IPL 2023: ಮೋದಿ ಕ್ರೀಡಾಂಗಣದಲ್ಲಿ ಹ್ಯಾಟ್ರಿಕ್‌ ಸಾಧನೆ ಮಾಡಿದ ರಶೀದ್‌ ಖಾನ್‌

Public TV
1 Min Read
Rashid Khan

ಅಹಮದಾಬಾದ್‌: ಇಲ್ಲಿನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ (Narendra Modi Stadium) ಭಾನುವಾರ ಕೋಲ್ಕತ್ತಾ ನೈಟ್‌ರೈಡರ್ಸ್‌ ವಿರುದ್ಧ ನಡೆದ ಪಂದ್ಯದಲ್ಲಿ ಗುಜರಾತ್‌ ಟೈಟಾನ್ಸ್‌ (Gujarat Titans) ಹಾಗೂ ಅಫ್ಘಾನಿಸ್ತಾನದ ಸ್ಪಿನ್‌ ಮಾಂತ್ರಿಕ ರಶೀದ್‌ ಖಾನ್‌ (Rashid Khan) ಹ್ಯಾಟ್ರಿಕ್‌ ವಿಕೆಟ್‌ ಪಡೆದ ಸಾಧನೆ ಮಾಡಿದ್ದಾರೆ.

Rashid Khan 2

ಕೆಕೆಆರ್‌ (KKR) ವಿರುದ್ಧ ನಡೆದ ಪಂದ್ಯದಲ್ಲಿ ತಂಡದ ಗೆಲುವಿಗೆ ಕೊನೆಯ 4 ಓವರ್‌ಗಳಲ್ಲಿ 50 ರನ್‌ಗಳ ಅಗತ್ಯವಿತ್ತು. ಈ ವೇಳೆ 17ನೇ ಓವರ್‌ನಲ್ಲಿ ಬೌಲಿಂಗ್‌ ಮಾಡಿದ ರಶೀದ್‌ ಖಾನ್‌ ಮೊದಲ ಎಸೆತದಲ್ಲೇ ಆ್ಯಂಡ್ರೆ ರಸ್ಸೆಲ್‌ (1 ರನ್‌) ವಿಕೆಟ್‌ ಪಡೆದರು. 2ನೇ ಎಸೆತದಲ್ಲಿ ಸುನೀಲ್‌ ನರೇನ್‌ ಅವರನ್ನ ಡಕೌಟ್‌ ಮಾಡಿದರು. 3ನೇ ಎಸೆತದಲ್ಲಿ ಶಾರ್ದೂಲ್‌ ಠಾಕೂರ್‌ ಅವರನ್ನ ಔಟ್‌ ಮಾಡುವ ಮೂಲಕ ರಶೀದ್ ಖಾನ್ ಹ್ಯಾಟ್ರಿಕ್ ಸಾಧನೆ ಮಾಡಿದರು. ಇದನ್ನೂ ಓದಿ: IPL 2023: ವಿರಾಟ್‌ ಕೊಹ್ಲಿ ಐಪಿಎಲ್‌ ದಾಖಲೆ ಉಡೀಸ್‌ ಮಾಡಿದ ವಾರ್ನರ್‌

Rashid Khan 3

ಐಪಿಎಲ್‌ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ರಶೀದ್‌ ಖಾನ್‌ ಹ್ಯಾಟ್ರಿಕ್‌ ಪಡೆದಿದ್ದಾರೆ. ಈ ಮೂಲಕ ಹ್ಯಾಟ್ರಿಕ್‌ ಸಾಧನೆ ಮಾಡಿದ ಅಫ್ಘಾನಿಸ್ತಾನದ ಮೊದಲ ಬೌಲರ್ ಸಹ ಎನಿಸಿಕೊಂಡಿದ್ದಾರೆ. ಇದನ್ನೂ ಓದಿ: IPL 2023: ಕೊನೆಯ ಓವರ್‌ನಲ್ಲಿ 6, 6, 6, 6, 6 -‌ KKRಗೆ 3 ವಿಕೆಟ್‌ಗಳ ರೋಚಕ ಜಯ

IPL 2023 Gujarat Taitans 2

ಹ್ಯಾಟ್ರಿಕ್‌ ಪಡೆದ 22ನೇ ಆಟಗಾರ: ಐಪಿಎಲ್‌ನಲ್ಲಿ ರಶೀದ್‌ ಖಾನ್‌ ಹ್ಯಾಟ್ರಿಕ್‌ ವಿಕೆಟ್‌ ಪಡೆದ 18ನೇ ಬೌಲರ್‌ ಆಗಿದ್ದಾರೆ. ಅಲ್ಲದೇ ಇದು ಐಪಿಎಲ್‌ ಇತಿಹಾಸದಲ್ಲಿ 22ನೇ ಹ್ಯಾಟ್ರಿಕ್‌ ಆಗಿದೆ. ಚೆನ್ನೈ ಸೂಪರ್‌ ಕಿಂಗ್ಸ್‌ ತಂಡದಲ್ಲಿದ್ದ ಟೀಂ ಇಂಡಿಯಾ ಮಾಜಿ ಕ್ರಿಕೆಟಿಗ ಲಕ್ಷ್ಮಿಪತಿ ಬಾಲಾಜಿ ಐಪಿಎಲ್‌ ಉದ್ಘಾಟನಾ ಆವೃತ್ತಿಯಲ್ಲೇ ಕಿಂಗ್ಸ್‌ XI ಪಂಜಾಬ್‌ (ಇಂದಿನ ಕಿಂಗ್ಸ್‌ ಪಂಜಾಬ್‌ ತಂಡ) ವಿರುದ್ಧ ನಡೆದ ಪಂದ್ಯದಲ್ಲಿ ಹ್ಯಾಟ್ರಿಕ್‌ ಪಡೆದ ಮೊದಲಿಗನಾಗಿದ್ದಾರೆ.

Share This Article