ನವದೆಹಲಿ: ರಿಷಭ್ ಪಂತ್ (Rishabh Pant) ಡೆಲ್ಲಿ ಕ್ಯಾಪಿಟಲ್ಸ್ (Delhi Capitals) ತಂಡದ ಹೃದಯ ಮತ್ತು ಆತ್ಮವಿದ್ದಂತೆ ಎಂದು ಕೋಚ್ ರಿಕ್ಕಿ ಪಾಂಟಿಂಗ್ (Ricky Ponting) ಹೇಳಿದ್ದಾರೆ.
ಪಂತ್ ಅವರನ್ನು ನೆನಪಿಸಿಕೊಂಡ ಪಾಂಟಿಂಗ್, ಪ್ರತಿ ಪಂದ್ಯದಲ್ಲಿಯೂ ಡಗೌಟ್‍ನಲ್ಲಿ ನನ್ನ ಬಳಿಯೇ ಪಂತ್ ಕುಳಿತುಕೊಳ್ಳುತ್ತಿದ್ದರು. ಆದರೆ ಅದು ಈಗ ಸಾಧ್ಯವಾಗುತ್ತಿಲ್ಲ. ಅವರನ್ನು ಸಾಧ್ಯವಾದಷ್ಟು ರೀತಿಯಲ್ಲಿ ತಂಡದ ಭಾಗವಾಗಿ ಮಾಡಲು ಬಯಸುತ್ತೇವೆ. ನಾವು ಅವರ ಸಂಖ್ಯೆಯನ್ನು ಜೆರ್ಸಿ ಅಥವಾ ಕ್ಯಾಪ್‍ಗಳ ಮೇಲೆ ಇರಲಿದೆ. ಅವರ ಅನುಪಸ್ಥಿತಿಯಲ್ಲಿಯೂ ಅವರು ನಮ್ಮ ನಾಯಕರಾಗಿತ್ತಾರೆ ಎಂದಿದ್ದಾರೆ. ಇದನ್ನೂ ಓದಿ: IPL 2023: ಕಣಕ್ಕಿಳಿಯಲು RCB, CSK ಬಲಿಷ್ಠ ತಂಡ ರೆಡಿ – ಈ ಸಲ ಕಪ್ ಯಾರದ್ದು?
ಅಪಘಾತದಿಂದಾಗಿ ತೀವ್ರ ಗಾಯಗೊಂಡಿದ್ದ ಕ್ಯಾಪ್ಟನ್ ರಿಷಭ್ ಪಂತ್ ಚೇತರಿಸಿಕೊಳ್ಳುತ್ತಿದ್ದು ಈ ಬಾರಿಯ ಐಪಿಎಲ್‍ನಲ್ಲಿ ಆಡುತ್ತಿಲ್ಲ. ಪಂತ್ ಗೈರಿನಲ್ಲಿ ತಂಡವನ್ನು ಡೆವಿಡ್ ವಾರ್ನರ್ (David Warner) ಮುನ್ನಡೆಸಲಿದ್ದಾರೆ. ಆದರೆ ವಾರ್ನರ್ ನಾಯಕತ್ವ ವಿಚಾರ ಇನ್ನೂ ಅಂತಿಮಗೊಳಿಸಿಲ್ಲ
ಕಳೆದ ಆವೃತ್ತಿಯಲ್ಲಿ ದೆಹಲಿ ಕ್ಯಾಪಿಟಲ್ಸ್ 14 ಪಂದ್ಯಗಳಲ್ಲಿ ಏಳರಲ್ಲಿ ಗೆಲುವು ಸಾಧಿಸಿ, ಐದನೇ ಸ್ಥಾನವನ್ನು ಪಡೆದಿತ್ತು. ಏ.1ರಂದು ಲಕ್ನೋದಲ್ಲಿ ನಡೆಯಲಿರುವ ಆರಂಭಿಕ ಐಪಿಎಲ್ (IPL) ಪಂದ್ಯದಲ್ಲಿ ಲಕ್ನೋ ಸೂಪರ್ ಜೈಂಟ್ಸ್ ( Lucknow Super Giants) ವಿರುದ್ಧ ಸೆಣಸಲಿದೆ. ಇದನ್ನೂ ಓದಿ: ವೈಯಕ್ತಿಕ ವಿಷಯ ಬಿಟ್ಟು ತಂಡ ಬಲಗೊಳಿಸಿ ರೋಹಿತ್ ಶರ್ಮಾಗೆ ಗವಾಸ್ಕರ್ ಸಲಹೆ