ಮುಂಬೈ: ಆರ್‌ಸಿಬಿ ನೀಡಿದ ಬೃಹತ್ ಮೊತ್ತ ಬೆನ್ನಟ್ಟಿದ ಡೆಲ್ಲಿ ಒಂದು ಹಂತದಲ್ಲಿ ಗೆಲ್ಲುವ ವಿಶ್ವಾಸದಲ್ಲಿತ್ತು. ಈ ವೇಳೆ ರಿಷಭ್ ಪಂತ್ ಅವರ ಅದ್ಭುತ ಕ್ಯಾಚ್ ಒಂದನ್ನು ಹಿಡಿದ ವಿರಾಟ್ ಕೊಹ್ಲಿ ಡೆಲ್ಲಿ ಗೆಲುವಿನ ಆಸೆಗೆ ತಣ್ಣಿರೇರಚಿದರು.
Advertisement
ಆರ್‌ಸಿಬಿ ಪರ ಉತ್ತಮ ಬೌಲಿಂಗ್ ದಾಳಿ ಸಂಘಟಿಸಿದ ಬೌಲರ್‌ಗಳ ಆಟಕ್ಕೆ ತಲೆ ಬಾಗಿದ ಡೆಲ್ಲಿ ನಿಗದಿತ ಓವರ್‌ಗಳಲ್ಲಿ 7 ವಿಕೆಟ್ ಕಳೆದುಕೊಂಡು 173 ರನ್ ಗಳಿಸಲಷ್ಟೆ ಶಕ್ತವಾಗಿ ಸೋಲಿಗೆ ಶರಣಾಯಿತು. ಆರ್‌ಸಿಬಿ 16 ರನ್‌ಗಳ ಗೆಲುವಿನ ನಗೆ ಬೀರಿತು.
Advertisement
Advertisement
190 ರನ್‍ಗಳ ಟಾರ್ಗೆಟ್ ಪಡೆದ ಡೆಲ್ಲಿಗೆ ಡೇವಿಡ್ ವಾರ್ನರ್ ಸ್ಫೋಟಕ 66 ರನ್ (38 ಎಸೆತ, 4 ಬೌಂಡರಿ, 5 ಸಿಕ್ಸ್) ಚಚ್ಚಿ ಗೆಲುವಿನ ಭರವಸೆ ಮೂಡಿಸಿದರು. ವಾರ್ನರ್ ವಿಕೆಟ್ ಕಳೆದುಕೊಂಡ ಬಳಿಕ ಪೆವಿಲಿಯನ್ ಪರೇಡ್ ನಡೆಸಿದ ಡೆಲ್ಲಿ ತಂಡಕ್ಕೆ ರಿಷಭ್ ಪಂತ್ ಕೊನೆಯಲ್ಲಿ 34 ರನ್ (17 ಎಸೆತ, 3 ಬೌಂಡರಿ, 2 ಸಿಕ್ಸ್) ಸಿಡಿಸಿ ಔಟ್ ಆಗುವುದರೊಂದಿಗೆ ಗೆಲುವಿನ ಬಾಗಿಲು ಮುಚ್ಚಿಕೊಂಡಿತು.
Advertisement
ಮಾಕ್ಸಿ,ಕಾರ್ತಿಕ್ ಬೊಂಬಾಟ್ ಬ್ಯಾಟಿಂಗ್
ಟಾಸ್ ಸೋತು ಬ್ಯಾಟಿಂಗ್ ಮಾಡುವ ಅವಕಾಶ ಪಡೆದ ಬೆಂಗಳೂರು ತಂಡ ಆರಂಭಿಕ ಅಘಾತ ಅನುಭವಿಸಿತು. ಆರಂಭಿಕ ಆಟಗಾರ ಅನುಜ್ ರಾವತ್ ಸೊನ್ನೆ ಸುತ್ತಿದರೆ, ಡು ಪ್ಲೆಸಿಸ್ ಗಳಿಗೆ 8 ರನ್ (11 ಎಸೆತ, 2 ಬೌಂಡರಿ)ಗೆ ಅಂತ್ಯವಾಯಿತು. ಮತ್ತೆ ಬಂದ ವಿರಾಟ್ ಕೊಹ್ಲಿ 12 ರನ್ (14 ಎಸೆತ, 1 ಬೌಂಡರಿ) ಸಿಡಿಸಿ ರನೌಟ್ ಆಗಿ ಹೊರನಡೆದರು.
ಆ ಬಳಿಕ ಗ್ಲೇನ್ ಮ್ಯಾಕ್ಸ್‌ವೆಲ್ ಜವಾಬ್ದಾರಿಯುತ ಬ್ಯಾಟಿಂಗ್ ನಡೆಸಿ ತಂಡಕ್ಕೆ ಚೇತರಿಕೆ ನೀಡಿದರು. ಅಲ್ಲದೆ ವೈಯಕ್ತಿಕ 55 ರನ್ (34 ಎಸೆತ, 7 ಬೌಂಡರಿ, 2 ಸಿಕ್ಸ್) ಸಿಡಿಸಿ ಬಿಗ್ ಹಿಟ್ ಸಿಡಿಸಲು ಹೋಗಿ ಕೈ ಸುಟ್ಟುಕೊಂಡರು. ನಂತರ ಜೊತೆಯಾದ ದಿನೇಶ್ ಕಾರ್ತಿಕ್ ಮತ್ತು ಶಹಬಾಜ್ ಅಹಮದ್ ಆರ್‌ಸಿಬಿ ತಂಡದ ರನ್ ಏರಿಕೆಯ ಜವಾಬ್ದಾರಿ ಹೊತ್ತರು. ಈ ಜೋಡಿ ಸ್ಲಾಗ್ ಓವರ್‌ಗಳಲ್ಲಿ ಬೌಂಡರಿ, ಸಿಕ್ಸರ್‌ಗಳನ್ನು ಸರಾಗವಾಗಿ ಸಿಡಿಸಿ ನೋಡ ನೋಡುತ್ತಿದ್ದಂತೆ ತಂಡದ ಮೊತ್ತವನ್ನು 180ರ ಗಡಿದಾಟಿಸಿದರು. ಈ ಜೋಡಿ 6ನೇ ವಿಕೆಟ್‍ಗೆ 97 ರನ್ (52 ಎಸೆತ)ಗಳ ಜೊತೆಯಾಟವಾಡಿ ಡೆಲ್ಲಿ ಬೌಲರ್‌ಗಳನ್ನು ಡಲ್ ಹೊಡೆಸಿತು. ಅಂತಿಮವಾಗಿ ಶಹಬಾಜ್ ಅಹಮದ್ ಅಜೇಯ 32 ರನ್ (21 ಎಸೆತ, 3 ಬೌಂಡರಿ, 1 ಸಿಕ್ಸ್) ಮತ್ತು ದಿನೇಶ್ ಕಾರ್ತಿಕ್ 66 ರನ್ (34 ಎಸೆತ, 5 ಬೌಂಡರಿ, 5 ಸಿಕ್ಸ್) ಸಿಡಿಸಿ ಬ್ಯಾಟಿಂಗ್ ದರ್ಬಾರ್ ನಡೆಸಿದರು. ಅಂತಿಮವಾಗಿ 20 ಓವರ್‌ಗಳಲ್ಲಿ 5 ವಿಕೆಟ್ ಕಳೆದುಕೊಂಡು 189 ಪೇರಿಸಿತು.
ಡೆಲ್ಲಿ ಪರ ಶಾರ್ದೂಲ್ ಠಾಕೂರ್, ಖಲೀಲ್ ಅಹಮದ್, ಅಕ್ಷರ್ ಪಟೇಲ್ ಮತ್ತು ಕುಲ್‍ದೀಪ್ ಯಾದವ್ ತಲಾ 1 ವಿಕೆಟ್ ಪಡೆದರು.