ಮುಂಬೈ: RCB ತಂಡ ಶುರುವಾದಾಗಿನಿಂದಲೂ ವಿರಾಟ್‌ಕೊಹ್ಲಿ ಹಾಗೂ ಎಬಿ ಡಿವಿಲಿಯರ್ಸ್ ಅವರಿಬ್ಬರ ಸ್ನೇಹ ಗೊತ್ತಿರದ ವಿಷಯವೇನಲ್ಲ. ಕೆಲ ವರ್ಷಗಳಲ್ಲಿ ಈ ಇಬ್ಬರ ಜೋಡಿ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ತಂಡವನ್ನು ಮೆಚ್ಚುವಂತೆ ಮಾಡಿದೆ. ಆದರೆ, ಎಬಿಡಿ ನಿವೃತ್ತಿ ಘೋಷಿಸಿದ ನಂತರ ವಿರಾಟ್ ಕೊಹ್ಲಿ ಇದೇ ಮೊದಲಬಾರಿಗೆ ಐಪಿಎಲ್‌ನಲ್ಲಿ ಕಳಪೆ ಪ್ರದರ್ಶನ ತೋರಿದ್ದಾರೆ.
Advertisement
ಸದ್ಯ ಪ್ಲೇ ಆಫ್‌ಗೆ ಇನ್ನೊಂದೆ ಹೆಜ್ಜೆ ತಲುಪಲು ಬಾಕಿ ಇರುವ ಹೊತ್ತಿನಲ್ಲೇ ವಿರಾಟ್ ಕೊಹ್ಲಿ ಆರ್‌ಸಿಬಿ ಅಭಿಮಾನಿಗಳಿಗೆ ಭರ್ಜರಿ ಗುಡ್‌ನ್ಯೂಸ್ ಕೊಟ್ಟಿದ್ದಾರೆ. ಎಬಿಡಿ ಮತ್ತೆ ಆರ್‌ಸಿಬಿಗೆ ಮರಳುತ್ತಿದ್ದಾರೆ ಎನ್ನುವ ವಿಷಯವನ್ನು ಕೊಹ್ಲಿ ಅವರೇ ಬಹಿರಂಗಪಡಿಸಿದ್ದಾರೆ. ಇದನ್ನೂ ಓದಿ: ಹೈದರಾಬಾದ್ ವಿರುದ್ಧದ ಪಂದ್ಯದಲ್ಲಿ ಹಸಿರು ಜೆರ್ಸಿಯಲ್ಲಿ ಕಂಗೊಳಿಸಲಿದೆ ಆರ್‌ಸಿಬಿ
Advertisement
Interview of the year! Catch Virat Kohli in a relaxed, honest and fun avatar, even as Mr. Nags tries to annoy him just like he’s done over the years. ????????
Tell us what the best moment from this interview was for you, in the comments section. ????????#PlayBold #IPL2022 #RCB #ನಮ್ಮRCB pic.twitter.com/vV6MyRDyRt
— Royal Challengers Bangalore (@RCBTweets) May 11, 2022
Advertisement
ಮಿಸ್ಟರ್ 360 ಡಿಗ್ರಿ ಖ್ಯಾತಿಯ ಎಬಿ ಡಿವಿಲಿಯರ್ಸ್ ಆರ್‌ಸಿಬಿ ಜೆರ್ಸಿ (ಪೋಷಾಕು)ಯಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಎನ್ನುವ ಮಾಹಿತಿ ಹೊರಬಿದ್ದಿದೆ. ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ತನ್ನ ಟ್ವೀಟ್ ಖಾತೆಯಲ್ಲಿ ವಿಡಿಯೋ ಒಂದನ್ನು ಬಿಡುಗಡೆ ಮಾಡಿದ್ದು, ಈ ವಿಡಿಯೋ ನಲ್ಲಿ ವಿರಾಟ್ ಕೊಹ್ಲಿ ಮತ್ತೆ ಎಬಿಡಿ ಆರ್‌ಸಿಬಿಗೆ ಮರಳುವುದನ್ನು ಮೌಖಿಕವಾಗಿ ಘೋಷಿಸಿದ್ದಾರೆ.
Advertisement
We #PlayBold to the end. We fight to the end. ????
Bring on Friday! ????????#WeAreChallengers #IPL2022 #Mission2022 #RCB #ನಮ್ಮRCB pic.twitter.com/57b0kKWuns
— Royal Challengers Bangalore (@RCBTweets) May 11, 2022
ಎಬಿಡಿ ಎಲ್ಲಾ ಸ್ವರೂಪಗಳಿಂದ ನಿವೃತ್ತರಾಗಿದ್ದಾರೆ. ಹಾಗಾಗಿ ಈ ಬಾರಿ ಐಪಿಎಲ್‌ನಲ್ಲಿ ಆಡುವ ಪ್ರಶ್ನೆಯೇ ಇರಲಿಲ್ಲ. ಆದರೆ, ಮುಂದಿನ ಸೀಸನ್‌ಗೆ ಮರಳಲಿದ್ದಾರೆ. ಆರ್‌ಸಿಬಿ ಎಬಿಡಿಯನ್ನು ಮತ್ತೆ ಕರೆಸಿಕೊಳ್ಳುವ ಪ್ರಕ್ರಿಯೆ ಆರಂಭಿಸಿದೆ ಯಾವ ರೀತಿ ಎನ್ನುವುದು ತಿಳಿದು ಬಂದಿಲ್ಲ. ಇದನ್ನೂ ಓದಿ: ಹೈದ್ರಾಬಾದ್ ಹಾರಾಟಕ್ಕೆ ಬ್ರೇಕ್ ಹಾಕಿದ ‘ಗ್ರೀನ್‌ಬಾಯ್ಸ್’- RCBಗೆ 67 ರನ್‌ಗಳ ಭರ್ಜರಿ ಜಯ
ಇತ್ತೀಚಿನ ಸಂದರ್ಶನವೊಂದರಲ್ಲಿ ವಿರಾಟ್ ಕೊಹ್ಲಿ ಅವರು, ನಾನು ತುಂಬಾ ನೆನಪಿಸಿಕೊಳ್ಳುತ್ತೇನೆ. ಎಬಿಡಿ ಜೊತೆ ಪ್ರತಿದಿನ ಮಾತನಾಡುತ್ತೇನೆ. ನನಗೆ ಸಂದೇಶಗಳನ್ನು ಕಳುಹಿಸುತ್ತಲೇ ಇರುತ್ತಾರೆ. ನಾವು ನಿರಂತರವಾಗಿ ಸಂಪರ್ಕದಲ್ಲಿರುತ್ತೇವೆ. ಅವರೂ ಆರ್‌ಸಿಬಿ ಪಂದ್ಯಗಳನ್ನೂ ಉತ್ಸುಕತೆಯಿಂದ ವೀಕ್ಷಿಸುತ್ತಿದ್ದಾರೆ. ಮುಂದಿನ ವರ್ಷದಲ್ಲಿ ಅವರು ಆರ್‌ಸಿಬಿ ತಂಡಕ್ಕೆ ಮರಳುವ ಆಶಾದಾಯಕ ಬೆಳವಣಿಗೆ ಇದೆ ಎಂದು ಹೇಳಿದ್ದಾರೆ.