– 15 -18 ಓವರ್‌ನಲ್ಲಿ ಆರ್‌ಸಿಬಿ ಹೊಡೆದದ್ದು ಕೇವಲ 29 ರನ್
– ದಿಢೀರ್ ಕುಸಿತ ಕಂಡ ಆರ್‌ಸಿಬಿಯ ಮಧ್ಯಮ ಕ್ರಮಾಂಕ
ಬೆಂಗಳೂರು: ಬೌಲರ್‌ಗಳ ಕೆಟ್ಟ ಪ್ರದರ್ಶನದಿಂದಾಗಿ ತವರಿನಲ್ಲಿ ಆರ್‌ಸಿಬಿ (RCB) ಪಂದ್ಯವನ್ನು ಸೋತಿದ್ದು ಕೋಲ್ಕತ್ತಾ ನೈಟ್ ರೈಡರ್ಸ್ (KKR) 7 ವಿಕೆಟ್‌ಗಳ ಜಯ ಸಾಧಿಸಿದೆ. ಸತತ ಎರಡು ಜಯ ಸಾಧಿಸುವ ಮೂಲಕ ಕೋಲ್ಕತ್ತಾ ಐಪಿಎಲ್ ಅಂಕಪಟ್ಟಿಯಲ್ಲಿ ಎರಡನೇ ಸ್ಥಾನಕ್ಕೆ ಏರಿದೆ.
Advertisement
ಗೆಲ್ಲಲು 183 ರನ್‌ಗಳ ಗುರಿಯನ್ನು ಪಡೆದ ಕೋಲ್ಕತ್ತಾ 16.5 ಓವರ್‌ಗಳಲ್ಲಿ 3 ವಿಕೆಟ್ ನಷ್ಟಕ್ಕೆ 186 ರನ್ ಹೊಡೆದು ಜಯ ಸಾಧಿಸಿತು. ಇಲ್ಲಿಯವರೆಗೆ ತವರಿನಲ್ಲಿ ನಡೆದ ಎಲ್ಲಾ 9 ಪಂದ್ಯಗಳನ್ನು ತವರಿನ ತಂಡಗಳೇ ಜಯಗಳಿಸಿದ್ದವು. ಆದರೆ ಆರ್‌ಸಿಬಿ ತವರಿನ ಎರಡನೇ ಪಂದ್ಯದಲ್ಲಿ ಎಡವಿದೆ. ಇದನ್ನೂ ಓದಿ: ದೈವಕೋಲದ ವೇಳೆ ಸಾರ್ವಜನಿಕ ಸಭೆ – ಜಯಪ್ರಕಾಶ್ ಹೆಗ್ಡೆ ವಿರುದ್ಧ ಕೇಸ್
Advertisement
The streak is broken! @KKRiders 💜 become the first team to register an away win in #TATAIPL 2024 👏👏
Scorecard ▶️https://t.co/CJLmcs7aNa#RCBvKKR pic.twitter.com/svxvtA409s
— IndianPremierLeague (@IPL) March 29, 2024
Advertisement
ಸ್ಫೋಟಕ ಆರಂಭ: ಆರಂಭಿಕ ಆಟಗಾರರಾದ ಪಿಲ್ ಸಾಲ್ಟ್ (Phil Salt) ಮತ್ತು ಸುನೀಲ್ ನರೈನ್ (Sunil Narine) ಕೇವಲ 39 ಎಸೆತಗಳಲ್ಲಿ 86 ರನ್ ಜೊತೆಯಾಟವಾಡುವ ಮೂಲಕ ತಂಡಕ್ಕೆ ಭದ್ರವಾದ ಅಡಿಪಾಯ ಹಾಕಿದರು. ನರೈನ್ 47 ರನ್ (22 ಎಸೆತ, 2 ಬೌಂಡರಿ, 5 ಸಿಕ್ಸ್) ಹೊಡೆದರೆ ಕೀಪರ್ ಪಿಲ್ ಸಾಲ್ಟ್ 30 ರನ್ (20 ಎಸೆತ, 2 ಬೌಂಡರಿ, 2 ಸಿಕ್ಸರ್) ಹೊಡೆದು ಔಟಾದರು.
Advertisement
ಆರಂಭಿಕ ಆಟಗಾರರು ಔಟಾದರೂ ವೆಂಕಟೇಶ್ ಅಯ್ಯರ್ ಬಿರುಸಿನ ಆಟವಾಡಿ 50 ರನ್ (30 ಎಸೆತ, 3 ಬೌಂಡರಿ, 4 ಸಿಕ್ಸರ್) ಹೊಡೆದು ಕ್ಯಾಚ್ ನೀಡಿ ಹೊರನಡೆದರು. ಇದನ್ನೂ ಓದಿ: ಮುಲಾಯಂ ಸರ್ಕಾರದಿಂದ ರಕ್ಷಣೆ – ಅನ್ಸಾರಿಯನ್ನು ಬಂಧಿಸಿದ್ದಕ್ಕೆ ಡಿಎಸ್‌ಪಿಗೆ ರಾಜೀನಾಮೆ ಶಿಕ್ಷೆ!
ನಾಯಕ ಶ್ರೇಯಸ್ ಅಯ್ಯರ್ ಔಟಾಗದೇ 39 ರನ್(24 ಎಸೆತ, 2 ಬೌಂಡರಿ, 2 ಸಿಕ್ಸ್), ರಿಂಕು ಸಿಂಗ್ ಔಟಾಗದೇ 5 ರನ್ ಹೊಡೆದು ತಂಡವನ್ನು ಗೆಲುವಿನ ದಡ ಸೇರಿಸಿದರು.
An effortless maximum to bring 💯 sixes in IPL for @KKRiders Captain Shreyas Iyer 😎
Head to @JioCinema and @StarSportsIndia to watch the match LIVE#TATAIPL | #RCBvKKR | @ShreyasIyer15 pic.twitter.com/vhPsh9HNG1
— IndianPremierLeague (@IPL) March 29, 2024
ಮಧ್ಯಮ ಕ್ರಮಾಂಕದಲ್ಲಿ ಕುಸಿತ: ಡುಪ್ಲೆಸಿಸ್ 8 ರನ್ ಗಳಿಸಿ ಔಟಾದರೂ ಕ್ಯಾಮರೂನ್ ಗ್ರೀನ್ 33 ರನ್ (21 ಎಸೆತ, 4 ಬೌಂಡರಿ, 2 ಸಿಕ್ಸರ್), ಮ್ಯಾಕ್ಸ್‌ವೆಲ್ 28 ರನ್(19 ಎಸೆತ, 3 ಬೌಂಡರಿ, 1 ಸಿಕ್ಸರ್) ಸಿಡಿಸಿ ಔಟಾದರು.
ರಜತ್ ಪಾಟೀದರ್ ಮತ್ತು ಅನುಜ್ ರಾವತ್ ತಲಾ 3 ರನ್ ಗಳಿಸಿ ಔಟಾದ್ದರಿಂದ ರನ್ ದಿಢೀರ್ ಕುಸಿತವಾಯಿತು. ಹೀಗಿದ್ದರೂ ಕೊಹ್ಲಿ (Virat Kohli) ಮತ್ತು ದಿನೇಶ್ ಕಾರ್ತಿಕ್ (Dinesh Karthik) ಕೊನೆಯಲ್ಲಿ ಸಿಕ್ಸ್, ಬೌಂಡರಿ ಸಿಡಿಸಿದ ಪರಿಣಾಮ ಆರ್‌ಸಿಬಿ 6 ವಿಕೆಟ್ ನಷ್ಟಕ್ಕೆ 182 ರನ್ ಗಳಿಸಿತು.
2️⃣ high quality shots
2️⃣ maximum results
Predict Virat Kohli's final score tonight 👇
Watch the match LIVE on @JioCinema and @StarSportsIndia 💻📱
Match Updates ▶️ https://t.co/CJLmcs7aNa#TATAIPL | #RCBvKKR | @RCBTweets pic.twitter.com/WUuarIrM2m
— IndianPremierLeague (@IPL) March 29, 2024
ಆರ್‌ಸಿಬಿ ಸೋತಿದ್ದು ಹೇಗೆ?
ಇನ್ನಿಂಗ್ಸ್ 15ನೇ ಓವರ್‌ನಲ್ಲಿ 10 ರನ್, 16ನೇ ಓವರ್‌ನಲ್ಲಿ 7 ರನ್, 17ನೇ ಓವರ್‌ನಲ್ಲಿ 7 ರನ್, 18ನೇ ಓವರ್‌ನಲ್ಲಿ 5 ರನ್ ಗಳಿಸಿತು. ಈ ಓವರ್‌ಗಳಲ್ಲಿ ಸಿಕ್ಸ್, ಬೌಂಡರಿಗಳು ಸಿಡಿಯಲ್ಪಟ್ಟಿದ್ದರೆ ಪಂದ್ಯ ಸ್ವಲ್ಪ ಫೈಟ್ ಬರುತ್ತಿತ್ತು. ಇನ್ನಿಂಗ್ಸ್‌ನ 19ನೇ ಓವರ್‌ನಲ್ಲಿ 13 ರನ್ ಬಂದರೆ 20ನೇ ಓವರ್‌ನಲ್ಲಿ 16 ರನ್ ಬಂದಿತ್ತು. ಇದರೊಂದಿಗೆ ಬೌಲರ್‌ಗಳು ವಿಕೆಟ್ ಕಿತ್ತು ಒತ್ತಡ ಹೇರಲಿಲ್ಲ. ಇತರೇ ರೂಪದಲ್ಲಿ 15 ರನ್ ( ಲೆಗ್ ಬೈ7, ವೈಡ್ 8 ) ಬಿಟ್ಟು ಕೊಟ್ಟ ಕಾರಣ ಆರ್‌ಸಿಬಿ ಪಂದ್ಯವನ್ನು ಸೋತಿದೆ.