರುವ ಆರ್‌ಸಿಬಿ ತಂಡವನ್ನ ಹೊಗಳಿದ್ದಾರೆ. ಆರ್‌ಸಿಬಿ ಉತ್ತಮ ಕ್ರಿಕೆಟ್‌ ಆಡುತ್ತಿದೆ. ಅವರ ಆಟದಲ್ಲಿ ವೇಗವನ್ನು ಕಂಡುಕೊಂಡಿದೆ. ನಾವು ಫೈನಲ್‌ನಲ್ಲಿ ಯಾವುದೇ ತಂಡವನ್ನು ಎದುರಿಸಲು ಸಿದ್ಧರಿದ್ದೇವೆ ಎಂದು ನುಡಿದಿದ್ದಾರೆ.

RCB 2

ಸೋಮವಾರ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ಟಾಸ್‌ ಗೆದ್ದು ಮೊದಲು ಬ್ಯಾಟಿಂಗ್‌ ಮಾಡಿದ ಸನ್‌ ರೈಸರ್ಸ್‌ ತಂಡವು 159 ರನ್‌ ಬಾರಿಸಿತ್ತು. ಗೆಲ್ಲಲು 160 ರನ್‌ಗಳ ಗುರಿ ಪಡೆದ ಕೋಲ್ಕತ್ತಾ ಇನ್ನೂ 38 ಎಸೆತ ಬಾಕಿ ಇರುವಂತೆಯೇ 2 ವಿಕೆಟ್‌ ನಷ್ಟಕ್ಕೆ 164 ರನ್‌ ಹೊಡೆಯುವ ಮೂಲಕ ಜಯಗಳಿಸಿತು.‌ ಇಲ್ಲಿಯವರೆಗೆ 2012, 2014, 2021ರಲ್ಲಿ ಕೋಲ್ಕತ್ತಾ ಫೈನಲ್‌ ಪ್ರವೇಶಿಸಿತ್ತು. 2012 ಮತ್ತು 2014ರಲ್ಲಿ ಚಾಂಪಿಯನ್‌ ಆಗಿ ಹೊರಹೊಮ್ಮಿತ್ತು.

Share This Article