ಮುಂಬೈ: ಸನ್ ರೈಸರ್ಸ್ ಹೈದರಾಬಾದ್ ವಿರುದ್ಧ ಕಣಕ್ಕಿಳಿಯುತ್ತಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ತಂಡಕ್ಕೆ ಗುರುವಾರದ ಪಂದ್ಯದ ಸೋಲು-ಗೆಲುವಿನ ಲೆಕ್ಕಾಚಾರದ ಮೇಲೆ ಮುಂದಿನ ಭವಿಷ್ಯ ನಿರ್ಧಾರವಾಗಲಿದೆ. ಎಲ್ಲವೂ ಅಂದುಕೊಂಡಂತೆ ನಡೆದರೆ, ಆರ್‌ಸಿಬಿ ಪ್ಲೇ ಆಫ್ (Playoffs) ಪ್ರವೇಶಿಸುವ ಅವಕಾಶ ಪಡೆದುಕೊಳ್ಳಲಿದೆ.
Advertisement
ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಕ್ಕೆ 2023ರ ಐಪಿಎಲ್ (IPL 2023) ಆವೃತ್ತಿಯಲ್ಲಿ ಪ್ಲೇ ಆಫ್‌ಗೆ ಅರ್ಹತೆ ಪಡೆಯಲು ಅತ್ಯುತ್ತಮ ಅವಕಾಶವಿದೆ. ಹಾಗಾಗಿ ತನ್ನ ಕೊನೆಯ ಎರಡೂ ಪಂದ್ಯಗಳು ಆರ್‌ಸಿಬಿ ಪಾಲಿಗೆ ನಿರ್ಣಾಯಕವಾಗಿದೆ. ಇದನ್ನೂ ಓದಿ: ಯಾರಾದ್ರು ಕೊಟ್ರೆ ನಾವೂ ತಿರುಗಿಸಿ ಕೊಡ್ತೀವಿ – ಮತ್ತೆ ಗಂಭೀರ್‌ಗೆ ಕೌಂಟರ್ ಕೊಟ್ಟ ಕಿಂಗ್ ಕೊಹ್ಲಿ
Advertisement
Advertisement
ಪ್ರಸ್ತುತ ಆರ್‌ಸಿಬಿಗೆ ಮುಂಬೈ ಇಂಡಿಯನ್ಸ್ (Mumbai Indians) ತಂಡದಿಂದ ಕಠಿಣ ಪೈಪೋಟಿ ಎದುರಾಗಿದೆ. ಮುಂಬೈ ಇಂಡಿಯನ್ಸ್ -0.128 ರನ್‌ರೇಟ್ ಹೊಂದಿದ್ದರೆ, ಆರ್‌ಸಿಬಿ +0.166 ರನ್‌ರೇಟ್‌ನೊಂದಿಗೆ 5ನೇ ಸ್ಥಾನದಲ್ಲಿದೆ. ಒಂದು ವೇಳೆ ಆರ್‌ಸಿಬಿ ಉಳಿದೆರಡು ಪಂದ್ಯಗಳಲ್ಲಿ ಗೆದ್ದರೆ ಪ್ಲೇ ಆಫ್ ಪ್ರವೇಶಿಸಲಿದೆ. ಮುಂಬೈ ರನ್ ರೇಟ್ ಕಡಿಮೆ ಇರುವುದರಿಂದ ಮುಂದಿನ ಪಂದ್ಯದಲ್ಲಿ ಗೆದ್ದು 15 ಅಂಕ ಪಡೆದರೂ ಆರ್‌ಸಿಬಿ 2 ಪಂದ್ಯಗಳಲ್ಲಿ ಗೆದ್ದರೆ ಪ್ಲೇ ಆಫ್ ಪ್ರವೇಶಿಸಬಹುದು. ಇದನ್ನೂ ಓದಿ: ನವೀನ್ ವಿರುದ್ಧ ಕಿತ್ತಾಡಿದ್ದಕ್ಕೆ ಕೊಹ್ಲಿಗೆ 1.07 ಕೋಟಿ ಲಾಸ್ – ಕೊಹ್ಲಿ, ಗಂಭೀರ್ ಕಿರಿಕ್‌ಗೆ ಕಾರಣ ಏನು?
Advertisement
ಹಾಗೆಯೇ ಚೆನ್ನೈ ಸೂಪರ್ ಕಿಂಗ್ಸ್ (CSK) ಹಾಗೂ ಲಕ್ನೋ ಸೂಪರ್ ಜೈಂಟ್ಸ್ (Lucknow Super Giants) ಉಳಿದ ಒಂದೊಂದು ಪಂದ್ಯಗಳಲ್ಲಿ ಜಯ ಸಾಧಿಸಿದರೆ, ಚೆನ್ನೈ 2 ಮತ್ತು ಲಕ್ನೋ 3ನೇ ಸ್ಥಾನದಲ್ಲಿ ಮುಂದುವರಿಯಲಿದೆ. ಆಗ ಮತ್ತೊಮ್ಮೆ ಪ್ಲೇ ಆಫ್‌ನ ಮೊದಲ ಎಲಿಮಿನೇಟರ್ ಪಂದ್ಯದಲ್ಲಿ ಲಕ್ನೋ ಸೂಪರ್ ಜೈಂಟ್ಸ್ ಹಾಗೂ ಆರ್‌ಸಿಬಿ ನಡುವೆ ಹೈವೋಲ್ಟೇಜ್ ಕದನ ಏರ್ಪಡಲಿದೆ. ಒಂದು ವೇಳೆ ಚೆನ್ನೈ ಸೋತು, ಲಕ್ನೋ ಗೆದ್ದರೆ ಲಕ್ನೋ 2ನೇ ಸ್ಥಾನಕ್ಕೆ ಜಿಗಿಯಲಿದೆ. ಆರ್‌ಸಿಬಿ ಚೆನ್ನೈನೊಂದಿಗೆ ಸೆಣಸಬೇಕಾಗುತ್ತದೆ.