ಮುಂಬೈ: ಬೌಲಿಂಗ್‍ನಲ್ಲಿ ಚಹಲ್ ಮತ್ತು ಬ್ಯಾಟಿಂಗ್‍ನಲ್ಲಿ ಶಿಮ್ರಾನ್ ಹೆಟ್ಮೆಯರ್ ಭರ್ಜರಿ ಆಟದ ನೆರವಿನಿಂದ ಲಕ್ನೋ ವಿರುದ್ಧ ರಾಜಸ್ಥಾನ ತಂಡ 3 ರನ್‍ಗಳ ರೋಚಕ ಜಯ ದಾಖಲಿಸಿದೆ.
Advertisement
ರಾಜಸ್ಥಾನ ಗೆದ್ದಿದ್ದು ಹೇಗೆ?
ಕೊನೆಯ ಓವರ್‌ನಲ್ಲಿ ಲಕ್ನೋ ಗೆಲುವಿಗೆ 15 ರನ್ ಬೇಕಾಗಿತ್ತು. ಕುಲದೀಪ್ ಸೇನ್ ಎಸೆದ ಕೊನೆಯ ಓವರ್‌ನಲ್ಲಿ ಕೇವಲ 11 ರನ್ ಬಿಟ್ಟುಕೊಟ್ಟು ಸೂಪರ್ ಸ್ಪೆಲ್ ಮಾಡಿದರು. ಈ ಮೊದಲು ರಾಜಸ್ಥಾನ ಪರ ಚಹಲ್ 4 ವಿಕೆಟ್ ಕಿತ್ತು ಮಿಂಚಿದರೆ, ಬ್ಯಾಟಿಂಗ್‍ನಲ್ಲಿ ಹೆಟ್ಮೆಯರ್ ಅರ್ಧಶತಕ ಸಿಡಿಸಿ ಮಿಂಚಿದ ನೆರವಿನಿಂದ ರಾಜಸ್ಥಾನ ತಂಡ 3 ರನ್‍ಗಳ ರೋಚಕ ಗೆಲುವು ಕಂಡಿತು.
Advertisement
Advertisement
166 ರನ್‍ಗಳ ಗುರಿ ಬೆನ್ನಟ್ಟಿದ ಲಕ್ನೋ ತಂಡ ನಾಯಕ ಕೆ.ಎಲ್ ರಾಹುಲ್ ಮತ್ತು ಕೆ. ಗೌತಮ್‍ರನ್ನು ಶೂನ್ಯಕ್ಕೆ ಕಳೆದುಕೊಂಡಿತು. ಒಂದು ಕಡೆ ವಿಕೆಟ್ ಉರುಳುತ್ತಿದ್ದರು ಡಿ ಕಾಕ್ ಅಪಾಯಕಾರಿಯಾಗುವ ಸೂಚನೆ ನೀಡಿದರು. ಆದರೆ ಡಿ ಕಾಕ್ ಆಟ 39 ರನ್ (32 ಎಸೆತ, 2 ಬೌಂಡರಿ, 1 ಸಿಕ್ಸ್)ಗೆ ಅಂತ್ಯಗೊಂಡಿತು. ಲಕ್ನೋ ಪರ ದೀಪಕ್ ಹೂಡಾ 25 ರನ್ ಮತ್ತು ಕೃನಾಲ್ ಪಾಂಡ್ಯ 22 ರನ್ ಸಿಡಿಸಿ ವಿಕೆಟ್ ಒಪ್ಪಿಸಿದರು. ಕೊನೆಯಲ್ಲಿ ದುಷ್ಮಂತ ಚಮೀರ 13 ರನ್ ಮತ್ತು ಮಾರ್ಕಸ್ ಸ್ಟೊಯಿನಿಸ್ ಅಜೇಯ 38 ರನ್ (17 ಎಸೆತ, 2 ಬೌಂಡರಿ, 4 ಸಿಕ್ಸ್) ಸಿಡಿಸಿ ಲಕ್ನೋ ಗೆಲುವಿಗೆ ಶ್ರಮಿಸಿದರು ಫಲ ನೀಡಲಿಲ್ಲ. ಅಂತಿಮವಾಗಿ ಲಕ್ನೋ ತಂಡ 20 ಓವರ್‌ಗಳ ಅಂತ್ಯಕ್ಕೆ 8 ವಿಕೆಟ್ ಕಳೆದುಕೊಂಡು 162 ರನ್ ಗಳಿಸಲಷ್ಟೇ ಶಕ್ತವಾಯಿತು.
Advertisement
ಈ ಮೊದಲು ಟಾಸ್ ಗೆದ್ದ ಲಕ್ನೋ ಸೂಪರ್ ಜೈಂಟ್ಸ್, ರಾಜಸ್ಥಾನ ತಂಡಕ್ಕೆ ಮೊದಲು ಬ್ಯಾಟಿಂಗ್ ಮಾಡುವ ಅವಕಾಶ ನೀಡಿತು. ಆದರೆ ರಾಜಸ್ಥಾನ ತಂಡ ಈ ಅವಕಾಶವನ್ನು ಬಳಸಿಕೊಳ್ಳುವಲ್ಲಿ ವಿಫಲವಾಯಿತು. ಜೋಸ್ ಬಟ್ಲರ್ 13 ರನ್ (11 ಎಸೆತ, 1 ಬೌಂಡರಿ, 1 ಸಿಕ್ಸ್) ಸಂಜು ಸ್ಯಾಮ್ಸನ್ 13 ರನ್ (12 ಎಸೆತ, 2 ಬೌಂಡರಿ) ಮತ್ತು ಪಡಿಕ್ಕಲ್ 29 ರನ್ (4 ಬೌಂಡರಿ) ಸಿಡಿಸಿ ದೊಡ್ಡ ಮೊತ್ತ ಕಲೆಹಾಕುವಲ್ಲಿ ವಿಫಲರಾದರು.
ಆದರೆ ಇನ್ನೊಂದೆಡೆ ಶಿಮ್ರಾನ್ ಹೆಟ್ಮೆಯರ್ ಲಕ್ನೋ ಬೌಲರ್‌ಗಳ ಬೆವರಿಳಿಸಿದರು. ಇನ್ನಿಂಗ್ಸ್‌ನ ಕೊನೆಯಲ್ಲಿ ಸ್ಫೋಟಕ ಆಟಕ್ಕೆ ಮುಂದಾದ ಹೆಟ್ಮೆಯರ್ ಅಜೇಯ 59 ರನ್ (36 ಎಸೆತ, 1 ಬೌಂಡರಿ, 6 ಸಿಕ್ಸ್) ಸಿಡಿಸಿ ರಾಜಸ್ಥಾನಕ್ಕೆ ಆಸರೆಯಾದರು. ಇವರಿಗೆ ಉತ್ತಮ ಸಾಥ್ ನೀಡಿದ ಆರ್ ಅಶ್ವಿನ್ 28 ರನ್ (23 ಎಸೆತ, 2 ಸಿಕ್ಸ್) ಸಿಡಿಸಿ ನೆರವಾದರು. ಅಂತಿಮವಾಗಿ ರಾಜಸ್ಥಾನ ತಂಡ 20 ಓವರ್‌ಗಳಲ್ಲಿ 6 ವಿಕೆಟ್ ಕಳೆದುಕೊಂಡು 165 ರನ್ ಒಟ್ಟುಗೂಡಿಸಿತು.
ಲಕ್ನೋ ಪರ ಜೇಸನ್ ಹೋಲ್ಡರ್ ಮತ್ತು ಕೆ.ಗೌತಮ್ ತಲಾ 2 ವಿಕೆಟ್ ಕಿತ್ತು ಮಿಂಚಿದರು. ಅವೇಶ್ ಖಾನ್ ಒಂದು ವಿಕೆಟ್ ತನ್ನದಾಗಿಸಿಕೊಂಡರು.