IPL 2025 ಸಮಾರೋಪ ಸಮಾರಂಭದಲ್ಲಿ ʻಆಪರೇಷನ್ ಸಿಂಧೂರʼ ವಿಜಯೋತ್ಸವ – ಏನೆಲ್ಲಾ ವಿಶೇಷತೆ ಇರಲಿದೆ?

Public TV
2 Min Read
Shankar Mahadevan

ಮುಂಬೈ: 18ನೇ ಆವೃತ್ತಿಯ ಇಂಡಿಯನ್‌ ಪ್ರೀಮಿಯರ್‌ ಲೀಗ್‌ (IPL 2025) ಫೈನಲ್‌ ಪಂದ್ಯವನ್ನು ಭಾರತೀಯ ಸೇನೆಗೆ ಅರ್ಪಿಸಲು ಬಿಸಿಸಿಐ (BCCI) ನಿರ್ಧರಿಸಿದೆ. ಜೂನ್‌ 3ರಂದು ಫೈನಲ್‌ ಪಂದ್ಯಕ್ಕೂ ಮುನ್ನ ನಡೆಯುವ ಸಮಾರೋಪ ಸಮಾರಂಭದಲ್ಲಿ ಹತ್ತು ಹಲವು ವಿಶೇಷತೆಗಳನ್ನು ಕಣ್ತುಂಬಿಕೊಳ್ಳಬಹುದಾಗಿದೆ.

Operation Sindoor Tribute

ಸಮಾರೋಪದಲ್ಲಿ ಏನೆಲ್ಲಾ ವಿಶೇಷತೆ ಇರಲಿದೆ?
ಜೂನ್‌ 3ರಂದು ನಡೆಯಲಿರುವ ಐಪಿಎಲ್‌ ಫೈನಲ್‌ ಪಂದ್ಯದ ಸಮಾರೋಪದಲ್ಲಿ ʻಆಪರೇಷನ್ ಸಿಂಧೂರʼ (Operation Sindoor) ವಿಜಯೋತ್ಸವ ಆಚರಿಸಲಾಗುತ್ತದೆ. ಸುಮಾರು 45 ನಿಮಿಷಗಳ ಕಾಲ ಸಮಾರಂಭ ನಡೆಯಲಿದೆ. ಕಾರ್ಯಕ್ರಮ ಆರಂಭವಾಗುತ್ತಿದ್ದಂತೆ ಮೂರು ಸೇನಾಪಡೆಗಳ ಮುಖ್ಯಸ್ಥರಾದ ಭಾರತೀಯ ಸೇನಾ ಮುಖ್ಯಸ್ಥ ಜನರಲ್‌ ಉಪೇಂದ್ರ ದ್ವಿವೇದಿ, ನೇವಿ ಮುಖ್ಯಸ್ಥ ಅಡ್ಮಿರಲ್‌ ದಿನೇಶ್‌ ಕೆ ತ್ರಿಪಾಠಿ, ಏರ್‌ಚೀಫ್‌ ಮಾರ್ಷಲ್‌ ಅಮರ್‌ ಪ್ರೀತ್‌ ಸಿಂಗ್‌ ಅವರನ್ನ ವೇದಿಕೆಗೆ‌ ಸೇನಾ ಗೌರವದೊಂದಿಗೆ ಆಹ್ವಾನಿಸಲಾಗುತ್ತದೆ. ಬಳಿಕ ಸೇನೆಗ ಗೌರವಾರ್ಥವಾಗಿ ಮಿಲಿಟರಿ ಬ್ಯಾಂಡ್‌ ಪ್ರದರ್ಶನ ಇರಲಿದೆ.

Armed Forces

ಇದಾದ ಬಳಿಕ ಖ್ಯಾತ ಹಿನ್ನೆಲೆ ಗಾಯಕರಾದ ಶಂಕರ್‌ ಮಹಾದೇವನ್‌ (Shankar mahadevan) ಹಾಗೂ ಶ್ರೇಯಾ ಘೋಷಾಲ್ (Shreya ghoshal) ಅವರಿಂದ ದೇಶಭಕ್ತಿ ಗೀತಗಾಯನ ಕಾರ್ಯಕ್ರಮ ಇರಲಿದೆ. ಜೊತೆಗೆ ಕಲಾ ತಂಡದಿಂದ ದೇಶಭಕ್ತಿ ನೃತ್ಯ ಕಾರ್ಯಕ್ರಮ ನಡೆಸಿಕೊಡಲಾಗುತ್ತದೆ. ಇದಾದ ಬಳಿಕ ಫೈನಲ್‌ ಪಂದ್ಯ ಆರಂಭವಾಗಲಿದೆ. ಫೈನಲ್‌ ಪಂದ್ಯ ಆರಂಭಕ್ಕೂ ಮುನ್ನ ಆಟಗಾರರು ರಾಷ್ಟ್ರಗೀತೆಗೆ ಗೌರವ ಸಲ್ಲಿಸಲಿದ್ದಾರೆ.

ಏನಾಗಿತ್ತು?
ಕಳೆದ ಏಪ್ರಿಲ್‌ 22ರಂದು ಪಹಲ್ಗಾಮ್‌ನಲ್ಲಿ 26 ಪ್ರವಾಸಿಗರನ್ನ ಹತ್ಯೆಗೈಯಲಾಗಿತ್ತು. ಇದಕ್ಕೆ ʻಆಪರೇಷನ್‌ ಸಿಂಧೂರʼ ಕಾರ್ಯಾಚರಣೆ ಮೂಲಕ ಭಾರತ ಪ್ರತೀಕಾರ ತೀರಿಸಿಕೊಂಡಿತ್ತು. ಈ ವೇಳೆ ಪಾಕಿಸ್ತಾನ ಸಹ ಪ್ರತಿದಾಳಿ ನಡೆಸಿತ್ತು, ಆದ್ರೆ ಭಾರತದ ಬಲಿಷ್ಠ ವಾಯುರಕ್ಷಣಾ ವ್ಯವಸ್ಥೆಯಿಂದ ಆ ದಾಳಿಗಳು ವಿಫಲವಾದವು. ಭಾರತ ಮತ್ತು ಪಾಕಿಸ್ತಾನ ನಡುವಿನ ಪ್ರತೀಕಾರ ಸಮರ ಜೋರಾಗುತ್ತಿದ್ದಂತೆ ಐಪಿಎಲ್‌ ಪಂದ್ಯಗಳನ್ನು ಒಂದು ವಾರಗಳ ಕಾಲ ಸ್ಥಗಿತಗೊಳಿಸಲಾಗಿತ್ತು. ಭಾರತ ಮತ್ತು ಪಾಕ್ ‌ನಡುವೆ ಕದನ ವಿರಾಮ ಘೋಷಣೆಯಾಗುತ್ತಿದ್ದಂತೆ ಮೇ 17ರಿಂದ ಟೂರ್ನಿ ಪುನರಾರಂಭಗೊಳಿಸಲಾಯಿತು.

IPL 2025 2 1

ಭಾರತೀಯ ಸೇನೆಯ ಈ ಕಾರ್ಯವನ್ನು ಗೌರವಿಸುವ ಸಲುವಾಗಿ ಐಪಿಎಲ್‌ ಸಮಾರೋಪ ಸಮಾರಂಭದಲ್ಲಿ ʻಆಪರೇಷನ್‌ ಸಿಂಧೂರʼ ವಿಜಯೋತ್ಸವ ಆಚರಿಸಲು ನಿರ್ಧರಿಸಿದೆ.

ನಮ್ಮ ಸಶಸ್ತ್ರ ಪಡೆಗಳ ಶೌರ್ಯ, ಸಾಹಸ ಮತ್ತು ನಿಸ್ವಾರ್ಥ ಸೇವೆಯನ್ನು ಬಿಸಿಸಿಐ ಗೌರವಿಸುತ್ತದೆ. ಆಪರೇಷನ್ ಸಿಂಧೂರ್ ಅಡಿಯಲ್ಲಿ ಅವರ ವೀರೋಚಿತ ಪ್ರಯತ್ನಗಳು ರಾಷ್ಟ್ರವನ್ನು ರಕ್ಷಿಸುತ್ತಿವೆ. ಇದರ ಗೌರವಾರ್ಥವಾಗಿ, ಐಪಿಎಲ್​ ಫೈನಲ್ ಪಂದ್ಯವನ್ನು ಸಶಸ್ತ್ರ ಪಡೆಗಳಿಗೆ ಅರ್ಪಿಸಲು ಮತ್ತು ನಮ್ಮ ವೀರ ಯೋಧರನ್ನು ಗೌರವಿಸಲು ನಾವು ನಿರ್ಧರಿಸಿದ್ದೇವೆ. ಅದಕ್ಕಾಗಿ ಸಮಾರೋಪಕ್ಕೆ ಬಿಸಿಸಿಐ ಮೂರು ಸೇನೆಗಳ ಮುಖ್ಯಸ್ಥರನ್ನು ಆಹ್ವಾನಿಸಿದೆ ಎಂದು ಬಿಸಿಸಿಐ ಕಾರ್ಯದರ್ಶಿ ದೇವಜಿತ್ ಸೈಕಿಯಾ ತಿಳಿಸಿದ್ದಾರೆ. ಐಪಿಎಲ್ ಫೈನಲ್ ಪಂದ್ಯದ ಆರಂಭಕ್ಕೂ ಮುನ್ನ ಮಿಲಿಟರಿ ಬ್ಯಾಂಡ್‌ನ ಪ್ರದರ್ಶನವೂ ನಡೆಯಲಿದೆ ತಿಳಿದು ಬಂದಿದೆ.

Operation Sindoor

ಐಪಿಎಲ್‌ ಪ್ಲೇ ಆಫ್‌ ವೇಳಾಪಟ್ಟಿ ಹೀಗಿದೆ…
ಮೇ 29: ಮೊದಲ ಕ್ವಾಲಿಫೈಯರ್ ಪಂದ್ಯ (ಪಂಜಾಬ್ ಕಿಂಗ್ಸ್ vs ತಂಡ 2), ಮುಲ್ಲನ್‌ಪುರ್ (ಚಂಡೀಗಢ್), ಸಂಜೆ 7:30
ಮೇ 30: ಎಲಿಮಿನೇಟರ್ ಪಂದ್ಯ (ತಂಡ 3 vs ತಂಡ 4), ಮುಲ್ಲನ್‌ಪುರ್ (ಚಂಡೀಗಢ್), ಸಂಜೆ 7:30
ಜೂನ್ 1: ದ್ವಿತೀಯ ಕ್ವಾಲಿಫೈಯರ್ ಪಂದ್ಯ (ಸೋತವರು Q1 vs ಎಲಿಮಿನೇಟರ್ ವಿನ್ನರ್), ಅಹಮದಾಬಾದ್, ಸಂಜೆ 7:30
ಜೂನ್ 3: ಫೈನಲ್ (ವಿಜೇತ Q1 vs ವಿಜೇತ Q2), ಅಹಮದಾಬಾದ್, ಸಂಜೆ 7:30

Share This Article