15ರ ಬಾಲಕನಿಗೆ ಕೈತಪ್ಪಿದ ಅವಕಾಶ ಹಿರಿಯ ಅಟಗಾರನಿಗೆ ಮಣೆ – 10 ತಂಡಗಳ ಫೈನಲ್ ಲಿಸ್ಟ್

Public TV
8 Min Read
IPL AUCTION 1 2

ಮುಂಬೈ: ದೇವರ ನಾಡು ಕೇರಳದಲ್ಲಿ ನಿನ್ನೆ ನಡೆದ ಐಪಿಎಲ್ ಮಿನಿ ಹರಾಜಿನಲ್ಲಿ (IPL Auction 2023) ಕೆಲ ಆಟಗಾರರು ದಾಖಲೆಯ ಮೊತ್ತಕ್ಕೆ ಸೇಲ್ ಆದರೆ, ಇನ್ನೂ ಕೆಲ ಸ್ಟಾರ್ ಪ್ಲೇಯರ್ಸ್‌ ಎಂಬ ಹಣೆಪಟ್ಟಿ ಹೊಂದಿದ್ದ ಆಟಗಾರರು ಅನ್‍ಸೋಲ್ಡ್ ಆದರು. ಈ ನಡುವೆ ಭರವಸೆ ಮೂಡಿಸಿದ್ದ 15ರ ಬಾಲಕ ಅಲ್ಲಾ ಮೊಹಮ್ಮದ್ ಘಜನ್ಫರ್ (Allah Mohammed Ghazanfar) ಅನ್‍ಸೋಲ್ಡ್ (Unsold) ಆಗಿದ್ದಾನೆ.

IPL AUCTION 2 1

ಅಫ್ಘಾನಿಸ್ತಾನ ಮೂಲದ ಅಲ್ಲಾ ಮೊಹಮ್ಮದ್ ಘಜನ್ಫರ್ ಹರಾಜಿನಲ್ಲಿ ಹೆಸರು ನೋದಾಯಿಸಿಕೊಂಡಿದ್ದ ಅತಿ ಕಿರಿಯ ಆಟಗಾರ ಆದರೆ, ಆತನ ಹೆಸರು ಅಂತಿಮ ಪಟ್ಟಿಗೆ ಬರಲೇ ಇಲ್ಲ. ಈ ಮೂಲಕ ಅನ್‍ಸೋಲ್ಡ್ ಆಗಿದ್ದಾನೆ. ಇನ್ನೂ ಈ ಬಾರಿ ಹರಾಜಿನಲ್ಲಿ ಕಾಣಿಸಿಕೊಂಡಿದ್ದ 40 ವರ್ಷದ ಹಿರಿಯ ಆಟಗಾರ ಎನಿಸಿಕೊಂಡಿದ್ದ ಅಮಿತ್ ಮಿಶ್ರಾರನ್ನು (Amit Mishra) 50 ಲಕ್ಷ ರೂ. ನೀಡಿ ಲಕ್ನೋ ಸೂಪರ್ ಜೈಂಟ್ಸ್ ಖರೀದಿಸಿದೆ.

AMITH MISHRA

ಈ ಬಾರಿ ಮಿನಿ ಹರಾಜಿನಲ್ಲಿ ಸ್ಯಾಮ್ ಕರ್ರನ್ (Sam Curran) 18.50 ಕೋಟಿ ರೂ. ದಾಖಲೆ ಮೊತ್ತಕ್ಕೆ ಪಂಜಾಬ್ ಪಾಲಾದರೆ, ಕ್ಯಾಮರೂನ್ ಗ್ರೀನ್ 17.50 ಕೋಟಿ ರೂ. ಮುಂಬೈ, ಬೆನ್‍ಸ್ಟೋಕ್ಸ್ 16.25 ಕೋಟಿ ರೂ. ಚೆನ್ನೈ, ನಿಕೋಲಸ್ ಪೂರನ್ 16 ಕೋಟಿ ರೂ. ಲಕ್ನೋ, ಹ್ಯಾರಿ ಬ್ರೂಕ್ 13.25 ಕೋಟಿ ರೂ. ನೀಡಿ ಹೈದರಾಬಾದ್ ಖರೀದಿಸುವ ಮೂಲಕ ಟಾಪ್ ಬಿಕರಿ ಆಟಗಾರರಾಗಿ ಕಾಣಿಸಿಕೊಂಡರು. ಮೊಹಮ್ಮದ್‌ ನಬಿ, ಜೆಮ್ಮಿ ನಿಶಾಮ್‌, ಜೋರ್ಡನ್‌, ಕುಶಲ್‌ ಮೆಂಡಿಸ್‌ ಸಹಿತ ಕೆಲ ಸ್ಟಾರ್‌ ಪ್ಲೇಯರ್ಸ್‌ ಅನ್‌ಸೋಲ್ಡ್‌ ಆದರು. ಇದನ್ನೂ ಓದಿ: ಐಪಿಎಲ್ ಮಿನಿ ಹರಾಜು ಹೈಲೈಟ್ಸ್ – ಸುತ್ತಿಗೆಯ ಹೊಡೆತಕ್ಕೆ ಕಾಯುತ್ತಿದ್ದಾನೆ 15ರ ಬಾಲಕ

Allah Mohammed Ghazanfar

ಉಳಿದಂತೆ ಯಾವ ತಂಡ ಎಷ್ಟು ಮೊತ್ತಕ್ಕೆ ಯಾವ ಆಟಗಾರರನ್ನು ಖರೀದಿಸಿದೆ ಎಂಬ ಸಂಪೂರ್ಣ ಮಾಹಿತಿ ಇಲ್ಲಿದೆ.

ರಾಯಲ್ ಚಾಲೆಂಜರ್ಸ್ ಬೆಂಗಳೂರು
ಉಳಿಸಿಕೊಂಡಿರುವ ಆಟಗಾರರು: ಫಾಫ್ ಡು ಪ್ಲೆಸಿಸ್, ವಿರಾಟ್ ಕೊಹ್ಲಿ, ದಿನೇಶ್ ಕಾರ್ತಿಕ್, ಮಹಿಪಾಲ್ ಲೊಮ್ರೋರ್, ಫಿನ್ ಅಲೆನ್, ರಜತ್ ಪಾಟಿದಾರ್, ಅನುಜ್ ರಾವತ್, ಗ್ಲೆನ್ ಮ್ಯಾಕ್ಸ್‍ವೆಲ್, ಡೇವಿಡ್ ವಿಲ್ಲಿ, ವನಿಂದು ಹಸರಂಗ, ಶಹಬಾಜ್ ಅಹ್ಮದ್, ಸುಯಶ್ ಪ್ರಭುದೇಸಾಯಿ, ಹರ್ಷಲ್ ಪಟೇಲ್, ಮೊಹಮ್ಮದ್ ಸಿರಾಜ್, ಜೋಶ್ ಹ್ಯಾಜಲ್‍ವುಡ್ ಮತ್ತು ಕರಣ್ ಶರ್ಮಾ

Sam Curran

ಖರೀದಿಸಿದ ಆಟಗಾರರು: ವಿಲ್ ಜಾಕ್ಸ್ (3.2 ಕೋಟಿ ರೂ.), ರೀಸ್ ಟಾಪ್ಲಿ (1.9 ಕೋಟಿ ರೂ.), ಸೋನು ಯಾದವ್ (20 ಲಕ್ಷ ರೂ.), ಅವಿನಾಶ್ ಸಿಂಗ್ (60 ಲಕ್ಷ ರೂ.), ರಾಜನ್ ಕುಮಾರ್ (70 ಲಕ್ಷ ರೂ.), ಮನೋಜ್ ಭಾಂಡಗೆ (20 ಲಕ್ಷ ರೂ.), ಹಿಮಾಂಶು ಶರ್ಮಾ (20 ಲಕ್ಷ ರೂ.). ಇದನ್ನೂ ಓದಿ: ಐಪಿಎಲ್ ಇತಿಹಾಸದಲ್ಲೇ ದುಬಾರಿ ಆಟಗಾರ – 18.50 ಕೋಟಿ ರೂ.ಗೆ ಬಿಕರಿಯಾದ ಸ್ಯಾಮ್ ಕರ್ರನ್

ಚೆನ್ನೈ ಸೂಪರ್ ಕಿಂಗ್ಸ್
ಉಳಿಸಿಕೊಂಡಿರುವ ಆಟಗಾರರು: ಮಹೇಂದ್ರ ಸಿಂಗ್ ಧೋನಿ, ರವೀಂದ್ರ ಜಡೇಜಾ, ಡೆವೊನ್ ಕಾನ್ವೆ, ಮೊಯಿನ್ ಅಲಿ, ಋತುರಾಜ್ ಗಾಯಕ್ವಾಡ್, ಶಿವಂ ದುಬೆ, ಅಂಬಾಟಿ ರಾಯುಡು, ಡ್ವೈನ್ ಪ್ರಿಟೋರಿಯಸ್, ಮಹೇಶ್ ತೀಕ್ಷಣ, ಪ್ರಶಾಂತ್ ಸೋಲಂಕಿ, ದೀಪಕ್ ಚಾಹರ್, ಮುಖೇಶ್ ಚೌಧರಿ, ತುಸ್ಹರ್ಜೀತ್ ಸಿಂಗ್, ಸಿಮರ್ಜೀತ್ ಸಿಂಗ್, ರಾಜವರ್ಧನ್ ಹಂಗರ್ಗೇಕರ್, ಮಿಚೆಲ್ ಸ್ಯಾಂಟ್ನರ್, ಮಥೀಶ್ ಪತಿರಾನ, ಸುಭ್ರಾಂಶು ಸೇನಾಪತಿ

Ben Stokes 1

ಖರೀದಿಸಿದ ಆಟಗಾರರು: ಬೆನ್ ಸ್ಟೋಕ್ಸ್ (16.25 ಕೋಟಿ ರೂ.), ಕೈಲ್ ಜೇಮಿಸನ್ (1 ಕೋಟಿ ರೂ.), ಅಜಿಂಕ್ಯಾ ರಹಾನೆ (50 ಲಕ್ಷ ರೂ.) ಭಗತ್ ವರ್ಮಾ (20 ಲಕ್ಷ ರೂ.), ಅಜಯ್ ಮಂಡಲ್ (20 ಲಕ್ಷ ರೂ.), ನಿಶಾಂತ್ ಸಿಂಧು (60 ಲಕ್ಷ ರೂ.), ಶೇಕ್ ರಶೀದ್ (20 ಲಕ್ಷ ರೂ.),

ಲಕ್ನೋ ಸೂಪರ್ ಜೈಂಟ್ಸ್
ಉಳಿಸಿಕೊಂಡಿರುವ ಆಟಗಾರರು: ಕೆಎಲ್ ರಾಹುಲ್, ಕ್ವಿಂಟನ್ ಡಿ ಕಾಕ್, ಮನನ್ ವೋಹ್ರಾ, ಆಯುಷ್ ಬಡೋನಿ, ದೀಪಕ್ ಹೂಡಾ, ಕೃನಾಲ್ ಪಾಂಡ್ಯ, ಮಾರ್ಕಸ್ ಸ್ಟೋನಿಸ್, ಕೈಲ್ ಮೇಯರ್ಸ್, ಕರಣ್ ಶರ್ಮಾ, ಕೆ ಗೌತಮ್, ಅವೇಶ್ ಖಾನ್, ಮೊಹ್ಸಿನ್ ಖಾನ್, ರವಿ ಬಿಷ್ಣೋಯ್, ಮಾರ್ಕ್ ವುಡ್, ಮಯಾಂಕ್ ಯಾದವ್.

ಖರೀದಿಸಿದ ಆಟಗಾರರು: ನಿಕೋಲಸ್ ಪೂರನ್ (16 ಕೋಟಿ ರೂ.), ಯುಧ್ವೀರ್ ಚರಕ್ (20 ಲಕ್ಷ ರೂ.), ನವೀನ್-ಉಲ್-ಹಕ್ (50 ಲಕ್ಷ ರೂ.), ಸ್ವಪ್ನಿಲ್ ಸಿಂಗ್ (20 ಲಕ್ಷ ರೂ.), ಪ್ರೇರಕ್ ಮಂಕಡ್ (20 ಲಕ್ಷ ರೂ.), ಅಮಿತ್ ಮಿಶ್ರಾ (50 ಲಕ್ಷ ರೂ.), ಡೇನಿಯಲ್ ಸ್ಯಾಮ್ಸ್ (75 ಲಕ್ಷ ರೂ.), ರೊಮಾರಿಯೋ ಶೆಫರ್ಡ್ (50 ಲಕ್ಷ ರೂ.), ಯಶ್ ಠಾಕೂರ್ (45 ಲಕ್ಷ ರೂ.), ಜಯದೇವ್ ಉನಾದ್ಕತ್ (50 ಲಕ್ಷ ರೂ.),

sam curran Ben Stokes Cameron Green

ಸನ್ ರೈಸರ್ಸ್ ಹೈದರಾಬಾದ್
ಉಳಿಸಿಕೊಂಡಿರುವ ಆಟಗಾರರು: ರಾಹುಲ್ ತ್ರಿಪಾಠಿ, ಗ್ಲೆನ್ ಫಿಲಿಪ್ಸ್, ಅಭಿಷೇಕ್ ಶರ್ಮಾ, ಏಡೆನ್ ಮಾಕ್ರ್ರಾಮ್, ಅಬ್ದುಲ್ ಸಮದ್, ವಾಷಿಂಗ್ಟನ್ ಸುಂದರ್, ಮಾರ್ಕೊ ಜಾನ್ಸೆನ್, ಭುವನೇಶ್ವರ್ ಕುಮಾರ್, ಉಮ್ರಾನ್ ಮಲಿಕ್, ಟಿ ನಟರಾಜನ್, ಕಾರ್ತಿಕ್ ತ್ಯಾಗಿ, ಫಜಲ್ಹಕ್ ಫಾರೂಕಿ. ಇದನ್ನೂ ಓದಿ: ಐಪಿಎಲ್‌ನಲ್ಲಿ ಪಾಕ್‌ ಮೂಲದ ಆಟಗಾರ – ಪಂಜಾಬ್‌ ಪಾಲಾದ ರಾಜಾ

ಖರೀದಿಸಿದ ಆಟಗಾರರು: ಹೆನ್ರಿಚ್ ಕ್ಲಾಸೆನ್ (5.25 ಕೋಟಿ ರೂ.), ಮಯಾಂಕ್ ಅಗರ್ವಾಲ್ (8.25 ಕೋಟಿ ರೂ.), ಹ್ಯಾರಿ ಬ್ರೂಕ್ (13.25 ಕೋಟಿ ರೂ.), ಅನ್ಮೋಲ್‍ಪ್ರೀತ್ ಸಿಂಗ್ (20 ಲಕ್ಷ ರೂ.), ಅಕೇಲ್ ಹೊಸೈನ್ (1 ಕೋಟಿ ರೂ.), ನಿತೀಶ್ ಕುಮಾರ್ ರೆಡ್ಡಿ (20 ಲಕ್ಷ ರೂ.), ಮಯಾಂಕ್ ದಾಗರ್ (1.8 ಕೋಟಿ ರೂ.), ಉಪೇಂದ್ರ ಯಾದವ್ (25 ಲಕ್ಷ ರೂ.), ಸನ್ವಿರ್ ಸಿಂಗ್ (20 ಲಕ್ಷ ರೂ.), ಸಮರ್ಥ ವ್ಯಾಸ್ (20 ಲಕ್ಷ ರೂ.), ವಿವ್ರಾಂತ್ ಶರ್ಮಾ (2.6 ಕೋಟಿ ರೂ.), ಮಯಾಂಕ್ ಮಾರ್ಕಾಂಡೆ (50 ಲಕ್ಷ ರೂ.), ಆದಿಲ್ ರಶೀದ್ (2 ಕೋಟಿ ರೂ.).

ಮುಂಬೈ ಇಂಡಿಯನ್ಸ್
ಉಳಿಸಿಕೊಂಡಿರುವ ಆಟಗಾರರು: ರೋಹಿತ್ ಶರ್ಮಾ, ಸೂರ್ಯಕುಮಾರ್ ಯಾದವ್, ಇಶಾನ್ ಕಿಶನ್, ಡೆವಾಲ್ಡ್ ಬ್ರೆವಿಸ್, ತಿಲಕ್ ವರ್ಮಾ, ಟ್ರಿಸ್ಟಾನ್ ಸ್ಟಬ್ಸ್, ರಮಣದೀಪ್ ಸಿಂಗ್, ಟಿಮ್ ಡೇವಿಡ್, ಜಸ್ಪ್ರೀತ್ ಬುಮ್ರಾ, ಜೋಫ್ರಾ ಆರ್ಚರ್, ಹೃತಿಕ್ ಶೋಕೀನ್, ಕುಮಾರ್ ಕಾರ್ತಿಕೇಯ, ಜೇಸನ್ ಬೆಹ್ರೆನ್‍ಡಾರ್ಫ್, ಅರ್ಜುನ್ ತೆಂಡೂಲ್ಕರ್, ಅರ್ಷದ್, ಆಕಾಶ್ ಮಧ್ವಲ್

IPL AUCTION 1 3

ಖರೀದಿಸಿದ ಆಟಗಾರರು: ಜೋ ರಿಚಡ್ರ್ಸನ್ (1.5 ಕೋಟಿ ರೂ.), ಕ್ಯಾಮರೂನ್ ಗ್ರೀನ್ (17.5 ಕೋಟಿ ರೂ.), ರಾಘವ್ ಗೋಯಲ್ (20 ಲಕ್ಷ ರೂ.), ನೆಹಾಲ್ ವಧೇರಾ (20 ಲಕ್ಷ ರೂ.), ಶಮ್ಸ್ ಮುಲಾನಿ (20 ಲಕ್ಷ ರೂ.), ವಿಷ್ಣು ವಿನೋದ್ (20 ಲಕ್ಷ ರೂ.), ದುವಾನ್ ಜಾನ್ಸೆನ್ (20 ಲಕ್ಷ ರೂ.), ಪಿಯೂಷ್ ಚಾವ್ಲಾ (20 ಲಕ್ಷ ರೂ.)

ಪಂಜಾಬ್ ಕಿಂಗ್ಸ್
ಉಳಿಸಿಕೊಂಡಿರುವ ಆಟಗಾರರು: ಶಿಖರ್ ಧವನ್, ಜಾನಿ ಬೈರ್‍ಸ್ಟೋವ್, ಭಾನುಕಾ ರಾಜಪಕ್ಸೆ, ಪ್ರಭಾಸಿಮ್ರಾನ್ ಸಿಂಗ್, ಜಿತೇಶ್ ಶರ್ಮಾ, ಶಾರುಖ್ ಖಾನ್, ಲಿಯಾಮ್ ಲಿವಿಂಗ್‍ಸ್ಟೋನ್, ಹರ್‍ಪ್ರೀತ್ ಬ್ರಾಡ್, ರಾಜ್ ಬಾವಾ, ರಿಷಿ ಧವನ್, ಅಥರ್ವ ತಾಜ್ಡೆ, ಕಗಿಸೊ ರಬಾಡ, ಅರ್ಶ್‍ದೀಪ್ ಸಿಂಗ್, ರಾಹುಲ್ ಚಾಹರ್, ನಾಥನ್. ಬಲ್ತೇಜ್ ಸಿಂಗ್. ಇದನ್ನೂ ಓದಿ: ಕಳೆದ ಬಾರಿ 15 ಕೋಟಿ ರೂ. ನೀಡಿ RCB ಖರೀದಿಸಿದ್ದ ಆಟಗಾರ ಈ ಬಾರಿ 1 ಕೋಟಿಗೆ ಚೆನ್ನೈ ಪಾಲು

ಹರಾಜಿನಲ್ಲಿ ಖರೀದಿಸಿದ ಆಟಗಾರರು: ಸಿಕಂದರ್ ರಜಾ (50 ಲಕ್ಷ ರೂ.), ಸ್ಯಾಮ್ ಕುರ್ರಾನ್ (18.5 ಕೋಟಿ ರೂ.), ಶಿವಂ ಸಿಂಗ್ (20 ಲಕ್ಷ ರೂ.), ಮೋಹಿತ್ ರಥಿ (20 ಲಕ್ಷ ರೂ.), ವಿದ್ವತ್ ಕಾವೇರಪ್ಪ (20 ಲಕ್ಷ ರೂ.), ಹರ್‍ಪ್ರೀತ್ ಭಾಟಿಯಾ (40 ಲಕ್ಷ ರೂ.)

mayank agarwal

ರಾಜಸ್ಥಾನ್ ರಾಯಲ್ಸ್
ಉಳಿಸಿಕೊಂಡಿರುವ ಆಟಗಾರರು: ಸಂಜು ಸ್ಯಾಮ್ಸನ್, ಜೋಸ್ ಬಟ್ಲರ್, ದೇವದತ್ ಪಡಿಕ್ಕಲ್, ಯಶಸ್ವಿ ಜೈಸ್ವಾಲ್, ಶಿಮ್ರೋನ್ ಹೆಟ್ಮೆಯರ್, ಧ್ರುವ್ ಜುರೆಲ್, ರಿಯಾನ್ ಪರಾಗ್, ರವಿ ಅಶ್ವಿನ್, ಟ್ರೆಂಟ್ ಬೌಲ್ಟ್, ಯಜುವೇಂದ್ರ ಚಾಹಲ್, ಪ್ರಸಿದ್ಧ್ ಕೃಷ್ಣ, ಓಬೇದ್ ಮೆಕಾಯ್, ಕುಲದೀಪ್ ಸೇನ್, ಕುಲ್‍ದೀಪ್ ಯಾದವ್, ಕೆ.ಸಿ ಕಾರಿಯಪ್ಪ

ಹರಾಜಿನಲ್ಲಿ ಖರೀದಿಸಿದ ಆಟಗಾರರು: ಜೇಸನ್ ಹೋಲ್ಡರ್ (5.75 ಕೋಟಿ ರೂ.), ಜೋ ರೂಟ್ (1 ಕೋಟಿ ರೂ.), ಅಬ್ದುಲ್ (20 ಲಕ್ಷ ರೂ.), ಆಕಾಶ್ ವಶಿಷ್ಟ್ (20 ಲಕ್ಷ ರೂ.), ಮುರುಗನ್ ಅಶ್ವಿನ್ (20 ಲಕ್ಷ ರೂ.), ಆಸಿಫ್ (30 ಲಕ್ಷ ರೂ.), ಆಡಮ್ ಜಂಪಾ (1.5 ಕೋಟಿ ರೂ.), ಕುನಾಲ್ ರಾಥೋರ್ (20 ಲಕ್ಷ ರೂ.), ಡೊನೊವನ್ ಫೆರೇರಾ (50 ಲಕ್ಷ ರೂ.).

IPL 2022 NIKOLAS POOPRAN

ಗುಜರಾತ್ ಟೈಟಾನ್ಸ್
ಉಳಿಸಿಕೊಂಡಿರುವ ಆಟಗಾರರು: ಹಾರ್ದಿಕ್ ಪಾಂಡ್ಯ, ಶುಭಮನ್ ಗಿಲ್, ಡೇವಿಡ್ ಮಿಲ್ಲರ್, ಅಭಿನವ್ ಮನೋಹರ್, ಸಾಯಿ ಸುದರ್ಶನ್, ವೃದ್ಧಿಮಾನ್ ಸಹಾ, ಮ್ಯಾಥ್ಯೂ ವೇಡ್, ರಶೀದ್ ಖಾನ್, ರಾಹುಲ್ ತೆವಾಟಿಯಾ, ವಿಜಯ್ ಶಂಕರ್, ಮೊಹಮ್ಮದ್ ಶಮಿ, ಅಲ್ಜಾರಿ ಜೋಸೆಫ್, ಯಶ್ ದಯಾಳ್, ಪ್ರದೀಪ್ ಸಾಂಗ್ವಾನ್, ದರ್ಶನ್ ನಲ್ಕಂಡೆ, ಜಯಂತ್ ಯಾದವ್, ಸಾಯಿ ಕಿಶೋರ್, ನೂರ್ ಅಹ್ಮದ್. ಇದನ್ನೂ ಓದಿ: RCB ಗೆ ಗ್ರ್ಯಾಂಡ್‌ ಎಂಟ್ರಿ ಕೊಟ್ಟ ಸಿಂಧನೂರಿನ ಮನೋಜ್ ಭಾಂಡಗೆ

ಹರಾಜಿನಲ್ಲಿ ಖರೀದಿಸಿದ ಆಟಗಾರರು: ಶಿವಂ ಮಾವಿ (6 ಕೋಟಿ ರೂ.), ಜೋಶುವಾ ಲಿಟಲ್ (4.4 ಕೋಟಿ ರೂ.), ಕೇನ್ ವಿಲಿಯಮ್ಸನ್ (2 ಕೋಟಿ ರೂ.) ಮೋಹಿತ್ ಶರ್ಮಾ (50 ಲಕ್ಷ ರೂ.), ಉರ್ವಿಲ್ ಪಟೇಲ್ (20 ಲಕ್ಷ ರೂ.), ಭರತ್ (1.2 ಕೋಟಿ ರೂ.), ಓಡೆನ್ ಸ್ಮಿತ್ (1.2 ಕೋಟಿ ರೂ.).

IPL

ಡೆಲ್ಲಿ ಕಾಪಿಟಲ್ಸ್
ಉಳಿಸಿಕೊಂಡಿರುವ ಆಟಗಾರರು: ರಿಷಭ್ ಪಂತ್, ಡೇವಿಡ್ ವಾರ್ನರ್, ಪೃಥ್ವಿ ಶಾ, ಯಶ್ ಧುಲ್, ರಿಪಾಲ್ ಪಟೇಲ್, ರೋವ್‍ಮನ್ ಪೊವೆಲ್, ಸರ್ಫರಾಜ್ ಖಾನ್, ಮಿಚೆಲ್ ಮಾರ್ಷ್, ಅಕ್ಷರ್ ಪಟೇಲ್, ಲಲಿತ್ ಯಾದವ್, ಅನ್ರಿಚ್ ನೋಟ್ರ್ಜೆ, ಮುಸ್ತಾಫಿಜುರ್ ರೆಹಮಾನ್, ಕುಲದೀಪ್ ಯಾದವ್, ಲುಂಗಿ ಎನ್‍ಗಿಯಾಡಿ, ಚೇತನ್, ಪ್ರವೀಣ್ ದುಬೆ, ಕಮಲೇಶ್ ನಾಗರಕೋಟಿ, ವಿಕ್ಕಿ ಒಸ್ತ್ವಾಲ್, ಅಮನ್ ಖಾನ್.

ಹರಾಜಿನಲ್ಲಿ ಖರೀದಿಸಿದ ಆಟಗಾರರು: ರಿಲೀ ರೊಸೊವ್ (4.6 ಕೋಟಿ ರೂ.), ಮನೀಶ್ ಪಾಂಡೆ (2.4 ಕೋಟಿ ರೂ.), ಫಿಲ್ ಸಾಲ್ಟ್ (2 ಕೋಟಿ ರೂ.) ಮುಖೇಶ್ ಕುಮಾರ್ (5.5 ಕೋಟಿ ರೂ.), ಇಶಾಂತ್ ಶರ್ಮಾ (50 ಲಕ್ಷ ರೂ.).

ಕೋಲ್ಕತ್ತಾ ನೈಟ್ ರೈಡರ್ಸ್
ಉಳಿಸಿಕೊಂಡಿರುವ ಆಟಗಾರರು: ಶ್ರೇಯಸ್ ಅಯ್ಯರ್, ನಿತೀಶ್ ರಾಣಾ, ರಹಮಾನುಲ್ಲಾ ಗುರ್ಬಾಜ್, ವೆಂಕಟೇಶ್ ಅಯ್ಯರ್, ಆಂಡ್ರೆ ರಸೆಲ್, ಸುನಿಲ್ ನರೈನ್, ಶಾರ್ದೂಲ್ ಠಾಕೂರ್, ಲಾಕಿ ಫರ್ಗುಸನ್, ಉಮೇಶ್ ಯಾದವ್, ಟಿಮ್ ಸೌಥಿ, ಹರ್ಷಿತ್ ರಾಣಾ, ವರುಣ್ ಚಕ್ರವರ್ತಿ, ಅನುಕ್ ರೋಯ್.

ಹರಾಜಿನಲ್ಲಿ ಖರೀದಿಸಿದ ಆಟಗಾರರು: ಶಕೀಬ್ ಅಲ್ ಹಸನ್ (1.5 ಕೋಟಿ ರೂ.), ಡೇವಿಡ್ ವೈಸ್ (1 ಕೋಟಿ ರೂ.), ಮನ್‍ದೀಪ್ ಸಿಂಗ್ (50 ಲಕ್ಷ ರೂ.), ಲಿಟ್ಟನ್ ದಾಸ್ (50 ಲಕ್ಷ ರೂ.), ಕುಲ್ವಂತ್ ಖೆಜ್ರೋಲಿಯಾ (20 ಲಕ್ಷ ರೂ.), ಸುಯಾಶ್ ಶರ್ಮಾ (20 ಲಕ್ಷ ರೂ.), ವೈಭವ್ ಅರೋರಾ (60 ಲಕ್ಷ ರೂ.), ಜಗದೀಸನ್ (90 ಲಕ್ಷ ರೂ.)

Live Tv
[brid partner=56869869 player=32851 video=960834 autoplay=true]

Share This Article
Leave a Comment

Leave a Reply

Your email address will not be published. Required fields are marked *