CricketLatestLeading NewsMain PostSports

ಜಡೇಜಾ ಐಪಿಎಲ್‍ನಿಂದ ಹೊರಗುಳಿದಂತೆ ಸಿಎಸ್‍ಕೆ ಫ್ರಾಂಚೈಸ್ ಇನ್‍ಸ್ಟಾಗ್ರಾಂ ಅನ್‍ಫಾಲೋ ಮಾಡಿದ್ಯಾಕೆ?

ಮುಂಬೈ: ಗಾಯದ ಸಮಸ್ಯೆಯಿಂದ 15ನೇ ಆವೃತ್ತಿ ಐಪಿಎಲ್‍ನ ಉಳಿದ ಪಂದ್ಯಗಳಿಂದ ರವೀಂದ್ರ ಜಡೇಜಾ ಹೊರ ನಡೆದಿದ್ದಾರೆ. ಈ ನಡುವೆ ಇಂದು ಚೆನ್ನೈ ಸೂಪರ್ ಕಿಂಗ್ಸ್ ಫ್ರಾಂಚೈಸ್ ಜಡೇಜಾ ಅವರ ಇನ್‍ಸ್ಟಾಗ್ರಾಂ ಖಾತೆಯನ್ನು ಅನ್‍ಫಾಲೋ ಮಾಡಿದೆ. ಇದು ಬಾರಿ ಚರ್ಚೆಗೆ ಗ್ರಾಸವಾಗಿದೆ.

15ನೇ ಆವೃತ್ತಿ ಐಪಿಎಲ್ ಆರಂಭಕ್ಕೂ ಮುನ್ನ ಧೋನಿ ಚೆನ್ನೈ ತಂಡದ ನಾಯಕತ್ವ ತೊರೆದು ಜಡೇಜಾಗೆ ನಾಯಕತ್ವದ ಪಟ್ಟ ಕಟ್ಟಿದ್ದರು. ಆ ಬಳಿಕ ಚೆನ್ನೈ ಹೀನಾಯ ಪ್ರದರ್ಶನ ತೋರಿತು. ನಂತರ ಮತ್ತೆ ಧೋನಿ ನಾಯಕತ್ವ ವಹಿಸಿಕೊಂಡ ಬೆನ್ನಲ್ಲೇ ಜಡೇಜಾ ಗಾಯಾಳುವಾಗಿ ತಂಡ ತೊರೆದಿದ್ದಾರೆ. ಈ ಎಲ್ಲಾ ಬೆಳವಣಿಗೆಗಳು ತಂಡದೊಳಗೆ ಕಿತ್ತಾಟ ನಡೆಯುತ್ತಿದೆ ಎಂಬ ಮಾತಿಗೆ ಜೀವ ತುಂಬಿದೆ. ಜಡೇಜಾ ಅವರ ಇನ್‍ಸ್ಟಾಗ್ರಾಂ ಖಾತೆಯನ್ನು ಚೆನ್ನೈ ಫ್ರಾಂಚೈಸ್ ಅನ್‍ಫಾಲೋ ಮಾಡಿರುವುದು‌ ಯಾಕೆ ಎಂದು ಅಭಿಮಾನಿಗಳು ಪ್ರಶ್ನಿಸುತ್ತಿದ್ದಾರೆ. ಇದನ್ನೂ ಓದಿ: ಜಿಮ್‍ನಲ್ಲಿ ಒಟ್ಟಿಗೆ ವರ್ಕೌಟ್ ಮಾಡಿದ ಶಿಖರ್ ಧವನ್, ಪ್ರೀತಿ ಜಿಂಟಾ ವೀಡಿಯೋ ವೈರಲ್

IPL 2022 RR VS LSG

ಈ ನಡುವೆ ಮಾಜಿ ಆಟಗಾರ ಆಕಾಶ್ ಚೋಪ್ರಾ, ಜಡೇಜಾ ಗಾಯದ ಬಗ್ಗೆ ಯಾವುದೇ ರೀತಿಯ ಪ್ರತಿಕ್ರಿಯೆ ನೀಡಿಲ್ಲ. ಜಡೇಜಾ ಮುಂದಿನ ಐಪಿಎಲ್‍ನಲ್ಲಿ ಚೆನ್ನೈ ತಂಡದಲ್ಲಿ ಕಾಣಿಸಿಕೊಳ್ಳುವುದು ಅನುಮಾನ ಎಂದು ಹೊಸ ಬಾಂಬ್ ಸಿಡಿಸಿದ್ದಾರೆ. ಇದನ್ನೂ ಓದಿ: ಕೆ.ಎಲ್ ರಾಹುಲ್ ಜೊತೆ ಮಗಳ ಮದುವೆಗೆ ಸುನೀಲ್ ಶೆಟ್ಟಿ ಗ್ರೀನ್ ಸಿಗ್ನಲ್

ಚೆನ್ನೈ ತಂಡ ಜಡೇಜಾಗೆ 16 ಕೋಟಿ ರೂ. ನೀಡಿ ರಿಟೈನ್ ಮಾಡಿಕೊಂಡಿತ್ತು. ಆದರೆ ಜಡೇಜಾ 15ನೇ ಆವೃತ್ತಿ ಐಪಿಎಲ್‍ನಲ್ಲಿ ಒಟ್ಟು 10 ಪಂದ್ಯಗಳಿಂದ 116 ರನ್ ಮತ್ತು 3 ವಿಕೆಟ್ ಕಿತ್ತು ಕಳಪೆ ಪ್ರದರ್ಶನ ನೀಡಿದ್ದಾರೆ. ಡೆಲ್ಲಿ ವಿರುದ್ಧದ ಕಳೆದ ಪಂದ್ಯದಲ್ಲಿ ಜಡೇಜಾರನ್ನು ಗಾಯದ ಸಮಸ್ಯೆ ಎಂದು ಹೊರಗಿಡಲಾಗಿತ್ತು. ಆ ಬಳಿಕ ಜಡೇಜಾ ಟೂರ್ನಿಯಿಂದಲೇ ಔಟ್ ಆಗಿರುವುದು ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ. ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ತೀವ್ರ ಚರ್ಚೆ ಆಗುತ್ತಿದೆ.

 

Leave a Reply

Your email address will not be published.

Back to top button