ಮುಂಬೈ: ವಿಶ್ವಕಪ್ ಟೂರ್ನಿ ಮುಗಿಯುತ್ತಿದ್ದಂತೆ ಐಪಿಎಲ್ (IPL 2024) ಕ್ರಿಕೆಟ್ ಹಬ್ಬದ ಸದ್ದು ಜೋರಾಗಿದೆ. ಡಿಸೆಂಬರ್ 19ರಂದು ದುಬೈನಲ್ಲಿ ನಡೆಯಲಿರುವ ಐಪಿಎಲ್ 17ನೇ ಆವೃತ್ತಿಯ ಆಟಗಾರರ ಮಿನಿ ಹರಾಜು ಪ್ರಕ್ರಿಯೆಗೆ ಮುನ್ನ ಎಲ್ಲ 10 ತಂಡಗಳು ಉಳಿಸಿಕೊಳ್ಳಲಿರುವ ಮತ್ತು ಬಿಡುಗಡೆ ಮಾಡಲಿರುವ ಆಟಗಾರರ ಪಟ್ಟಿಯನ್ನು ಬಿಸಿಸಿಐಗೆ (BCCI) ಸಲ್ಲಿಸಬೇಕಿದೆ. ಅಂತಿಮ ಪಟ್ಟಿ ಸಲ್ಲಿಸಲು ನವೆಂಬರ್ 26 ಕೊನೆಯ ದಿನವಾಗಿದೆ.
ತಂಡಗಳ ನಡುವೆ ಆಟಗಾರರ ಬದಲಾವಣೆ ಮತ್ತು ರಿಟೇನ್ (IPL Retention) ಮಾಡಿಕೊಳ್ಳುವ ಕುರಿತು ಆಟಗಾರರೊಂದಿಗೂ ಮಾತುಕತೆಗಳು ಭರದಿಂದ ಸಾಗಿದ್ದು, ಭಾನುವಾರ (ನ.26) ಸಂಜೆ 4 ಗಂಟೆಗೆ ಮಹತ್ವದ ಸಭೆ ನಡೆಯಲಿದೆ. ಜಿಯೋಸಿನಿಮಾದಲ್ಲಿ (JioCinema) ಸಭೆ ನೇರಪ್ರಸಾರವಾಗಲಿದೆ. ಯಾವ ತಂಡೆದಲ್ಲಿ ರಿಟೇನ್ ಆಟಗಾರರು ಉಳಿಯುತ್ತಾರೆ, ಬದಲಾವಣೆ ಆಟಗಾರರು ಯಾರು ಎಂಬ ಕುತೂಹಲಕ್ಕೆ ತೆರೆ ಬೀಳಲಿದೆ. ಇದನ್ನೂ ಓದಿ: ಇಂಡೋ-ಆಸೀಸ್ ಕದನಕ್ಕೆ ಮಳೆ ಭೀತಿ – ಸತತ 2ನೇ ಜಯಕ್ಕೆ ಭಾರತ ತವಕ
ಗೇಟ್ ಪಾಸ್ ಪಡೆಯುವ ಸಂಭಾವ್ಯ ಆಟಗಾರರ ಪಟ್ಟಿ:
ಆರ್ಸಿಬಿ: ದಿನೇಶ್ ಕಾರ್ತಿಕ್, ಫಿನ್ ಅಲೆನ್, ರೀಸ್ ಟಾಪ್ಲೆ, ವಿಲ್ ಜಾಕ್ಸ್.
ಸಿಎಸ್ಕೆ: ಬೆನ್ ಸ್ಟೋಕ್ಸ್, ಅಂಬಟಿ ರಾಯುಡು (ನಿವೃತ್ತಿ), ಡ್ವೇನ್ ಪ್ರಿಟೋರಿಯಸ್, ಸಿಸಾಂಡ, ಕೈಲ್ ಜೇಮಿಸನ್.
ಡೆಲ್ಲಿ ಕ್ಯಾಪಿಟಲ್ಸ್: ಮನೀಷ್ ಪಾಂಡೆ, ಪೃಥ್ವಿ ಷಾ, ಫಿಲ್ ಸಾಲ್ಟ್, ರಿಲೀ ರೋಸೌ.
ರಾಜಸ್ಥಾನ ರಾಯಲ್ಸ್: ಜೇಸನ್ ಹೋಲ್ಡರ್, ಜೋ ರೂಟ್, ಕೆಸಿ ಕಾರ್ಯಪ್ಪ, ಎಂ. ಅಶ್ವಿನ್.
ಲಖನೌ ಸೂಪರ್ಜೈಂಟ್ಸ್: ಮಾರ್ಕಸ್ ಸ್ಟೋಯಿನಿಸ್, ಇವಿನ್ ಲೆವಿಸ್, ಕೆ. ಗೌತಮ್.
ಸನ್ರೈಸರ್ಸ್: ಹ್ಯಾರಿ ಬ್ರೂಕ್, ಅಕೀಲ್ ಹೊಸೈನ್, ಆದಿಲ್ ರಶೀದ್.
ಮುಂಬೈ ಇಂಡಿಯನ್ಸ್: ಜೈದೇವ್ ಉನಾದ್ಕತ್, ರಿಲೀ ಮೆರಿಡಿತ್, ಪೀಯುಷ್ ಚಾವ್ಲಾ.
ಗುಜರಾತ್ ಟೈಟಾನ್ಸ್: ಯಶ್ ದಯಾಳ್, ದಸುನ್ ಶನಕ, ಒಡೆನ್ ಸ್ಮಿತ್, ಪ್ರದಿಪ್ ಸಂಗ್ವಾನ್.
ಕೆಕೆಆರ್: ಲಾಕಿ ಫಗ್ಯುರ್ಸನ್, ಟಿಮ್ ಸೌಥಿ, ಲಿಟನ್ ದಾಸ್, ಡೇವಿಡ್ ವೈಸ್, ಎನ್. ಜಗದೀಶನ್.
ಪಂಜಾಬ್ ಕಿಂಗ್ಸ್: ಸ್ಯಾಮ್ ಕರನ್, ಮ್ಯಾಥ್ಯೂ ಶಾರ್ಟ್, ಭಾನುಕಾ ರಾಜಪಕ್ಷ, ರಿಷಿ ಧವನ್.