ಮುಲ್ಲನಪುರ್: ಕೊನೆಯ ಓವರ್‌ನಲ್ಲಿ ಸಿಕ್ಸರ್‌ಗಳ ಸುರಿಮಳೆ, ಇತರ ರನ್‌ಗಳು, ಕೈ ಚೆಲ್ಲಿದ ಕ್ಯಾಚ್‌ಗಳು.. ಸೋಲಿನತ್ತ ವಾಲಿದ್ದ ಸನ್‌ರೈಸರ್ಸ್ ಹೈದರಾಬಾದ್ (Sunrisers Hyderabad) ಕೊನೆಗೂ ಗೆಲುವಿನ ನಗೆ ಬೀರಿದೆ. ಪಂಜಾಬ್ ಕಿಂಗ್ಸ್ (Panjab Kings) ವಿರುದ್ಧ ಹೈದರಾಬಾದ್ 2 ರನ್‌ಗಳ ರೋಚಕ ಜಯ ಸಾಧಿಸಿದೆ.
183 ರನ್‌ಗಳ ಗುರಿಯನ್ನು ಪಡೆದ ಪಂಜಾಬ್‌ಗೆ ಕೊನೆಯ ಓವರ್‌ನಲ್ಲಿ 29 ರನ್ ಬೇಕಿತ್ತು. ಜಯದೇವ್ ಉನದ್ಕತ್ (Jaydev Unadkat) ಎಸೆದ ಮೊದಲ ಎಸೆತವನ್ನು ಅಶುತೋಶ್ ಶರ್ಮಾ (Ashutosh Sharma) ಸಿಕ್ಸರ್‌ಗೆ ಅಟ್ಟಿದರು. ನಂತರ ಎರಡು ವೈಡ್ ರನ್ ಬಂತು.
Advertisement
A Fantastic Finish 🔥
Plenty happened in this nail-biter of a finish where the two teams battled till the end🤜🤛
Relive 📽️ some of the drama from the final over ft. Jaydev Unadkat, Ashutosh Sharma & Shashank Singh 👌
Watch the match LIVE on @starsportsindia and @JioCinema… pic.twitter.com/NohAD2fdnI
— IndianPremierLeague (@IPL) April 9, 2024
Advertisement
ಎರಡನೇ ಎಸೆತವನ್ನು ಅಶುತೋಶ್ ಸಿಕ್ಸರ್‌ಗೆ ಅಟ್ಟುವ ಮೂಲಕ ಪಂದ್ಯಕ್ಕೆ ರೋಚಕ ತಿರುವು ನೀಡಿದರು. ನಂತರ ಎರಡು ಎಸೆತಗಳಲ್ಲಿ 2 ರನ್ ಬಂದರೆ 5ನೇ ಎಸೆತ ವೈಡ್ ಆಯ್ತು. ನಂತರದ ಎಸೆತದಲ್ಲಿ ಅಶುತೋಶ್ ಸಿಕ್ಸರ್ ಅಟ್ಟುವ ಪ್ರಯತ್ನ ಮಾಡಿದರು. ಆದರೆ ಡಿಪ್ ಮಿಡ್ ವಿಕೆಟ್ ಬಳಿ ತ್ರಿಪಾಠಿ ಕ್ಯಾಚ್ ಕೆಚೆಲ್ಲಿದರು. ಈ ಎಸೆತದಲ್ಲಿ 1 ರನ್ ಬಂತು. ಕೊನೆಯ ಎಸೆತವನ್ನು ಶಶಾಂಕ್ ಸಿಂಗ್ (Shashank Singh) ಸಿಕ್ಸರ್‌ಗೆ ಅಟ್ಟಿದರು. ಈ ಮೂಲಕ ಕೊನೆಯ ಓವರ್‌ನಲ್ಲಿ 26 ರನ್ ಬಂತು.
Advertisement
ಕೊನೆಯ 18 ಎಸೆತಗಳಲ್ಲಿ ಪಂಜಾಬ್ ಗೆಲ್ಲಲು 50 ರನ್‌ಗಳು ಬೇಕಿತ್ತು. 18 ಓವರ್‌ನಲ್ಲಿ ಪ್ಯಾಟ್ ಕಮ್ಮಿನ್ಸ್ 11 ರನ್ ಕೊಟ್ಟರೆ 19ನೇ ಓವರ್‌ನಲ್ಲಿ ನಟರಾಜನ್ ಕೇವಲ 10 ರನ್ ನೀಡಿದ್ದುಹೈದರಬಾದ್ ಗೆಲುವಿಗೆ ಕಾರಣವಾಯಿತು. ಉನದ್ಕತ್ ಒತ್ತಡಕ್ಕೆ ಒಳಗಾದ ಸಮಯದಲ್ಲಿ ಪ್ಯಾಟ್ ಕಮ್ಮಿನ್ಸ್ (Pat Cummins) ನಗು ಮುಖದಿಂದ ಅವರನ್ನು ಮಾತನಾಡಿಸಿ ಆತ್ಮಸ್ಥೈರ್ಯ ತುಂಬಿದ್ದು ಪ್ರೇಕ್ಷಕರ ಮೆಚ್ಚುಗೆಗೆ ಕಾರಣವಾಯಿತು.
Advertisement
Keeps his eyes on the ball ✅
Times his jump to perfection ✅
Takes a stunning catch ✅
That was some grab from @SunRisers captain @patcummins30 👏 👏
Watch the match LIVE on @StarSportsIndia and @JioCinema 💻📱#TATAIPL | #PBKSvSRH pic.twitter.com/8rxKfvTs8t
— IndianPremierLeague (@IPL) April 9, 2024
ಪಂಜಾಬ್ ಪರ ಶಶಾಂಕ್ ಸಿಂಗ್ ಔಟಾಗದೇ 46 ರನ್ (25 ಎಸೆತ, 6 ಬೌಂಡರಿ,1 ಸಿಕ್ಸರ್), ಅಶುತೋಶ್ ಶರ್ಮಾ ಔಟಾಗದೇ 33 ರನ್ (15 ಎಸೆತ, 3 ಬೌಂಡರಿ, 2 ಸಿಕ್ಸರ್) ಹೊಡೆದರು. ಶಶಾಂಕ್ ಸಿಂಗ್ ಮತ್ತು ಅಶುತೋಶ್ ಮುರಿಯದ 7ನೇ ವಿಕೆಟಿಗೆ 27 ಎಸೆತಗಳಲ್ಲಿ 66 ರನ್ ಜೊತೆಯಾಟವಾಡುವ ಮೂಲಕ ತಂಡವನ್ನು ಗೆಲುವಿನ ದಡದ ಹತ್ತಿರ ತಂದಿದ್ದರು. ಜಿತೇಶ್ ಶರ್ಮಾ 19 ರನ್, ಸಿಕಂದರ್ ರಾಜಾ 28 ರನ್, ಸ್ಯಾಮ್ ಕರ್ರನ್ 29 ರನ್ ಹೊಡೆದು ಔಟಾದರು.
ಟಾಸ್ ಸೋತು ಮೊದಲು ಬ್ಯಾಟ್ ಮಾಡಿದ ಹೈದರಾಬಾದ್ ಆರಂಭದಲ್ಲೇ ವಿಕೆಟ್ ಕಳೆದುಕೊಂಡಿತ್ತು. 39 ರನ್‌ಗಳಿಸುವಷ್ಟರಲ್ಲಿ ಪ್ರಮುಖ ಮೂರು ವಿಕೆಟ್ ಕಳೆದುಕೊಂಡಿತ್ತು. ಹೀಗಿದ್ದರೂ 20 ವರ್ಷದ ಕಿರಿಯ ಆಟಗಾರ ನಿತೀಶ್ ಕುಮಾರ್ ರೆಡ್ಡಿ 64 ರನ್ (37 ಎಸೆತ, 4 ಬೌಂಡರಿ,5 ಸಿಕ್ಸ್) ಸಿಡಿಸಿ ತಂಡಕ್ಕೆ ನೆರವಾದರು. ಅಬ್ದುಲ್ ಸಮಾದ್ 25 ರನ್ (12 ಎಸೆತ, 5 ಬೌಂಡರಿ) ಹೊಡೆದರು. ಕೊನೆಯಲ್ಲಿ ವಿಕೆಟ್ ಕಳೆದುಕೊಂಡ ಪರಿಣಾಮ ಹೈದರಾಬಾದ್ 9 ವಿಕೆಟ್ ನಷ್ಟಕ್ಕೆ 182 ರನ್ ಹೊಡೆಯಿತು.