ಜೈಪುರ: ನಾಯಕ ಶುಭಮನ್ ಗಿಲ್ (Shubman Gill) ಅರ್ಧಶತಕ ಕೊನೆಗೆ ರಶೀದ್ ಖಾನ್ (Rashid Khan) ಮತ್ತು ರಾಹುಲ್ ತೆವಾಟಿಯ ಅವರ ಸ್ಫೋಟಕ ಆಟದಿಂದ ರಾಜಸ್ಥಾನ ರಾಯಲ್ಸ್ (Rajasthan Royals) ವಿರುದ್ಧ ಗುಜರಾತ್ ಟೈಟಾನ್ಸ್ (Gujarat Titans) ರೋಚಕ 3 ವಿಕೆಟ್ ಜಯ ಸಾಧಿಸಿದೆ.
ಗೆಲ್ಲಲು 196 ರನ್‌ಗಳ ಕಠಿಣ ಗುರಿಯನ್ನು ಪಡೆದ ಗುಜರಾತ್ 20 ಓವರ್‌ಗಳಲ್ಲಿ 7 ವಿಕೆಟ್ ನಷ್ಟಕ್ಕೆ 199 ರನ್ ಹೊಡೆಯಿತು. ರಶೀದ್ ಖಾನ್ ಕೊನೆಯ ಎಸೆತವನ್ನು ಬೌಂಡರಿಗೆ ಅಟ್ಟುವ ಮೂಲಕ ತಂಡಕ್ಕೆ ಗೆಲುವು ತಂದುಕೊಟ್ಟರು. ಸತತ 4 ಪಂದ್ಯಗಳನ್ನು ಗೆದ್ದಿದ್ದ ರಾಜಸ್ಥಾನಕ್ಕೆ 5 ಪಂದ್ಯದಲಿ ಸೋಲಾಗಿದೆ.
Advertisement
ರಾಜಸ್ಥಾನಕ್ಕೆ ಕೊನೆಯ 24 ಎಸೆತದಲ್ಲಿ 59 ರನ್ ಬೇಕಿತ್ತು. ಅಶ್ವಿನ್ ಎಸೆದ 17ನೇ ಓವರ್‌ನಲ್ಲಿ 17 ರನ್ ಬಂದರೆ 18ನೇ ಓವರ್‌ನಲ್ಲಿ 7 ರನ್ ಬಂತು. ಕುಲದೀಪ್ ಸೇನ್ 19ನೇ ಓವರ್‌ನಲ್ಲಿ 20 ರನ್ ನೀಡಿದರು. ಈ ಓವರ್‌ನಲ್ಲಿ 4ನೇ ಎಸೆತ ನೋಬಾಲ್ ಆಗಿತ್ತು. ಆ ಎಸೆತವನ್ನು ರಶೀದ್ ಖಾನ್ ಬೌಂಡರಿಗೆ ಅಟ್ಟಿದ್ದರು.
Advertisement
WHAT. A. WIN 🔥🔥
The pair of R & R has done it against #RR 👏👏
Rahul Tewatia & Rashid Khan pull off a famous win in Jaipur 👏👏
Scorecard ▶️ https://t.co/1HcL9A97Ch#TATAIPL | #RRvGT pic.twitter.com/eImggsoNKB
— IndianPremierLeague (@IPL) April 10, 2024
Advertisement
ಕೊನೆಯ ಓವರ್‌ನಲ್ಲಿ 15 ರನ್ ಬೇಕಿತ್ತು. ಈ ವೇಳೆ ನಿಧಾನಗತಿಯ ಬೌಲಿಂಗ್ ಮಾಡಿದ್ದಕ್ಕೆ 4 ಆಟಗಾರರು ಮಾತ್ರ ಬೌಂಡರಿ ಬಳಿ ಫೀಲ್ಡಿಂಗ್ ಮಾಡಲು ಅವಕಾಶವಿತ್ತು. ಇದರ ಲಾಭವನ್ನು ರಶೀದ್ ಖಾನ್ ಮತ್ತು ತೆವಾಟಿಯ ಪಡೆದರು. ಅವೇಶ್ ಖಾನ್ ಎಸೆದ ಮೊದಲ ಎಸೆತವನ್ನು ರಶೀದ್ ಖಾನ್ ಬೌಂಡರಿಗೆ ಅಟ್ಟಿದರೆ ಎರಡನೇ ಎಸೆತದಲ್ಲಿ 2 ರನ್, ಮೂರನೇ ಎಸೆತದಲ್ಲಿ ಬೌಂಡರಿ ಹೊಡೆದರು. 4ನೇ ಎಸೆತದಲ್ಲಿ ಒಂದು ರನ್ ತೆಗೆದರೆ 5ನೇ ಎಸೆತದಲ್ಲಿ ಮೂರು ರನ್ ತೆಗೆಯುವಾಗ ತವಾಟಿಯಾ ರನೌಟ್ ಆದರು. ಕೊನೆಯ ಒಂದು ಎಸೆತದಲ್ಲಿ 2 ರನ್ ಬೇಕಿದ್ದಾಗ ರಶೀದ್ ಖಾನ್ ಬೌಂಡರಿ ಚಚ್ಚಿ ತಂಡಕ್ಕೆ ಗೆಲುವು ತಂದುಕೊಟ್ಟರು.
Advertisement
ಗುಜರಾತ್ ಪರ ನಾಯಕ ಶುಭಮನ್ ಗಿಲ್ 72 ರನ್(44 ಎಸೆತ, 6 ಬೌಂಡರಿ, 2 ಸಿಕ್ಸರ್) ಹೊಡೆದು ಔಟಾದರೆ ಸಾಯಿ ಸುದರ್ಶನ್ 35 ರನ್ (29 ಎಸೆತ, 3 ಬೌಂಡರಿ, 1 ಸಿಕ್ಸರ್) ಹೊಡೆದು ಔಟಾದರು.
Off-stump out off the ground 🤯
Kuldeep Sen, you BEAUTY! 🔥🔥
Watch the match LIVE on @StarSportsIndia and @JioCinema 💻📱#TATAIPL | #RRvGT pic.twitter.com/HZVJ1esWX4
— IndianPremierLeague (@IPL) April 10, 2024
ಮಧ್ಯಮ ಕ್ರಮಾಂಕದ ಆಟಗಾರರು ಬೇಗನೇ ಔಟಾದ ಪರಿಣಾಮ ಗುಜರಾತ್ ಸೋಲಿನ ಕಡೆ ಜಾರಿತ್ತು. ಆದರೆ ರಶೀದ್ ಖಾನ್ ಮತ್ತು ತೆವಾಟಿಯಾ 14 ಎಸೆತದಲ್ಲಿ 36 ರನ್ ಜೊತೆಯಾಟವಾಡಿ ತಂಡವನ್ನು ಗೆಲುವಿನ ದಡತ್ತ ತಂದರು. ರಶೀದ್ ಖಾನ್ ಔಟಾಗದೇ 24 ರನ್(11 ಎಸೆತ, 4 ಬೌಂಡರಿ) ತವಾಟಿಯಾ 22 ರನ್ (11 ಎಸೆತ, 3 ಬೌಂಡರಿ) ಹೊಡೆದರು.
Pleasing to the eye 😍
Shubman Gill gets going in the chase with elegance!
Watch the match LIVE on @StarSportsIndia and @JioCinema 💻📱#TATAIPL | #RRvGT pic.twitter.com/R6ie03D991
— IndianPremierLeague (@IPL) April 10, 2024
ಟಾಸ್ ಸೋತು ಮೊದಲು ಬ್ಯಾಟ್ ಮಾಡಿದ ರಾಜಸ್ಥಾನ 42 ರನ್ ಗಳಿಸುವಷ್ಟರಲ್ಲಿ ಯಶಸ್ವಿ ಜೈಸ್ವಾಲ್ 24 ರನ್(19 ಎಸೆತ, 5 ಬೌಂಡರ), ಜೋಸ್ ಬಟ್ಲರ್ ಅವರ ವಿಕೆಟ್ ಕಳೆದುಕೊಂಡಿತ್ತು. ಆರಂಭದಲ್ಲೇ ವಿಕೆಟ್ ಕಳೆದುಕೊಂಡರೂ ಸಂಜು ಸ್ಯಾಮ್ಸನ್ ಮತ್ತು ರಿಯಾನ್ ಪರಾಗ್ ನಿಧಾನವಾಗಿ ಇನ್ನಿಂಗ್ಸ್ ಕಟ್ಟಿದರು. ಇವರಿಬ್ಬರು ಮೂರನೇ ವಿಕೆಟಿಗೆ 78 ಎಸೆತಗಳಲ್ಲಿ 130 ರನ್ ಹೊಡೆದರು.
A solid catch puts an an end to a splendid innings!
Riyan Parag departs for 76 courtesy of Vijay Shankar's outfield brilliance 👏👏
Watch the match LIVE on @JioCinema and @StarSportsIndia 💻📱#TATAIPL | #RRvGT pic.twitter.com/F0h4bF27pl
— IndianPremierLeague (@IPL) April 10, 2024
ರಿಯಾನ್ ಪರಾಗ್ 76 ರನ್(48 ಎಸೆತ, 3 ಬೌಂಡರಿ, 5 ಸಿಕ್ಸರ್) ಹೊಡೆದು ಔಟಾದರೆ ನಾಯಕ ಸಾಮ್ಸನ್ ಔಟಾಗದೇ 68 ರನ್ (38 ಎಸೆತ, 7 ಬೌಂಡರಿ, 2 ಸಿಕ್ಸರ್), ಹೆಟ್ಮೇಯರ್ 13 ರನ್ (5 ಎಸೆತ, 1 ಬೌಂಡರಿ, 1 ಸಿಕ್ಸರ್) ಹೊಡೆದ ಪರಿಣಾಮ ರಾಜಸ್ಥಾನ 3 ವಿಕೆಟ್ ನಷ್ಟಕ್ಕೆ 196 ರನ್ ಹೊಡೆಯಿತು.
𝗣𝗮𝗿𝗮𝗴 𝗣𝗼𝘄𝗲𝗿! 💥💥
The in-form @rajasthanroyals batter smashes dual maximums against Noor Ahmad!
Watch the match LIVE on @JioCinema and @StarSportsIndia 💻📱#TATAIPL | #RRvGT pic.twitter.com/9YnmsVs8CC
— IndianPremierLeague (@IPL) April 10, 2024