ಮುಂಬೈ: ಮುಂಬೈ ಇಂಡಿಯನ್ಸ್ (Mumbai Indians) ಸ್ಟಾರ್ ಬ್ಯಾಟ್ಸ್‌ಮನ್ ಸೂರ್ಯಕುಮಾರ್ ಯಾದವ್ (Suryakumar Yadav) ವಾಂಖೆಡೆ ಸ್ಟೇಡಿಯಂನಲ್ಲಿ ಶನಿವಾರ ನಡೆದ ಟಿ20 (T20) ಪಂದ್ಯದಲ್ಲಿ 6,000 ರನ್‍ಗಳ ಗಡಿಯನ್ನು ದಾಟಿದ್ದಾರೆ.
ಮುಂಬೈನಲ್ಲಿ ನಡೆದ ಪಂಜಾಬ್ ಕಿಂಗ್ಸ್ (Punjab Kings) ವಿರುದ್ಧದ ಐಪಿಎಲ್ (IPL) ಪಂದ್ಯದಲ್ಲಿ, 215 ರನ್ ಚೇಸಿಂಗ್ ವೇಳೆ ಸೂರ್ಯಕುಮಾರ್ 26 ಎಸೆತಗಳಲ್ಲಿ 57 ರನ್ ಗಳಿಸಿದರು. ಅದರಲ್ಲಿ ಏಳು ಬೌಂಡರಿ ಮತ್ತು ಮೂರು ಸಿಕ್ಸರ್‌ಗಳನ್ನು ಸಿಡಿಸಿದ್ದರು. ಇದನ್ನೂ ಓದಿ: `ನಮ್ಮ ಹಸಿರು ಭೂಮಿಗಾಗಿʼ – ಪರಿಸರ ಕಾಳಜಿ ಸಂದೇಶ ಕೊಟ್ಟ RCB
Advertisement
Advertisement
ಈ ಇನ್ನಿಂಗ್ಸ್‌ನೊಂದಿಗೆ ಅವರು 248 ಪಂದ್ಯಗಳಲ್ಲಿ ಮತ್ತು 226 ಇನ್ನಿಂಗ್ಸ್‌ಗಳಲ್ಲಿ 34.01 ಸರಾಸರಿಯಲ್ಲಿ 6,021 ರನ್ ಗಳಿಸಿದ್ದಾರೆ. ಅವರ ರನ್ 149.55 ಸ್ಟ್ರೈಕ್ ರೇಟ್‍ನಲ್ಲಿದೆ. ಸೂರ್ಯಕುಮಾರ್ ಅವರ ಕ್ರಿಕೆಟ್ ಜೀವನದಲ್ಲಿ ಮೂರು ಶತಕಗಳು ಮತ್ತು 38 ಅರ್ಧ ಶತಕಗಳನ್ನು ಸಿಡಿಸಿದ್ದಾರೆ. ಈ ಮೂಲಕ ಟಿ20 ಕ್ರಿಕೆಟ್‍ನಲ್ಲಿ ಸೂರ್ಯಕುಮಾರ್ ಅವರ ಅಂತಾರಾಷ್ಟ್ರೀಯ ಮಟ್ಟದ ಅಂಕಿ ಅಂಶಗಳು ಅಭಿಮಾನಿಗಳನ್ನು ಬೆರಗುಗೊಳಿಸಿದೆ.
Advertisement
ಅವರು ಟೀಂ ಇಂಡಿಯಾ (Team India) ಆಟಗಾರರಾಗಿ ಮೂರು ಶತಕಗಳು ಮತ್ತು 13 ಅರ್ಧ ಶತಕಗಳನ್ನು ಸಿಡಿಸಿದ್ದಾರೆ. 2022ರ ಐಸಿಸಿ ಟಿ20 ಕ್ರಿಕೆಟರ್ ಪ್ರಶಸ್ತಿ ವಿಜೇತರಾಗಿದ್ದರು.
Advertisement
ಪಂದ್ಯದಲ್ಲಿ 215 ರನ್‍ಗಳನ್ನು ಬೆನ್ನಟ್ಟಿದ ಮುಂಬೈ ಇಶಾನ್ ಕಿಶನ್‍ನನ್ನು ಬೇಗನೆ ಕಳೆದುಕೊಂಡಿತು. ಆದರೆ ನಾಯಕ ರೋಹಿತ್ ಶರ್ಮಾ 27 ಎಸೆತಗಳಲ್ಲಿ ನಾಲ್ಕು ಬೌಂಡರಿ ಮತ್ತು ಮೂರು ಸಿಕ್ಸರ್‌ಗಳೊಂದಿಗೆ 44 ರನ್ ಸೇರಿಸಿದರು. 43 ಎಸೆತಗಳಲ್ಲಿ ಆರು ಬೌಂಡರಿ ಮತ್ತು ಮೂರು ಸಿಕ್ಸರ್‍ಗಳೊಂದಿಗೆ ಗ್ರೀನ್ 67 ರನ್ ಗಳಿಸಿದರು. ಸೂರ್ಯಕುಮಾರ್ ಯಾದವ್ 26 ಎಸೆತಗಳಲ್ಲಿ ಏಳು ಬೌಂಡರಿ ಮತ್ತು ಮೂರು ಸಿಕ್ಸರ್‍ನೊಂದಿಗೆ 57 ರನ್ ಗಳಿಸಿದರು. ಮುಂಬೈ ಉತ್ತಮ ಹೋರಾಟದ ನಡುವೆಯೂ ಸೋಲು ಕಂಡಿತು. ಪಂಜಾಬ್ ತಂಡ 13 ರನ್‍ಗಳಿಂದ ಗೆಲುವು ದಾಖಲಾಯಿತು.
ಈ ಗೆಲುವಿನೊಂದಿಗೆ ಪಂಜಾಬ್ ಏಳು ಪಂದ್ಯಗಳಲ್ಲಿ ನಾಲ್ಕು ಗೆಲುವು ಮತ್ತು ಮೂರು ಸೋಲು ಸೇರಿ ಒಟ್ಟು ಎಂಟು ಅಂಕಗಳೊಂದಿಗೆ ಐದನೇ ಸ್ಥಾನದಲ್ಲಿದೆ. ಮುಂಬೈ ಆರು ಪಂದ್ಯಗಳಲ್ಲಿ ಮೂರು ಗೆಲುವು ಮತ್ತು ಮೂರು ಸೋಲು ಕಂಡು ಒಟ್ಟು ಆರು ಅಂಕಗಳೊಂದಿಗೆ ಏಳನೇ ಸ್ಥಾನದಲ್ಲಿದೆ.
ಟಿ20ಯಲ್ಲಿ ವೇಗವಾಗಿ 6,000 ರನ್ ಗಳಿಸಿದ ಆಟಗಾರರು
ಆಂಡ್ರೆ ರಸೆಲ್ (3,550 ಎಸೆತಗಳಿಗೆ), ಗ್ಲೆನ್ ಮ್ಯಾಕ್ಸ್‌ವೆಲ್ (3,890 ಎಸೆತ), ಕೀರಾನ್ ಪೊಲಾರ್ಡ್ (3918 ಎಸೆತ), ಕ್ರಿಸ್ ಗೇಲ್ (4,008 ಎಸೆತ), ಸೂರ್ಯಕುಮಾರ್ ಯಾದವ್ 4,017 ಎಸೆತಗಳಿಗೆ 6,000 ರನ್ ಗಳಿಸಿದ್ದಾರೆ. ಇದನ್ನೂ ಓದಿ: ಒಂದೇ ಓವರ್‌ನಲ್ಲಿ 31 ರನ್ ಕೊಟ್ಟ ಅರ್ಜುನ್ ತೆಂಡೂಲ್ಕರ್; ಹರ್ಷ ತಂದ ಅರ್ಷ್‌ದೀಪ್ – ಪಂಜಾಬ್‌ಗೆ 13 ರನ್‌ಗಳ ಜಯ