ಮುಂಬೈ: ರಾಜಸ್ಥಾನ ರಾಯಲ್ಸ್ ತಂಡದ ಕೆಚ್ಚೆದೆಯ ಹೋರಾಟದಿಂದಾಗಿ ಲಕ್ನೋ ವಿರುದ್ಧ 24 ರನ್ಗಳ ಭರ್ಜರಿ ಜಯದೊಂದಿಗೆ ಅಂಕಪಟ್ಟಿಯಲ್ಲಿ 16 ಅಂಕಗಳಿಸಿ ಲಕ್ನೋ ತಂಡದೊಂದಿಗೆ ಪ್ಲೇ ಆಫ್ ಫೈನಲ್ ಟಿಕೆಟ್‍ಗಾಗಿ ತೀವ್ರ ಸ್ಪರ್ಧೆಯೊಡ್ಡಿದೆ.
Advertisement
ಕೊನೆಯ 12 ಎಸೆತಗಳಲ್ಲಿ 48 ರನ್‍ಗಳ ಗುರಿ ಪಡೆದ ಲಕ್ನೋ ತಂಡಕ್ಕೆ 19ನೇ ಓವರ್‌ನಲ್ಲಿ 15 ರನ್ ಬಂತು. ಕೊನೆಯ ಓವರ್‌ನಲ್ಲಿ 34 ರನ್ ಬೇಕಿತ್ತು. ಮಾರ್ಕಸ್ ಸ್ಟೊಯಿನಿಸ್ ಹೋರಾಟದ ಮುಂಚೂಣಿಯಲ್ಲಿದ್ದರೂ ಕೊನೆಯ ಓವರ್‌ನಲ್ಲಿ 27 ರನ್ (17 ಎಸೆತ, 1 ಬೌಂಡರಿ, 2 ಸಿಕ್ಸ್) ಸಿಡಿಸಿ ಔಟ್ ಆಗುವುದರೊಂದಿಗೆ ಗೆಲುವಿನ ಆಸೆ ಕಮರಿತು. ಇತ್ತ ರಾಜಸ್ಥಾನ ಈ ಗೆಲುವಿನೊಂದಿಗೆ ಪ್ಲೇ ಆಫ್‍ಗೆ ಮತ್ತಷ್ಟು ಸನಿಹವಾಗಿದೆ.
Advertisement
Advertisement
ಗೆಲ್ಲಲು 179 ರನ್‍ಗಳ ಗುರಿ ಪಡೆದ ಲಕ್ನೋ ತಂಡ ಗೆಲುವಿಗಾಗಿ ಹೋರಾಡಿ ಕೊನೆಗೆ 8 ವಿಕೆಟ್ ಕಳೆದುಕೊಂಡು 154 ರನ್ ಪೇರಿಸಲಷ್ಟೇ ಶಕ್ತವಾಗಿ ಪ್ಲೇ ಆಫ್ ಟಿಕೆಟ್ ಖಾತ್ರಿ ಪಡಿಸುವಲ್ಲಿ ವಿಫಲವಾಯಿತು.
Advertisement
ಪೈಪೋಟಿಯ ಮೊತ್ತವನ್ನು ಬೆನ್ನಟ್ಟಿದ ಲಕ್ನೋ 29 ರನ್ ಆಗುವಷ್ಟರಲ್ಲಿ ಅಗ್ರಕ್ರಮಾಂಕದ 3 ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತು. ಬಳಿಕ ದೀಪಕ್ ಹೂಡಾ ಮತ್ತು ಕೃನಾಲ್ ಪಾಂಡ್ಯ ಲಕ್ನೋ ತಂಡದ ಚೇಸಿಂಗ್ ಜವಾಬ್ದಾರಿ ವಹಿಸಿಕೊಂಡರು. ಈ ಜೋಡಿ 4ನೇ ವಿಕೆಟ್‍ಗೆ 65 ರನ್ (46 ಎಸೆತ) ಸಿಡಿಸಿ ಬೇರ್ಪಟ್ಟಿತು. ಪಾಂಡ್ಯ 25 ರನ್ (23 ಎಸೆತ, 1 ಬೌಂಡರಿ, 1 ಸಿಕ್ಸ್) ಬಾರಿಸಿ ಔಟ್ ಆದರು. ಇತ್ತ ಹೂಡಾ ಮಾತ್ರ ಹೂಡಿಬಡಿ ಆಟದ ಮೂಲಕ ಲಕ್ನೋಗೆ ಪ್ಲೇ ಆಫ್ ಟಿಕೆಟ್ ಕೊಡಿಸುವಲ್ಲಿ ಹೋರಾಡಿ ಕೊನೆಗೆ 59 ರನ್ (39 ಎಸೆತ, 5 ಬೌಂಡರಿ, 2 ಸಿಕ್ಸ್) ಸಿಡಿಸಿ ವಿಕೆಟ್ ಕೈಚೆಲ್ಲಿಕೊಂಡರು.
ಟಾಸ್ ಗೆದ್ದ ರಾಜಸ್ಥಾನ ತಂಡ ಬ್ಯಾಟಿಂಗ್ ಆಯ್ದುಕೊಂಡಿತು. ಆದರೆ ರಾಜಸ್ಥಾನದ ಪರ ಅಬ್ಬರದಾಟ ಪ್ರದರ್ಶಿಸುತ್ತಿದ್ದ ಜೋಸ್ ಬಟ್ಲರ್ 2 ರನ್‍ಗಳಿಗೆ ಸೈಲೆಂಟಾದರು. ಇತ್ತ ಯಶಸ್ವಿ ಜೈಸ್ವಾಲ್ ವೈಲೆಂಟ್ ಆಟಕ್ಕೆ ಮೊರೆ ಹೋದರು. ನಾಯಕ ಸಂಜು ಸ್ಯಾಮ್ಸನ್ ಜೊತೆ 2ನೇ ವಿಕೆಟ್‍ಗೆ 64 ರನ್(40 ಎಸೆತ) ಗಳ ಜೊತೆಯಾಟವಾಡಿ ತಂಡಕ್ಕೆ ಆಸರೆಯಾದರು. ಸ್ಯಾಮ್ಸನ್ ಆಟ 32 ರನ್‍ಗೆ (24 ಎಸೆತ, 6 ಬೌಂಡರಿ)ಗೆ ಅಂತ್ಯಗೊಂಡಿತು.
ಬಳಿಕ ಜೈಸ್ವಾಲ್ ಜೊತೆ ಕನ್ನಡಿಗ ದೇವದತ್ ಪಡಿಕ್ಕಲ್ ಅಬ್ಬರಿಸಲು ಆರಂಭಿಸಿದರು. ಕೆಲ ಕಾಲ ಲಕ್ನೋ ತಂಡದ ಬೌಲರ್‍ಗಳಿಗೆ ಕಾಟಕೊಟ್ಟ ಜೈಸ್ವಾಲ್ 41 ರನ್ (29 ಎಸೆತ, 6 ಬೌಂಡರಿ, 1 ಸಿಕ್ಸ್) ಮತ್ತು ಪಡಿಕ್ಕಲ್ 39 ರನ್ (18 ಎಸೆತ, 5 ಬೌಂಡರಿ, 2 ಸಿಕ್ಸ್) ಬಾರಿಸಿ ಔಟ್ ಆಗಿ ಹೊರ ನಡೆದರು.
ಆ ಬಳಿಕ ರಿಯಾನ್ ಪರಾಗ್ 19 ರನ್, ನಿಶಾಮ್ 14, ಅಶ್ವಿನ್ ಅಜೇಯ 10 ರನ್ ಮತ್ತು ಟ್ರೆಂಟ್ ಬೌಲ್ಟ್ 17 ರನ್‍ಗಳ ನೆರವಿನಿಂದ ರಾಜಸ್ಥಾನ ನಿಗದಿತ ಓವರ್‌ಗಳಲ್ಲಿ 6 ವಿಕೆಟ್ ನಷ್ಟಕ್ಕೆ 178 ರನ್‍ಗಳ ಉತ್ತಮ ಮೊತ್ತ ಪೇರಿಸಿತು.