ಮುಂಬೈ: ವೆಂಕಟೇಶ್ ಅಯ್ಯರ್, ಮೈಕಲ್ ಸ್ಟಾರ್ಕ್ ಅವರ ಅತ್ಯುತ್ತಮ ಆಟದಿಂದ ಮುಂಬೈ ಇಂಡಿಯನ್ಸ್ (Mumbai Indians) ವಿರುದ್ಧ ಕೋಲ್ಕತ್ತಾ ನೈಟ್ ರೈಡರ್ಸ್ (Kolkata Knight Riders) 24 ರನ್‌ಗಳ ಜಯ ಸಾಧಿಸಿದೆ.
ಟಾಸ್ ಸೋತು ಮೊದಲು ಬ್ಯಾಟ್ ಮಾಡಿದ ಕೋಲ್ಕತ್ತಾ 19.5 ಓವರ್‌ಗಳಲ್ಲಿ 169 ರನ್ ಗಳಿಗೆ ಆಲೌಟ್ ಆಯ್ತು. ಈ ಮೊತ್ತವನ್ನು ಬೆನ್ನಟ್ಟಿದ ಮುಂಬೈ 18.5 ಓವರ್‌ಗಳಲ್ಲಿ 145 ರನ್‌ಗಳಿಗೆ ಆಲೌಟ್ ಆಯ್ತು. ಈ ಗೆಲುವಿನೊಂದಿಗೆ ಕೋಲ್ಕತ್ತಾ 14 ಅಂಕಗಳಿಸಿ ಅಂಕಪಟ್ಟಿಯಲ್ಲಿ ಎರಡನೇ ಸ್ಥಾನಕ್ಕೆ ಜಿಗಿದಿದೆ.
Advertisement
A memorable win for @KKRiders 🥳
They wrap up a solid performance to get past the #MI challenge 💜 💪
Scorecard ▶️ https://t.co/iWTqcAsT0O#TATAIPL | #MIvKKR pic.twitter.com/YT6MGSdPkj
— IndianPremierLeague (@IPL) May 3, 2024
Advertisement
ಮುಂಬೈ ಪರ ಸೂರ್ಯಕುಮಾರ್ ಯಾದವ್ (Surya Kumar Yadav) 56 ರನ್(35 ಎಸೆತ, 6 ಬೌಂಡರಿ, 2 ಸಿಕ್ಸರ್) ಟೀಮ್ ಡೇವಿಡ್ 24 ರನ್ (20 ಎಸೆತ, 1 ಬೌಂಡರಿ, 1 ಸಿಕ್ಸ್ ) ಹೊಡೆದು ಔಟಾದರು.
Advertisement
ಕೋಲ್ಕತ್ತಾ ಪರ ಸ್ಟಾರ್ಕ್ 33 ರನ್ ನೀಡಿ 4 ವಿಕೆಟ್ ಪಡೆದರೆ ವರುಣ್ ಚಕ್ರವರ್ತಿ, ಸುನಿಲ್ ನರೈನ್, ರಸೆಲ್ ತಲಾ 2 ವಿಕೆಟ್ ಪಡೆದರು. ಇದನ್ನೂ ಓದಿ: ಸುಬ್ರಹ್ಮಣ್ಯದಲ್ಲಿ ಸಿಡಿಲಿಗೆ ನವ ವಿವಾಹಿತ ಬಲಿ
Advertisement
A skier by Phil Salt 🫡
Andre Russell provides the prized wicket of Suryakumar Yadav 🙌#MI require 32 runs from 12 balls!
Watch the match LIVE on @StarSportsIndia and @JioCinema #TATAIPL | #MIvKKR | @KKRiders pic.twitter.com/D58vQ00YeN
— IndianPremierLeague (@IPL) May 3, 2024
ಕೋಲ್ಕತ್ತಾ ಪರ ವೆಂಕಟೇಶ್ ಅಯ್ಯರ್ 70 ರನ್ (52 ಎಸೆತ, 6 ಬೌಂಡರಿ, 3 ಸಿಕ್ಸರ್), ಮನೀಷ್ ಪಾಂಡೆ 42 ರನ್(31 ಎಸೆತ, 2 ಬೌಂಡರಿ, 2 ಸಿಕ್ಸರ್) ಸಿಡಿಸಿ ಔಟಾದರು.