ಲಕ್ನೋ: ಕ್ವಿಂಟನ್ ಡಿಕಾಕ್, ನಿಕೋಲಸ್ ಪೂರನ್ ಹಾಗೂ ಕೃನಾಲ್ ಪಾಂಡ್ಯ ಅವರ ಸಂಘಟಿತ ಬ್ಯಾಟಿಂಗ್ ಮತ್ತು ಬೌಲಿಂಗ್ ದಾಳಿ ನೆರವಿನಿಂದ ಲಕ್ನೋ ಸೂಪರ್ ಜೈಂಟ್ಸ್ ತಂಡವು ಪಂಜಾಬ್ ಕಿಂಗ್ಸ್ ವಿರುದ್ಧ 21 ರನ್‌ಗಳ ಗೆಲುವು ಸಾಧಿಸಿದೆ.
ಲಕ್ನೋದ ಏಕನಾ ಕ್ರೀಡಾಂಗಣದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ಲಕ್ನೋ ಸೂಪರ್ ಜೈಂಟ್ಸ್ ತಂಡವು 20 ಓವರ್‌ಗಳಲ್ಲಿ 8 ವಿಕೆಟ್ ನಷ್ಟಕ್ಕೆ 199 ರನ್ ಕಲೆಹಾಕಿತ್ತು. 200 ರನ್‌ಗಳ ಬೃಹತ್ ಮೊತ್ತದ ಗುರಿ ಬೆನ್ನತ್ತಿದ ಪಂಜಾಬ್ ಕಿಂಗ್ಸ್ ನಿಗದಿತ ಓವರ್‌ಗಳಲ್ಲಿ 5 ವಿಕೆಟ್ ನಷ್ಟಕ್ಕೆ 177 ರನ್ ಗಳಿಸಿ ಸೋಲೊಪ್ಪಿಕೊಂಡಿತು.
Advertisement
Advertisement
ಬೃಹತ್ ಮೊತ್ತದ ಚೇಸಿಂಗ್ ಆರಂಭಿಸಿದ್ದ ಪಂಜಾಬ್ ತಂಡವು ಉತ್ತಮ ಆರಂಭ ಒಡೆದುಕೊಂಡಿತ್ತು. ಮೊದಲ ವಿಕೆಟ್‌ಗೆ ನಾಯಕ ಶಿಖರ್ ಧವನ್ ಮತ್ತು ಜಾನಿ ಬೈರ್‌ಸ್ಟೋವ್ ಜೋಡಿ 11.4 ಓವರ್‌ಗಳಲ್ಲಿ 102 ರನ್‌ಗಳ ಜೊತೆಯಾಟ ನೀಡಿತ್ತು. ಜಾನಿ ಬೈರ್‌ಸ್ಟೋವ್ 29 ಎಸೆತಗಳಲ್ಲಿ 42 ರನ್ (3 ಸಿಕ್ಸರ್, 3 ಬೌಂಡರಿ) ಗಳಿಸಿ ಔಟಾದರು. ಈ ಬೆನ್ನಲ್ಲೇ ಸ್ಫೋಟಕ ಪ್ರದರ್ಶನ ನೀಡಿದ ಪ್ರಭ್‌ಸಿಮ್ರಾನ್ ಸಿಂಗ್ 7 ಎಸೆತಗಳಲ್ಲಿ 19 ರನ್ ಗಳಿಸಿ ಔಟಾದರು. 70 ರನ್ (50 ಎಸೆತ, 7 ಬೌಂಡರಿ, 3 ಸಿಕ್ಸರ್) ಸಿಡಿಸಿದ್ದ ಶಿಖರ್ ಧವನ್ ಸಹ ಪೆವಿಲಿಯನ್‌ಗೆ ಮರಳುತ್ತಿದ್ದಂತೆ, ಆಲ್‌ರೌಂಡರ್ ಸ್ಯಾಮ್ ಕರ್ರನ್ ಡಕ್‌ಔಟ್ ಆದರು. ಇದರಿಂದ ಗೆಲುವು ಲಕ್ನೋ ತಂಡದತ್ತ ವಾಲಿತು.
Advertisement
Advertisement
ಪಂಜಾಬ್ ಪರ ಜಿತೇಶ್ ಶರ್ಮಾ 6 ರನ್, ಲಿಯಾಮ್ ಲಿವಿಂಗ್‌ಸ್ಟೋನ್ 28 ರನ್, ಶಶಾಂಕ್ ಸಿಂಗ್ 9 ರನ್ ಗಳಿಸಿದರು. ಲಕ್ನೋ ಪರ ಮಯಾಂಕ್ ಯಾದವ್ 3 ವಿಕೆಟ್ ಕಿತ್ತರೆ, ಮೊಹ್ಸಿನ್ ಖಾನ್ 2 ವಿಕೆಟ್ ಪಡೆದರು. ಮೊದಲು ಬ್ಯಾಟಿಂಗ್ ಮಾಡಿದ ಲಕ್ನೋ ತಂಡ ಸ್ಪಿನ್ ಪಿಚ್‌ನಲ್ಲಿ ರನ್ ಹೊಳೆ ಹರಿಸಿತು. ಕ್ವಿಂಟನ್ ಡಿಕಾಕ್, ನಾಯಕ ನಿಕೋಲಸ್ ಪೂರನ್ ಹಾಗೂ ಕೃನಾಲ್ ಪಾಂಡ್ಯ ಅವರ ಸಂಘಟಿತ ಬ್ಯಾಟಿಂಗ್ ನೆರವಿನಿಂದ ಎದುರಾಳಿ ತಂಡಕ್ಕೆ 200 ರನ್‌ಗಳ ಗುರಿ ನೀಡುವಲ್ಲಿ ಯಶಸ್ವಿಯಾಯಿತು. ಒಂದೆಡೆ ವಿಕೆಟ್ ಕಳೆದುಕೊಂಡರೂ ರನ್ ಕಲೆಹಾಕುತ್ತಾ ಸಾಗಿದ ಲಕ್ನೋ ತಂಡ ಬೃಹತ್ ಮೊತ್ತವನ್ನೇ ಪೇರಿಸಿತು.
ಲಕ್ನೋ ಪರ ಕ್ವಿಂಟನ್ ಡಿಕಾಕ್ 54 ರನ್ (38 ಎಸೆತ, 5 ಬೌಂಡರಿ, 2 ಸಿಕ್ಸರ್), ನಿಕೋಲಸ್ ಪೂರನ್ 42 ರನ್ (21 ಎಸೆತ, 3 ಬೌಂಡರಿ, 3 ಸಿಕ್ಸರ್), ಕೃನಾಲ್ ಪಾಂಡ್ಯ 43 ರನ್ 22 ಎಸೆತ, 4 ಬೌಂಡರಿ, 2 ಸಿಕ್ಸರ್), ಕೆ.ಎಲ್ ರಾಹುಲ್ 15 ರನ್, ದೇವದತ್ ಪಡಿಕಲ್ 9 ರನ್, ಮಾರ್ಕಸ್ ಸ್ಟೋಯ್ನಿಸ್ 19 ರನ್, ಆಯುಷ್ ಬದೋನಿ 8 ರನ್, ಮೋಹ್ಸಿನ್ ಖಾನ್ 2 ರನ್ ಗಳಿಸಿದ್ರೆ, ರವಿ ಬಿಷ್ಣೋಯಿ ಶೂನ್ಯ ಸುತ್ತಿದರು.
ಪಂಜಾಬ್ ಕಿಂಗ್ಸ್ ಪರ ಆಲ್‌ರೌಂಡರ್ ಸ್ಯಾಮ್ ಕರ್ರನ್ 3 ವಿಕೆಟ್, ಅರ್ಷ್‌ದೀಪ್ ಸಿಂಗ್ 2 ವಿಕೆಟ್ ಹಾಗೂ ಕಗಿಸೋ ರಬಾಡ ಮತ್ತು ರಾಹುಲ್ ಚಹಾರ್ ತಲಾ ಒಂದೊಂದು ವಿಕೆಟ್ ಪಡೆದು ಮಿಂಚಿದರು.