ಮುಂಬೈ: 15ನೇ ಆವೃತ್ತಿ ಐಪಿಎಲ್‍ನಲ್ಲಿ ಅಂಪೈರ್‌ಗಳ ಎಡವಟ್ಟು ಮತ್ತೆ ಮತ್ತೆ ಮರುಕಳಿಸುತ್ತಿದೆ. ಚೆನ್ನೈ ಮತ್ತು ಮುಂಬೈ ನಡುವಿನ ಪಂದ್ಯದಲ್ಲಿ ಅಂಪೈರ್ ವೈಡ್ ಎಂಬ ತೀರ್ಪು ನೀಡಲು ಮುಂದಾದಗ ಚೆನ್ನೈ ನಾಯಕ ಧೋನಿ ಬಲವಾದ ಮನವಿ ಸಲ್ಲಿಸುತ್ತಿದ್ದಂತೆ ಔಟ್ ಎಂದು ತೀರ್ಪು ನೀಡಿ ವಿವಾದ ಮೈಮೇಲೆ ಎಳೆದುಕೊಂಡಿದ್ದಾರೆ.
Advertisement
ನಿನ್ನೆಯ ಪಂದ್ಯದಲ್ಲಿ ಅಂಪೈರ್ ಚಿರಾ ರವಿಕಾಂತ್ ರೆಡ್ಡಿ ವೈಡ್ ಎಂದು ತೀರ್ಪು ನೀಡಲು ಕೈ ಮೇಲೆತ್ತುತ್ತಿದ್ದಂತೆ. ಧೋನಿ ಬಲವಾದ ಮನವಿ ಸಲ್ಲಿಸಿದರು ತಕ್ಷಣ ಅಂಪೈರ್ ಔಟ್ ಎಂದು ತೀರ್ಪು ನೀಡಿದರು. ಈ ವೇಳೆ ಬ್ಯಾಟಿಂಗ್ ಮಾಡುತ್ತಿದ್ದ ಮುಂಬೈ ಬ್ಯಾಟ್ಸ್‌ಮ್ಯಾನ್ ಹೃತಿಕ್ ಶೋಕೀನ್ ಡಿಆರ್‌ಎಸ್ ಮೊರೆ ಹೋದರು. ಈ ವೇಳೆ ಬ್ಯಾಟ್‍ಗೆ ತಾಗದೆ ಪ್ಯಾಡ್‍ಗೆ ಔಟ್ ಸೈಡ್ ಎಡ್ಜ್ ಆಗಿರುವುದು ಡಿಆರ್‌ಎಸ್‌ನಲ್ಲಿ ಸ್ಪಷ್ಟವಾಗಿ ತಿಳಿಯಿತು. ಬಳಿಕ ಅಂಪೈರ್ ತಮ್ಮ ತೀರ್ಪನ್ನು ಬದಲಾಯಿಸಿಕೊಂಡು ನಾಟ್ ಔಟ್ ಎಂದರು. ಇದನ್ನೂ ಓದಿ: ಡಿಆರ್‌ಎಸ್‌ಗೆ ಪವರ್ ಕಟ್ ಕಾಟ – ಟ್ರೋಲಾದ ಶ್ರೀಮಂತ ಕ್ರಿಕೆಟ್ ಲೀಗ್
Advertisement
Advertisement
ಈ ವೀಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದ್ದು, ಧೋನಿ ನೋಡಿ ಅಂಪೈರ್ ಕೂಡ ತಮ್ಮ ನಿರ್ಧಾರವನ್ನು ಬದಲಾಯಿಸಿದ್ದಾರೆ. ಅಂಪೈರ್‌ಗೂ ಧೋನಿ ಮೇಲೆ ತುಂಬಾ ನಂಬಿಕೆ ಎಂಬ ಹಲವು ಕಾಮೆಂಟ್‍ಗಳ ಮೂಲಕ ನೆಟ್ಟಿಗರು ಅಂಪೈರ್ ಕಾಲೆಳೆಯುತ್ತಿದ್ದಾರೆ. ಇದನ್ನೂ ಓದಿ: ಜಡೇಜಾ ಐಪಿಎಲ್‍ನಿಂದ ಹೊರಗುಳಿದಂತೆ ಸಿಎಸ್‍ಕೆ ಫ್ರಾಂಚೈಸ್ ಇನ್‍ಸ್ಟಾಗ್ರಾಂ ಅನ್‍ಫಾಲೋ ಮಾಡಿದ್ಯಾಕೆ?
Advertisement
https://twitter.com/sportsgeek090/status/1524793113436618752
ಪಂದ್ಯದಲ್ಲಿ ಮುಂಬೈ ಬೌಲರ್‌ಗಳ ಅಮೋಘ ಪ್ರದರ್ಶನದ ಮುಂದೆ ಚೆನ್ನೈ 97 ರನ್‍ಗಳಿಗೆ ಸರ್ವಪತನ ಕಂಡಿತು. 98 ರನ್‍ಗಳ ಅಲ್ಪ ಮೊತ್ತವನ್ನು ಬೆನ್ನಟ್ಟಿದ ಮುಂಬೈ ತಂಡಕ್ಕೆ ಚೆನ್ನೈ ಬೌಲರ್‌ಗಳ ಪ್ರತಿರೋಧದ ನಡುವೆಯೂ ತಿಲಕ್ ವರ್ಮಾರ ಜವಾಬ್ದಾರಿಯುತ ಆಟ ಮುಂಬೈ ಗೆಲುವಿಗೆ ನೆರವಾಯಿತು. ತಿಲಕ್ ವರ್ಮಾ ಅಜೇಯ 34 ರನ್ (32 ಎಸೆತ, 4 ಬೌಂಡರಿ) ನೆರವಿನಿಂದ 14.5 ಓವರ್‌ಗಳಲ್ಲಿ 5 ವಿಕೆಟ್ ಕಳೆದುಕೊಂಡು 103 ಸಿಡಿಸಿ ಇನ್ನೂ 31 ಎಸೆತ ಬಾಕಿ ಇರುವಂತೆ ಮುಂಬೈ 5 ವಿಕೆಟ್‍ಗಳ ಅಂತರದ ಜಯ ದಾಖಲಿಸಿತು.