ಲಕ್ನೋ: ಹಾರ್ದಿಕ್ ಪಾಂಡ್ಯ (Hardik Pandya) ಅರ್ಧಶತಕದ ಬ್ಯಾಟಿಂಗ್ ಹಾಗೂ ಸಂಘಟಿತ ಬೌಲಿಂಗ್ ದಾಳಿ ನೆರವಿನಿಂದ ಗುಜರಾತ್ ಟೈಟಾನ್ಸ್ (Gujarat Titans), ಲಕ್ನೋ ಸೂಪರ್ ಜೈಂಟ್ಸ್ (Lucknow Super Giants) ವಿರುದ್ಧ 7 ರನ್‌ಗಳ ರೋಚಕ ಜಯ ಸಾಧಿಸಿದೆ.
ಹಾಲಿ ಚಾಂಪಿಯನ್ಸ್ ಗುಜರಾತ್ ಟೈಟಾನ್ಸ್ ಹಾಗೂ ಲಕ್ನೋ ಸೂಪರ್ ಜೈಂಟ್ಸ್ ತಂಡಗಳು ಶನಿವಾರ ಮುಖಾಮುಖಿಯಾಗಿದ್ದವು. ಇತ್ತಂಡಗಳೂ ನೀರಸ ಬ್ಯಾಟಿಂಗ್ ಪ್ರದರ್ಶನ ನೀಡಿದ ಈ ಪಂದ್ಯದಲ್ಲಿ ಟೈಟಾನ್ಸ್ 7 ರನ್‌ಗಳ ರೋಚಕ ಜಯ ಸಾಧಿಸಿತು. ಇದನ್ನೂ ಓದಿ: ಜಡೇಜಾ ಜಾದು, ಕಾನ್ವೆ ಕಿಕ್ – ತವರಿನಲ್ಲಿ ತಿಣುಕಾಡಿ ಗೆದ್ದ ಚೆನ್ನೈ; ಹೈದರಾಬಾದ್ ವಿರುದ್ಧ 7 ವಿಕೆಟ್‌ಗಳ ಜಯ
Advertisement
Advertisement
ಲಕ್ನೋನ ಅಟಲ್ ಬಿಹಾರಿ ವಾಜಪೇಯಿ ಅಂತಾರಾಷ್ಟ್ರೀಯ ಕ್ರಿಕೆಟ್ ಅಂಗಳದಲ್ಲಿ ನಡೆದ ಪಂದ್ಯದಲ್ಲಿ ಟಾಸ್ ಗೆದ್ದ ಗುಜರಾತ್ ಮೊದಲು ಮಾಡಿ, 20 ಓವರ್‌ಗಳಲ್ಲಿ 6 ವಿಕೆಟ್ ನಷ್ಟಕ್ಕೆ ಕೇವಲ 135 ರನ್ ಕಲೆಹಾಕಿತು. 136 ರನ್‌ಗಳ ಅಲ್ಪ ಮೊತ್ತದ ಗುರಿ ಪಡೆದ ಲಕ್ನೋ ಸೂಪರ್ ಜೈಂಟ್ಸ್ 20 ಓವರ್‌ಗಳಲ್ಲಿ 7 ವಿಕೆಟ್ ನಷ್ಟಕ್ಕೆ ಕೇವಲ 128 ರನ್ ಗಳಿಸಿ ಸೋಲು ಕಂಡಿತು. ಕಡಿಮೆ ಗುರಿಯನ್ನೂ ತಲುಪಲಾಗದೇ ಲಕ್ನೋ ಸೂಪರ್ ಜೈಂಟ್ಸ್ ತೀವ್ರ ಮುಖಭಂಗ ಅನುಭವಿಸಿತು.
Advertisement
Advertisement
ನಾಯಕರದ್ದೇ ಆಟ: ಶನಿವಾರ ನಡೆದ ಪಂದ್ಯದಲ್ಲಿ ಇತ್ತಂಡಗಳಲ್ಲೂ ನಾಯಕರ ಆಟವೇ ಪ್ರಮುಖವಾಗಿತ್ತು. ಟೈಟಾನ್ಸ್ ಪರ ನಾಯಕ ಹಾರ್ದಿಕ್ ಪಾಂಡ್ಯ 66 ರನ್ (50 ಎಸೆತ, 4 ಸಿಕ್ಸರ್, 2 ಬೌಂಡರಿ) ಗಳಿಸಿದರು. ಇದರೊಂದಿಗೆ ಆರಂಭಿಕನಾಗಿ ಕಣಕ್ಕಿಳಿದ ವೃದ್ಧಿಮಾನ್ ಸಾಹಾ 47 ರನ್ (37 ಎಸೆತ, 6 ಬೌಂಡರಿ) ಗಳ ಕೊಡುಗೆ ನೀಡಿದರು. ಇದನ್ನೂ ಓದಿ: IPL Playoffs Schedule: ಮೋದಿ ಕ್ರೀಡಾಂಗಣದಲ್ಲಿ ಐಪಿಎಲ್ ಫೈನಲ್
ಇನ್ನೂ ಲಕ್ನೋ ಸೂಪರ್ ಜೈಂಟ್ಸ್ ಪರ ಆರಂಭಿಕನಾಗಿ ಕಣಕ್ಕಿಳಿದ ನಾಯಕ ಕೆ.ಎಲ್ ರಾಹುಲ್ (KL Rahul) ಮಂದಗತಿಯ ಬ್ಯಾಟಿಂಗ್ ನಡೆಸಿದರು. 8 ಬೌಂಡರಿಗಳೊಂದಿಗೆ 61 ಎಸೆತಗಳಲ್ಲಿ ಕೇವಲ 68 ರನ್ ಗಳಿಸಿದರು. ಇದರೊಂದಿಗೆ ಕೇಲ್ ಮೇಯರ್ಸ್ 24 ರನ್ ಹಾಗೂ ಕೃನಾಲ್ ಪಾಂಡ್ಯ 23 ರನ್ ಗಳಿಸಿದ್ದರು. ಉಳಿದಂತೆ ಇತ್ತಂಡದ ಬ್ಯಾಟರ್‌ಗಳಿಂದ ನೀರಸ ಪ್ರದರ್ಶನ ಕಂಡುಬಂದಿತು.
ಅಂತಿಮವಾಗಿ ಗುಜರಾತ್ ಟೈಟಾನ್ಸ್ ಲಕ್ನೋ ತವರಿನಲ್ಲಿ ಗೆದ್ದು ಬೀಗಿತು. ಲಕ್ನೋ ಸೂಪರ್ ಜೈಂಟ್ಸ್ ಪರ ಕೃನಾಲ್ ಪಾಂಡ್ಯ, ಮಾರ್ಕಸ್ ಸ್ಟೋಯ್ನಿಸ್ ತಲಾ 2 ವಿಕೆಟ್ ಕಿತ್ತರೆ, ನವೀನ್-ಉಲ್-ಹಕ್ ಹಾಗೂ ಅಮಿತ್ ಮಿಶ್ರಾ ತಲಾ ಒಂದೊಂದು ವಿಕೆಟ್ ಪಡೆದರು. ಗುಜರಾತ್ ಪರ ರಶೀದ್ ಖಾನ್ 1 ವಿಕೆಟ್ ಪಡೆದರೆ, ಮೋಹಿತ್ ಶರ್ಮಾ, ನೂರ್ ಅಹ್ಮದ್ ತಲಾ 2 ವಿಕೆಟ್ ಕಿತ್ತರು.