ಮುಂಬೈ: ಮಿಚೆಲ್ ಮಾರ್ಷ್ ಮತ್ತು ಡೇವಿಡ್ ವಾರ್ನರ್ ಅವರ ಅಬ್ಬರದ ಆಟದಿಂದ ಡೆಲ್ಲಿ ಕ್ಯಾಪಿಟಲ್ಸ್ ರಾಜಸ್ಥಾನ ರಾಯಲ್ಸ್ ವಿರುದ್ಧ 8 ವಿಕೆಟ್‌ಗಳ ಜಯ ಸಾಧಿಸಿದೆ.
ಗೆಲ್ಲಲು 161 ರನ್‌ಗಳ ಗುರಿಯನ್ನು ಪಡೆದ ಡೆಲ್ಲಿ 18.1 ಓವರ್‌ಗಳಲ್ಲಿ 2 ವಿಕೆಟ್ ನಷ್ಟಕ್ಕೆ 161 ರನ್ ಹೊಡೆಯುವ ಮೂಲಕ ಗೆಲುವು ಸಾಧಿಸಿತು. ಪ್ಲೇ ಆಫ್‌ಗೆ ಹೋಗಲು ಡೆಲ್ಲಿಗೆ ಇಂದಿನ ಪಂದ್ಯದಲ್ಲಿ ಗೆಲುವು ಅಗತ್ಯವಾಗಿತ್ತು.
Advertisement
Advertisement
ಬ್ಯಾಟಿಂಗ್ ಆರಂಭಿಸಿದ ಡೆಲ್ಲಿ ಮೊದಲ ಓವರ್‌ನ ಎರಡನೇ ಎಸೆತದಲ್ಲೇ ಮೊದಲ ವಿಕೆಟ್ ಕಳೆದುಕೊಂಡಿತ್ತು. ಟ್ರೆಂಟ್ ಬೌಲ್ಟ್ ಎಸೆತದಲ್ಲಿ ಶ್ರೀಕಾರ್ ಭರತ್ ಖಾತೆ ತೆರೆಯದೇ ಕೀಪರ್ ಸ್ಯಾಮ್ಸನ್‌ಗೆ ಕ್ಯಾಚ್ ನೀಡಿ ಔಟಾಗಿದ್ದರು.
Advertisement
ಸಂಕಷ್ಟದ ಸಮಯದಲ್ಲಿ ಒಂದಾದ ಆಸ್ಟ್ರೇಲಿಯಾದ ಆಟಗಾರರಾದ ಮಾರ್ಷ್ ಮತ್ತು ಡೇವಿಡ್ ವಾರ್ನರ್ ನಿಧನವಾಗಿ ಇನ್ನಿಂಗ್ಸ್ ಕಟ್ಟಲು ಆರಂಭಿಸಿದರು. ಇವರಿಬ್ಬರೂ ಎರಡನೇ ವಿಕೆಟ್‌ಗೆ 101 ಎಸೆತಗಳಲ್ಲಿ 144 ರನ್ ಜೊತೆಯಾಡುವ ಮೂಲಕ ಭದ್ರವಾದ ಅಡಿಪಾಯ ಹಾಕಿದರು. ಇದನ್ನೂ ಓದಿ: RCB ಫ್ಯಾನ್ಸ್‌ಗಳಿಗೆ ಭರ್ಜರಿ ಗುಡ್‌ನ್ಯೂಸ್ – ಎಬಿಡಿ ಮತ್ತೆ ಎಂಟ್ರಿ
Advertisement
ನಾಯಕ ಸಂಜು ಸ್ಯಾಮ್ಸನ್ ಅವರು ವಾರ್ನರ್ ಮತ್ತು ಮಾರ್ಷ್ ಅವರನ್ನು ಬೇರ್ಪಡಿಸಲು ಸಾಕಷ್ಟು ತಂತ್ರ ಮಾಡಿದರೂ ಇಬ್ಬರು ಸಿಕ್ಸರ್, ಬೌಂಡರಿಗಳನ್ನು ಸಿಡಿಸುತ್ತಿದ್ದರು. ಮಾರ್ಷ್ 89 ರನ್(62 ಎಸೆತ, 5 ಬೌಂಡರಿ, 7 ಸಿಕ್ಸ್) ಗಳಿಸಿದ್ದಾಗ ಸಿಕ್ಸ್ ಸಿಡಿಸಲು ಹೋಗಿ ಕ್ಯಾಚ್ ನೀಡಿ ಔಟಾದರು.
ಡೇವಿಡ್ ವಾರ್ನರ್ ಔಟಾಗದೇ 52 ರನ್( 41 ಎಸೆತ, 5 ಬೌಂಡರಿ, 1 ಸಿಕ್ಸರ್) ನಾಯಕ ರಿಷಭ್ ಪಂತ್ ಔಟಾಗದೇ 13 ರನ್( 4 ಎಸೆತ, 2 ಸಿಕ್ಸರ್) ಸಿಡಿಸಿ ತಂಡಕ್ಕೆ ಜಯವನ್ನು ತಂದುಕೊಟ್ಟರು.
ಇಂದಿನ ಪಂದ್ಯವನ್ನು ಜಯಗಳಿಸಿದ ಡೆಲ್ಲಿ ಅಂಕಪಟ್ಟಿಯಲ್ಲಿ 5ನೇ ಸ್ಥಾನದಲ್ಲೇ ಮುಂದುವರಿದಿದೆ. 12 ಪಂದ್ಯವಾಡಿರುವ ಡೆಲ್ಲಿ 6 ಜಯದೊಂದಿಗೆ 12 ಅಂಕವನ್ನು ಪಡೆದಿದೆ. ಗುಜರಾತ್ ಟೈಟನ್ಸ್ 18 ಅಂಕದೊಂದಿಗೆ ಈಗಾಗಲೇ ಫ್ಲೇ ಆಫ್ ಪ್ರವೇಶಿಸಿದೆ. 16 ಅಂಕ ಸಂಪಾದಿಸಿರುವ ಲಕ್ನೋ ಎರಡನೇ ಸ್ಥಾನದಲ್ಲಿದೆ. 14 ಅಂಕ ಪಡೆದಿರುವ ರಾಜಸ್ಥಾನ ಮತ್ತು ಬೆಂಗಳೂರು ಮೂರು ಮತ್ತು ನಾಲ್ಕನೇ ಸ್ಥಾನದಲ್ಲಿದೆ.
ಸಾಧಾರಣ ಮೊತ್ತ:
ಟಾಸ್ ಸೋತು ಬ್ಯಾಟಿಂಗ್ ಮಾಡಿದ ರಾಜಸ್ಥಾನ ರಾಯಲ್ಸ್ 11 ರನ್ ಗಳಿಸುವಷ್ಟರಲ್ಲೇ ಜೋಸ್ ಬಟ್ಲರ್ ವಿಕೆಟ್ ಕಳೆದುಕೊಂಡಿತ್ತು. ಯಶಸ್ವಿ ಜೈಸ್ವಾಲ್ 19 ರನ್ ಹೊಡೆದು ಔಟಾದರೆ ಸ್ಪಿನ್ನರ್ ಅಶ್ವಿನ್ ಸ್ಫೋಟಕ ಅರ್ಧಶತಕ ಸಿಡಿಸಿ ಔಟಾದರು.
ಅಶ್ವಿನ್ 50 ರನ್(38 ಎಸೆತ, 4 ಬೌಂಡರಿ, 2 ಸಿಕ್ಸರ್) ಹೊಡೆದರೆ ದೇವದತ್ ಪಡಿಕ್ಕಲ್ 48 ರನ್(30 ಎಸೆತ, 6 ಬೌಂಡರಿ, 2 ಸಿಕ್ಸರ್) ಹೊಡೆದು ಔಟಾದರು. ಮಧ್ಯಮ ಕ್ರಮಾಂಕದಲ್ಲಿ ಕುಸಿತ ಕಂಡಿದ್ದರಿಂದ ಅಂತಿಮವಾಗಿ ರಾಜಸ್ಥಾನ 6 ವಿಕೆಟ್ ನಷ್ಟಕ್ಕೆ 160 ರನ್ ಹೊಡೆಯಿತು.
ಚೇತನ್ ಸಕಾರಿಯಾ, ಅನ್ರಿಚ್ ನಾರ್ಟ್ಜೆ, ಮಿಚೆಲ್ ಮಾರ್ಷ್ ತಲಾ ಎರಡು ವಿಕೆಟ್ ಪಡೆದರು.