ಮುಂಬೈ: ದೇವರ ನಾಡು ಕೊಚ್ಚಿಯಲ್ಲಿ (Kochi) ಡಿ.23 ರಂದು ನಡೆಯಲಿರುವ ಐಪಿಎಲ್ (IPL) ಮಿನಿ ಹರಾಜಿಗೆ (Auction) ಭಾರತದ 714 ಮಂದಿ ಸೇರಿ ಒಟ್ಟು 991 ಆಟಗಾರರು ಹೆಸರನ್ನು ನೋಂದಾಯಿಸಿಕೊಂಡಿದ್ದಾರೆ.
Advertisement
ಅಂತಿಮ ಪಟ್ಟಿಯಲ್ಲಿ ಬೆನ್‍ಸ್ಟೋಕ್ಸ್, ಸ್ಯಾಮ್ ಕರ್ರನ್, ಕೇನ್ ವಿಲಿಯಮ್ಸನ್, ನಿಕೋಲಸ್ ಪೂರನ್‍ರಂತಹ ಸ್ಟಾರ್ ಆಟಗಾರರಿಗೆ 2 ಕೋಟಿ ರೂ. ಮೂಲ ಬೆಲೆ ನಿಗದಿಪಡಿಸಲಾಗಿದೆ. 14 ದೇಶಗಳಿಂದ ಆಟಗಾರರು ಮಿನಿ ಹರಾಜಿಗೆ ತಮ್ಮ ಹೆಸರನ್ನು ನೋಂದಾಯಿಸಿಕೊಂಡಿದ್ದಾರೆ. ಈ ಪೈಕಿ ಆಸ್ಟ್ರೇಲಿಯಾದಿಂದ ಒಟ್ಟು 57 ಆಟಗಾರರು ಹೆಸರು ನೋಂದಾಯಿಸಿಕೊಂಡಿದ್ದಾರೆ. ದಕ್ಷಿಣ ಆಫ್ರಿಕಾ 52, ವೆಸ್ಟ್ ಇಂಡೀಸ್ 33, ಇಂಗ್ಲೆಂಡ್ 31, ನ್ಯೂಜಿಲೆಂಡ್ 27, ಶ್ರೀಲಂಕಾ 23, ಅಫ್ಘಾನಿಸ್ತಾನ 14, ಐರ್ಲೆಂಡ್ 8, ನೆದರ್‌ಲ್ಯಾಂಡ್ 7, ಬಾಂಗ್ಲಾದೇಶ 6, ಯುಎಇ 6, ಜಿಂಬಾಬ್ವೆ 6, ನಮೀಬಿಯಾ 5 ಮತ್ತು ಸ್ಕಾಟ್ಲೆಂಡ್‍ನಿಂದ ಇಬ್ಬರು ಆಟಗಾರರು ಅಂತಿಮ ಪಟ್ಟಿಯಲ್ಲಿ ಕಾಣಿಸಿಕೊಂಡಿದ್ದಾರೆ. ಇದನ್ನೂ ಓದಿ: ಸ್ಮಿತ್ ಬ್ಯಾಟ್‍ನಿಂದ ಹೊಡೆತ ತಿಂದ ಅಂಪೈರ್
Advertisement
Advertisement
ಒಟ್ಟು 991 ಆಟಗಾರರ ಪಟ್ಟಿಯಲ್ಲಿ 185 ಕ್ಯಾಪ್ಡ್ (ಈಗಾಗಲೇ ರಾಷ್ಟ್ರೀಯ ತಂಡವನ್ನು ಪ್ರತಿನಿಧಿಸಿದ ಆಟಗಾರರು), 786 ಅನ್‍ಕ್ಯಾಪ್ಡ್ (3 ಮಾದರಿಯ ಕ್ರಿಕೆಟ್‍ನಲ್ಲಿ ರಾಷ್ಟ್ರೀಯ ತಂಡವನ್ನು ಪ್ರತಿನಿಧಿಸದ ಆಟಗಾರರು) ಮತ್ತು 20 ಅಸೋಸಿಯೇಟ್ ನೇಷನ್ಸ್‌ನ ಆಟಗಾರರಿದ್ದಾರೆ. ಇದೀಗ ಪ್ರತಿ ಫ್ರಾಂಚೈಸಿಗಳು ತಮ್ಮ ತಂಡದಲ್ಲಿ ಗರಿಷ್ಠ 25 ಆಟಗಾರರನ್ನು ಹೊಂದಲು ಅವಕಾಶವಿದೆ. ಹಾಗಾಗಿ ಇದೀಗ ಮಿನಿ ಹರಾಜಿನತ್ತ ಫ್ರಾಂಚೈಸ್‍ಗಳ ಚಿತ್ತ ನೆಟ್ಟಿದೆ. ಇದನ್ನೂ ಓದಿ: 450 ಎಸೆತಕ್ಕೆ 506 ರನ್ – ಇಂಗ್ಲೆಂಡ್ ಬ್ಯಾಟರ್‌ಗಳ ಆರ್ಭಟಕ್ಕೆ ಹಲವು ವಿಶ್ವದಾಖಲೆ ಉಡೀಸ್