CricketLatestMain PostSports

ಸೋಲಿನ ಬಳಿಕ ನಾಯಕ ರಾಹುಲ್‌ನನ್ನು ದಿಟ್ಟಿಸಿದ ಗಂಭೀರ್ – ನೆಟ್ಟಿಗರಿಂದ ಟ್ರೋಲ್

Advertisements

ಮುಂಬೈ: ಬುಧವಾರ ನಡೆದ ಆರ್‌ಸಿಬಿ ತಂಡದ ವಿರುದ್ಧದ ಪಂದ್ಯದಲ್ಲಿ ಲಕ್ನೋ ಸೂಪರ್ ಜೈಂಟ್ಸ್(ಎಲ್‌ಎಸ್‌ಜಿ) ತಂಡ ಸೋಲುಂಡಿದೆ. ಲಕ್ನೋ ತಂಡ ಹಲವು ಕ್ಯಾಚ್‌ಗಳನ್ನು ಕೈ ಬಿಟ್ಟಿದ್ದರಿಂದಲೇ ಸೋಲಿಗೆ ಕಾರಣವಾಯಿತು ಎಂದು ತಂಡದ ನಾಯಕ ಕೆಎಲ್ ರಾಹುಲ್ ಬೇಸರ ವ್ಯಕ್ತಪಡಿಸಿದ್ದಾರೆ.

ಲಕ್ನೋ ತಂಡ ಸೋಲಿನ ಬೇಸರದಲ್ಲಿದ್ದರೂ ನೆಟ್ಟಿಗರು ಮಾತ್ರ ಟ್ರೋಲ್ ಮಾಡುವುದನ್ನು ಮುಂದುವರಿಸಿದ್ದಾರೆ. ತಂಡದ ಮಾರ್ಗದರ್ಶಕ ಗೌತಮ್ ಗಂಭೀರ್ ಸೋಲಿನ ಬಳಿಕ ಹತಾಶ ಭಾವದಲ್ಲಿ ನಾಯಕ ರಾಹುಲ್ ಕಡೆ ನೋಡುವ ಫೋಟೋವೊಂದು ಇದೀಗ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿದೆ. ಇದನ್ನೂ ಓದಿ: ನಾವು ಸೋಲಲು ಇದೇ ಕಾರಣ – ಬೇಸರ ವ್ಯಕ್ತಪಡಿಸಿದ ಕೆ.ಎಲ್ ರಾಹುಲ್

ಕ್ರಿಕೆಟ್ ಪ್ರಿಯರು ಗಂಭೀರ್ ರಾಹುಲ್ ಕಡೆ ದಿಟ್ಟಿಸಿ ನೋಡುವ ಫೋಟೋವನ್ನು ಬಳಸಿ ಮೀಮ್‌ಗಳನ್ನು ರಚಿಸುತ್ತಿದ್ದಾರೆ ಹಾಗೂ ತಮಾಷೆಯ ಪ್ರತಿಕ್ರಿಯೆಗಳನ್ನು ಪೋಸ್ಟ್ ಮಾಡುತ್ತಿದ್ದಾರೆ.

ಗೌತಮ್ ಗಂಭೀರ್ ಒಬ್ಬ ಭಾವನಾತ್ಮಕ ನಾಯಕ ಎಂದೇ ಹೆಸರುವಾಸಿ. ಅವರು ಮೈದಾನದ ಒಳಗೆ, ಹೊರಗೆ ಮಾತ್ರವಲ್ಲದೇ ಡ್ರೆಸ್ಸಿಂಗ್ ರೂಮ್‌ನಲ್ಲಿ ಭಾವನಾತ್ಮಕ ಹೇಳಿಕೆಗಳನ್ನು ಆಗಾಗ ನೀಡುತ್ತಲೇ ಇರುತ್ತಾರೆ. ಇದನ್ನೂ ಓದಿ: ಪಾಟಿದರ್ ಸ್ಫೋಟಕ ಶತಕ, ಡಿ.ಕೆ ಅಬ್ಬರ – ಅಹಮದಾಬಾದ್‌ಗೆ ಹಾರಿದ ಬೆಂಗ್ಳೂರು

ಬುಧವಾರ ಲಕ್ನೋ ವಿರುದ್ಧ ಆರ್‌ಸಿಬಿ 14 ರನ್‌ಗಳ ಜಯ ಸಾಧಿಸಿದೆ. ಆರ್‌ಸಿಬಿಯೊಂದಿಗಿನ ಪಂದ್ಯದಲ್ಲಿ ಸುಲಭವಾಗಿ ಲಕ್ನೋಗೆ ಗೆಲ್ಲಲು ಅವಕಾಶವಿದ್ದರೂ ಹಲವು ಕ್ಯಾಚ್‌ಗಳನ್ನು ಬಿಟ್ಟು, ಸೋಲನ್ನೊಪ್ಪಿಕೊಂಡಿದೆ. ಇದೀಗ ಆರ್‌ಸಿಬಿ 2ನೇ ಕ್ವಾಲಿಫೈಯರ್ ಪಂದ್ಯಕ್ಕೆ ಕಾಲಿಟ್ಟಿದ್ದು, ಲಕ್ನೋ ಸೋಲಿನೊಂದಿಗೆ 4ನೇ ಸ್ಥಾನಕ್ಕೆ ತೃಪ್ತಿಪಟ್ಟಿದೆ.

Leave a Reply

Your email address will not be published.

Back to top button