ಅಹಮದಾಬಾದ್: ಬ್ಯಾಟಿಂಗ್ ಮತ್ತು ಬೌಲಿಂಗ್‌ನಲ್ಲಿ ಉತ್ತಮ ಪ್ರದರ್ಶನ ನೀಡಿದ ಕೋಲ್ಕತ್ತಾ ನೈಟ್ ರೈಡರ್ಸ್ (Kolkata Knight Riders) ಮೊದಲ ಕ್ವಾಲಿಫೈಯರ್‌ನಲ್ಲಿ ಸನ್‌ರೈಸರ್ಸ್ ಹೈದರಾಬಾದ್ (Sunrisers Hyderabad) ವಿರುದ್ಧ8 ವಿಕೆಟ್‌ಗಳ ಭರ್ಜರಿ ಜಯಗಳಿಸಿ ನಾಲ್ಕನೇ ಬಾರಿ ಐಪಿಎಲ್ ಫೈನಲ್ (IPL Final) ಪ್ರವೇಶಿಸಿದೆ.
ಗೆಲ್ಲಲು 160 ರನ್‌ಗಳ ಗುರಿಯನ್ನು ಪಡೆದ ಕೋಲ್ಕತ್ತಾ ಇನ್ನೂ 38 ಎಸೆತ ಬಾಕಿ ಇರುವಂತೆಯೇ 2 ವಿಕೆಟ್ ನಷ್ಟಕ್ಕೆ 164 ರನ್ ಹೊಡೆಯುವ ಮೂಲಕ ಜಯಗಳಿಸಿತು. ಇಲ್ಲಿಯವರೆಗೆ 2012, 2014, 2021ರಲ್ಲಿ ಕೋಲ್ಕತ್ತಾ ಫೈನಲ್ ಪ್ರವೇಶಿಸಿತ್ತು. 2012 ಮತ್ತು 2014ರಲ್ಲಿ ಚಾಂಪಿಯನ್ ಆಗಿ ಹೊರಹೊಮ್ಮಿತ್ತು.
Advertisement
Skipper seals the show 😎
Shreyas Iyer & his side are going to Chennai for the ultimate battle 👏👏
Recap the match LIVE on @StarSportsIndia and @JioCinema 💻📱#TATAIPL | #KKRvSRH | #Qualifier1 | #TheFinalCall pic.twitter.com/ET5b8kC3hq
— IndianPremierLeague (@IPL) May 21, 2024
Advertisement
ಸುಲಭದ ಸವಾಲನ್ನು ಬೆನ್ನಟ್ಟಿದ ಕೋಲ್ಕತ್ತಾ ಆರಂಭಿಕ ಆಟಗಾರರು ಆರಂಭದಿಂದಲೇ ಆಕ್ರಮಣಕ್ಕೆ ಇಳಿದಿದ್ದರು. ಮೊದಲ ವಿಕೆಟಿಗೆ 20 ಎಸೆತಗಳಲ್ಲಿ 44 ರನ್ ಬಂದಿತ್ತು. ರಹಮಾನುಲ್ಲಾ ಗುರ್ಬಾಜ್ 23 ರನ್ (14 ಎಸೆತ, 2 ಬೌಂಡರಿ, 2 ಸಿಕ್ಸರ್), ಸುನಿಲ್ ನರೈನ್ 21 ರನ್ (16 ಎಸೆತ, 4 ಬೌಂಡರಿ) ಹೊಡೆದು ಔಟಾದರು.
Advertisement
ನಂತರ ಜೊತೆಯಾದ ನಾಯಕ ಶ್ರೇಯಸ್ ಅಯ್ಯರ್ ಮತ್ತು ವೆಂಕಟೇಶ್ ಅಯ್ಯರ್ ಮುರಿಯದ 3ನೇ ವಿಕೆಟಿಗೆ 44 ಎಸೆತಗಳಲ್ಲಿ 97 ರನ್ ಜೊತೆಯಾಟವಾಡುವ ಮೂಲಕ ತಂಡಕ್ಕೆ ಜಯವನ್ನು ತಂದುಕೊಟ್ಟರು. ಶ್ರೇಯಸ್ ಅಯ್ಯರ್ 58 ರನ್ (24 ಎಸೆತ, 5 ಬೌಂಡರಿ, 4 ಸಿಕ್ಸರ್), ವೆಂಕಟೇಶ್ ಅಯ್ಯರ್ 51 ರನ್(28 ಎಸೆತ, 5 ಬೌಂಡರಿ, 4 ಸಿಕ್ಸರ್) ಸಿಡಿಸಿದರು.
Advertisement
ಹೈದರಾಬಾದ್ ಬೌಲಿಂಗ್ ಕಳಪೆಯಾಗಿತ್ತು. ಉತ್ತಮ ಬೌಲಿಂಗ್ ಮಾಡುತ್ತಿದ್ದ ನಾಯಕ ಪ್ಯಾಟ್ ಕಮ್ಮಿನ್ಸ್ 3 ಓವರ್ ಎಸೆದು 38 ರನ್ ನೀಡಿದ್ದರು. ಅಷ್ಟೇ ಅಲ್ಲದೇ ಹಲವು ಕ್ಯಾಚ್‌ಗಳನ್ನು ಕೈಚೆಲ್ಲಿದ ಪರಿಣಾಮ ಹೈದರಾಬಾದ್ ಸೋಲನ್ನು ಅನುಭವಿಸಿತು.
🎥 Left hander’s delight 😎
Venkatesh Iyer nailing some biggies in Ahmedabad 💥
Watch the match LIVE on @StarSportsIndia and @JioCinema 💻📱 #TATAIPL | #KKRvSRH | #Qualifier1 | #TheFinalCall pic.twitter.com/DxC116Bz65
— IndianPremierLeague (@IPL) May 21, 2024
ಕಳಪೆ ಬ್ಯಾಟಿಂಗ್: ಟಾಸ್ ಗೆದ್ದ ಕೋಲ್ಕತ್ತಾ ನಾಯಕ ಶ್ರೇಯಸ್ ಅಯ್ಯರ್ (Shreyas Iyer) ಫೀಲ್ಡಿಂಗ್ ಆಯ್ಕೆ ಮಾಡಿದರು. ಈ ನಿರ್ಧಾರ ಮೊದಲ ಓವರ್‌ನಲ್ಲಿ ಫಲ ನೀಡಿತು. ಲೀಗ್‌ನಲ್ಲಿ ಅಬ್ಬರಿಸಿದ್ದ ಟ್ರಾವಿಸ್ ಹೆಡ್ ಅವರನ್ನು ಮಿಚೆಲ್ ಸ್ಟಾರ್ಕ್ ಶೂನ್ಯಕ್ಕೆ ಬೌಲ್ಡ್ ಮಾಡಿ ಆರಂಭಿಕ ಮುನ್ನಡೆ ತಂದುಕೊಟ್ಟರು. ಎರಡನೇ ಓವರ್‌ನಲ್ಲಿ ಸಿಕ್ಸರ್ ವೀರ ಅಭಿಷೇಕ್ ಶರ್ಮಾ 3 ರನ್ ಗಳಿಸಿ ವಿಕೆಟ್ ಒಪ್ಪಿಸಿದರು. 39 ರನ್‌ಗಳಿಸುವಷ್ಟರಲ್ಲಿ ನಿತೀಶ್ ಕುಮಾರ್ ರೆಡ್ಡಿ ಸಹ ಔಟಾದರು.
ಈ ಹಂತದಲ್ಲಿ ಜೊತೆಯಾದ ರಾಹುಲ್ ತ್ರಿಪಾಠಿ ಮತ್ತು ಕ್ಲಾಸೆನ್ 37 ಎಸೆತಗಳಲ್ಲಿ 62 ರನ್ ಜೊತೆಯಾಟವಾಡಿ ತಂಡಕ್ಕೆ ಸ್ವಲ್ಪ ಚೇತರಿಕೆ ನೀಡಿದರು.
Yes…No…and eventually run-out at the strikers end!
Momentum back with @KKRiders 😎#SRH 123/7 after 14 overs
Watch the match LIVE on @JioCinema and @StarSportsIndia 💻📱#TATAIPL | #KKRvSRH | #Qualifier1 | #TheFinalCall pic.twitter.com/I6SJLghAqc
— IndianPremierLeague (@IPL) May 21, 2024
ಸಿಕ್ಸ್ ಸಿಡಿಸಲು ಹೋಗಿ ಕ್ಲಾಸೆನ್ 32 ರನ್ (21 ಎಸೆತ, 3 ಬೌಂಡರಿ, 1 ಸಿಕ್ಸರ್), ರಾಹುಲ್ ತ್ರಿಪಾಠಿ 55 ರನ್ (35 ಎಸೆತ, 7 ಬೌಂಡರಿ, 1 ಸಿಕ್ಸರ್) ಸಿಡಿಸಿ ರನೌಟ್‌ಗೆ ಬಲಿಯಾರು.
He has arrived 🔥
Heinrich Klaasen takes on the challenge for the @SunRisers 👊
The men in 🧡 need plenty more!
Watch the match LIVE on @JioCinema and @StarSportsIndia 💻📱#TATAIPL | #KKRvSRH pic.twitter.com/g7sJpUVHXr
— IndianPremierLeague (@IPL) May 21, 2024
ನಾಯಕ ಪ್ಯಾಟ್ ಕಮ್ಮಿನ್ಸ್ 30 ರನ್ (24 ಎಸೆತ, 2 ಬೌಂಡರಿ, 2 ಸಿಕ್ಸರ್) ಸಿಡಿಸಿ ಔಟಾದರು. ಮಧ್ಯಮ ಕ್ರಮಾಂಕದಲ್ಲಿ ಉತ್ತಮ ಜೊತೆಯಾಟ ನಡೆಯದ ಕಾರಣ ಅಂತಿಮವಾಗಿ 19.3 ಓವರ್‌ಗಳಲ್ಲಿ 159 ರನ್‌ಗಳಿಗೆ ಹೈದರಾಬಾದ್ ಆಲೌಟ್ ಆಯ್ತು. ಹೈದರಾಬಾದ್ 8 ಆಟಗಾರರು ಎರಡಂಕಿಯನ್ನು ದಾಟಲಿಲ್ಲ. 4 ಆಟಗಾರರು ಶೂನ್ಯಕ್ಕೆ ಔಟಾಗಿದ್ದರು.