ಪುಣೆ: ಗೆಲುವಿಗಾಗಿ ಕೊನೆಯ ವರೆಗೆ ಹೋರಾಡಿದ ಚೆನ್ನೈ ಬ್ಯಾಟ್ಸ್‌ಮ್ಯಾನ್‌ಗಳ ಮುಂದೆ ಭರ್ಜರಿ ಪ್ರದರ್ಶನ ನೀಡಿದ ಆರ್‌ಸಿಬಿ ಬೌಲರ್‌ಗಳು ತಂಡಕ್ಕೆ 13 ರನ್‍ಗಳ ಜಯ ದಕ್ಕಿಸಿಕೊಟ್ಟರು.
Advertisement
ಒಂದು ಹಂತದಲ್ಲಿ ಉತ್ತಮ ಸ್ಥಿತಿಯಲ್ಲಿದ್ದ ಚೆನ್ನೈ ತಂಡಕ್ಕೆ ಹರ್ಷಲ್ ಪಟೇಲ್ ಪ್ರಮುಖ ಮೂರು ವಿಕೆಟ್ ಕಿತ್ತು ಚೆನ್ನೈ ಗೆಲುವಿನ ಆಸೆಗೆ ಬ್ರೇಕ್ ಹಾಕಿದರು. ಆರ್‌ಸಿಬಿ ನೀಡಿದ 174 ರನ್‍ಗಳ ಚೇಸ್ ಮಾಡಿದ ಚೆನ್ನೈಗೆ ಕಡೆ ಕ್ಷಣದಲ್ಲಿ ಡ್ವೈನ್ ಪ್ರಿಟೋರಿಯಸ್ ಮತ್ತು ಮಹೇಶ್ ತೀಕ್ಷಣ ಗೆಲುವಿನ ಆಸೆ ಮೂಡಿಸಿದರೂ, ಜಯ ತಂದುಕೊಡುವಲ್ಲಿ ವಿಫಲರಾದರು. ಅಂತಿಮವಾಗಿ ಚೆನ್ನೈ 20 ಓವರ್‌ಗಳಲ್ಲಿ 8 ವಿಕೆಟ್ ಕಳೆದುಕೊ0ಂಡು 160 ರನ್ ಬಾರಿಸಿ 13 ರನ್‍ಗಳ ಅಂತರದಿಂದ ಸೋಲು ಕಂಡಿತು.
Advertisement
Advertisement
ಗೆಲ್ಲಲು 173 ರನ್‍ಗಳ ಪೈಪೋಟಿಯ ಮೊತ್ತವನ್ನು ಬೆನ್ನಟ್ಟಿದ ಚೆನ್ನೈ ತಂಡಕ್ಕೆ ಗಾಯಕ್ವಾಡ್ 28 ರನ್ (23 ಎಸೆತ, 3 ಬೌಂಡರಿ, 1 ಸಿಕ್ಸ್) ಡೇವಿಡ್ ಕಾನ್‍ವೇ 56 ರನ್ (37 ಎಸೆತ, 6 ಬೌಂಡರಿ, 2 ಸಿಕ್ಸ್) ಚಚ್ಚಿ ತಂಡಕ್ಕೆ ಗೆಲುವಿನ ಆಸೆ ಚಿಗುರಿಸಿದರು. ಇವರಿಬ್ಬರ ವಿಕೆಟ್ ಕಳೆದುಕೊಂಡ ಬಳಿಕ ಚೆನ್ನೈ ತಂಡ ಕುಸಿತಕ್ಕೊಳಗಾಯಿತು. ಮಧ್ಯಮ ಕ್ರಮಾಂಕದಲ್ಲಿ ಮೊಯಿನ್ ಅಲಿ 34 ರನ್ (27 ಎಸೆತ, 2 ಬೌಂಡರಿ, 2 ಸಿಕ್ಸ್) ಸಿಡಿಸಿ ಔಟ್ ಆಗುವುದರೊಂದಿಗೆ ಗೆಲುವಿನ ಆಸೆ ಕಮರಿತು.
Advertisement
ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಆರ್‌ಸಿಬಿ ಉತ್ತಮ ಆರಂಭ ಪಡಿಯಿತು. ವಿರಾಟ್ ಕೊಹ್ಲಿ ಮತ್ತು ಫಾಫ್ ಡು ಪ್ಲೆಸಿಸ್ ಮೊದಲ ವಿಕೆಟ್‍ಗೆ 62 ರನ್ (44 ಎಸೆತ) ಜೊತೆಯಾಟವಾಡಿ ಚೆನ್ನೈ ಬೌಲರ್‌ಗಳನ್ನು ಕಾಡಿದರು.
ಕೊಹ್ಲಿ 30 ರನ್ (33 ಎಸೆತ, 3 ಬೌಂಡರಿ, 1 ಸಿಕ್ಸ್) ಮತ್ತು ಡು ಪ್ಲೆಸಿಸ್ 38 ರನ್ (22 ಎಸೆತ, 4 ಬೌಂಡರಿ, 1 ಸಿಕ್ಸ್) ಸಿಡಿಸಿ ಔಟ್ ಆದರು. ಆ ಬಳಿಕ ರಜತ್ ಪಾಟಿದಾರ್ 21 ರನ್ (15 ಎಸೆತ, 1 ಬೌಂಡರಿ, 1 ಸಿಕ್ಸ್) ಚಚ್ಚಿ ರನ್ ಮಧ್ಯಮಕ್ರಮಾಂಕದಲ್ಲಿ ರನ್ ಹೆಚ್ಚಿಸಿ ಹೊರ ನಡೆದರು.
ಆರ್‌ಸಿಬಿಗೆ ಕಡಿವಾಣ ಹಾಕಿದ ತೀಕ್ಷಣ
ಮಹಿಪಾಲ್ ಲೋಮ್ರೋರ್ 42 ರನ್ (27 ಎಸೆತ, 3 ಬೌಂಡರಿ, 2 ಸಿಕ್ಸ್) ಮತ್ತು ದಿನೇಶ್ ಕಾರ್ತಿಕ್ ಅಜೇಯ 26 ರನ್ (17 ರನ್, 1 ಬೌಂಡರಿ, 2 ಸಿಕ್ಸ್) ಸಿಡಿಸಿ ತಂಡದ ಮೊತ್ತವನ್ನು 170ರ ಗಡಿ ದಾಟಿಸಿದರು.
ಕೊನೆ ಕ್ಷಣದಲ್ಲಿ ಮಹೇಶ್ ತೀಕ್ಷಣ ಕೆಲ ಕ್ರಮಾಂಕದ 3 ವಿಕೆಟ್ ಬೇಟೆಯಾಡಿದರು. ಅಂತಿಮವಾಗಿ ಆರ್‌ಸಿಬಿ 20 ಓವರ್‌ಗಳಲ್ಲಿ 8 ವಿಕೆಟ್ ಕಳೆದುಕೊಂಡು 173 ರನ್ ಒಟ್ಟು ಗೂಡಿಸಿತು.