ಮುಂಬೈ: ಕೋಲ್ಕತ್ತಾ ನೈಟ್‌ರೈಡರ್ಸ್ ವಿರುದ್ಧ ನಡೆದ ಐಪಿಎಲ್ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡವು 4 ವಿಕೆಟ್‌ಗಳ ಭರ್ಜರಿ ಜಯ ದಾಖಲಿಸಿತು. ರೋವ್ಮನ್ ಪೋವೆಲ್ ಹಾಗೂ ಡೇವಿಡ್ ವಾರ್ನರ್ ಅವರ ಬ್ಯಾಟಿಂಗ್ ಅಬ್ಬರದಿಂದ ಡೆಲ್ಲಿ ತಂಡವು ಗೆದ್ದು ಬೀಗಿತು.
Advertisement
ಪಂದ್ಯದಲ್ಲಿ ಟಾಸ್ ಗೆದ್ದ ಡೆಲ್ಲಿ ಕ್ಯಾಪಿಟಲ್ಸ್ ತಂಡದ ನಾಯಕ ರಿಷಭ್ ಪಂತ್ ಫೀಲ್ಡಿಂಗ್ ಆಯ್ದುಕೊಂಡು ಎದುರಾಳಿ ಕೋಲ್ಕತ್ತಾ ನೈಟ್ ರೈಡರ್ಸ್ ತಂಡವನ್ನು ಮೊದಲು ಬ್ಯಾಟಿಂಗ್ ಮಾಡಲು ಆಹ್ವಾನಿಸಿದರು. ಅದರಂತೆ ಮೊದಲು ಬ್ಯಾಟಿಂಗ್ ಮಾಡಿದ ಕೋಲ್ಕತ್ತಾ ನೈಟ್ ರೈಡರ್ಸ್ 9 ವಿಕೆಟ್ ನಷ್ಟಕ್ಕೆ 146 ರನ್ ಗಳಿಸಿದ್ದು, ಎದುರಾಳಿ ಡೆಲ್ಲಿ ಕ್ಯಾಪಿಟಲ್ಸ್ ತಂಡಕ್ಕೆ 147 ರನ್‌ಗಳ ಗುರಿಯನ್ನು ನೀಡಿತು. ಈ ಗುರಿಯನ್ನು ಬೆನ್ನತ್ತುವಲ್ಲಿ ಯಶಸ್ವಿಯಾಗಿರುವ ಡೆಲ್ಲಿ ಕ್ಯಾಪಿಟಲ್ಸ್ 19 ಓವರ್‌ಗಳಲ್ಲಿ 6 ವಿಕೆಟ್ ನಷ್ಟಕ್ಕೆ 150 ರನ್ ಕಲೆಹಾಕಿ 4 ವಿಕೆಟ್‍ಗಳ ಜಯವನ್ನು ಸಾಧಿಸಿದೆ.
Advertisement
Advertisement
ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಕೋಲ್ಕತ್ತಾ ನೈಟ್ ರೈಡರ್ಸ್ (ಕೆಕೆಆರ್) 7.3 ಓವರ್‌ಗಳಲ್ಲಿ 35 ರನ್‌ಗಳಿಗೆ ತನ್ನ ಮೊದಲ 4 ವಿಕೆಟ್‌ಗಳನ್ನು ಕಳೆದುಕೊಂಡು ಆರಂಭಿಕ ಆಘಾತ ಅನುಭವಿಸಿತು. ಆರನ್ ಫಿಂಚ್ 3 ರನ್, ವೆಂಕಟೇಶ್ ಐಯ್ಯರ್ 6 ರನ್, ಸುನೀಲ್ ನರೈನ್ ಗೋಲ್ಡನ್ ಡಕ್ ಔಟ್ ಮತ್ತು ಬಾಬಾ ಇಂದ್ರಜಿತ್ 6 ರನ್ ಗಳಿಸಿ ಔಟ್ ಆದರು.
Advertisement
ಹೀಗೆ ಒಂದೆಡೆ ವಿಕೆಟ್‌ಗಳು ಉರುಳುತ್ತಿದ್ದರೆ, ಮತ್ತೊಂದೆಡೆ 3ನೇ ಕ್ರಮಾಂಕದಲ್ಲಿ ಕಣಕ್ಕಿಳಿದ ತಂಡದ ನಾಯಕ ಶ್ರೇಯಸ್ ಐಯ್ಯರ್ 37 ಎಸೆತಗಳಲ್ಲಿ 42 ರನ್ ಗಳಿಸಿ ತಂಡಕ್ಕೆ ಆಸರೆಯಾದರು. ಭರವಸೆಯ ಆಟಗಾರ ಆಂಡ್ರೆ ರಸೆಲ್ ಶೂನ್ಯಕ್ಕೆ ನಿರ್ಗಮಿಸಿದ್ದು, ತಂಡಕ್ಕೆ ಮತ್ತಷ್ಟು ಆಘಾತ ತಂದೊಡ್ಡಿತು. ಟಿಮ್ ಸೌಥಿ ಹಾಗೂ ಹರ್ಷಿತ್ ರಾಣಾ ಇಬ್ಬರೂ ಇದೇ ಸಮಯಕ್ಕೆ ಡಕ್ ಔಟ್ ಆದರು. 6 ಆರನೇ ಕ್ರಮಾಂಕದಲ್ಲಿ ಕಣಕ್ಕಿಳಿದ ನಿತೀಶ್ ರಾಣಾ 34 ಎಸೆತಗಳಲ್ಲಿ 57 ರನ್ ಆಕರ್ಷಕ ಅರ್ಧಶತಕ ಗಳಿಸಿದರು. ನಿತೀಶ್ ರಾಣಾರ ಜವಾಬ್ದಾರಿಯುತ ಆಟವು ತಂಡದ ಮೊತ್ತವನ್ನು 140 ಗಡಿದಾಟಿಸುವಲ್ಲಿ ಯಶಸ್ವಿಯಾಯಿತು.
ಆರಂಭದಲ್ಲೇ ಟಾಸ್ ಗೆದ್ದು ಫೀಲ್ಡಿಂಗ್‌ಗೆ ಇಳಿದ ಡೆಲ್ಲಿ ತಂಡವು ಭರ್ಜರಿ ಕೆಕೆಆರ್ ವಿರುದ್ಧ ಭರ್ಜರಿ ಗೆಲುವು ಸಾಧಿಸಿತು. ತಂಡದ ಬೌಲರ್‌ಗಳು 150 ರನ್ ಗಡಿಯೊಳಗೆ ಕೆಕೆಆರ್ ತಂಡವನ್ನು ಕಟ್ಟಿಹಾಕುವಲ್ಲಿ ಯಶಸ್ವಿಯಾದರು. ಬೌಲಿಂಗ್‌ನಲ್ಲಿ ಮುಸ್ತಾಫಿಜೋರ್ ರೆಹಮಾನ್ 3, ಚೇತನ್ ಸಕರ್ಯ, ಅಕ್ಷರ್ ಪಟೇಲ್ ತಲಾ ಒಂದೊಂದು ವಿಕೆಟ್‌ಗಳಿಸಿದರೆ, ಕುಲದೀಪ್ 3 ಓವರ್‌ನಲ್ಲಿ ನಾಲ್ಕು ವಿಕೆಟ್ ಕಬಳಿಸಿದರು.
ಇನ್ನೂ ಬ್ಯಾಟಿಂಗ್‌ನಲ್ಲು ಅಬ್ಬರಿಸಿದ ಡೆಲ್ಲಿ ತಂಡ ವಿಕೆಟ್‌ಗಳನ್ನು ಕಳೆದುಕೊಳ್ಳುತ್ತಿದ್ದರೂ ರನ್‌ಗಳ ಕೊರತೆಯಾಗದಂತೆ ನೋಡಿಕೊಂಡಿತು. ಪೃಥ್ವಿಶಾ ಔಟಾದ ಬಳಿಕವು ಕೆಕೆಆರ್ ಬೌಲರ್‌ಗಳನ್ನು ಬೆಂಡೆತ್ತಿದ ಡೇವಿಡ್ ವಾರ್ನರ್ 26 ಎಸೆತಗಳಲ್ಲಿ 42 ರನ್‌ಗಳಿಸಿದರು. ಮಿಚೇಲ್ ಮಾರ್ಶ್ 13 ರನ್, ಲಲಿತ್ ಯಾದವ್ 22 ರನ್‌ಗಳನ್ನು ಪೇರಿಸುವ ಮೂಲಕ ರನ್ ಸ್ಥಿರತೆ ಕಾಯ್ದುಕೊಂಡರು. ಈ ನಡುವೆ ನಾಯಕ ರಿಷಬ್ ಪಂತ್ 2ನೇ ರನ್ನಿಗೆ ಔಟಾಗಿದ್ದು, ತಂಡಕ್ಕೆ ಪೆಟ್ಟು ನೀಡಿದಂತಿತ್ತು. ಇನ್ನೇನು ಡೆಲ್ಲಿ ತಂಡವು ಸೋಲುವುದು ಖಚಿತ ಎಂದೇ ಭಾವಿಸಲಾಗಿತ್ತು.
ಆದರೆ, ಡೆಲ್ಲಿ ತಂಡಕ್ಕೆ ಗೆಲುವಿನ ಕನಸು ಚಿಗುರಿಸಿದ ರೊವ್ಮನ್ ಪೋವೆಲ್ ತಮ್ಮ ಭರ್ಜರಿ ಬ್ಯಾಟಿಂಗ್‌ನಿಂದ ಡೆಲ್ಲಿ ತಂಡವನ್ನು ಗೆಲುವಿನ ಮೆಟ್ಟಿಲೇರಿಸಿದರು. 7ನೇ ಕ್ರಮಾಂಕದಲ್ಲಿ ಕ್ರೀಸ್‌ಗಿಳಿದ ಪೋವೆಲ್ ಕೇವಲ 16 ಎಸೆತಗಳಲ್ಲಿ 33 ರನ್‌ಗಳ (1 ಫೋರ್, 3 ಸಿಕ್ಸರ್) ಸಿಡಿಸುವ ಮೂಲಕ ತಮ್ಮ ಡೆಲ್ಲಿ ತಂಡದ ಗೆಲುವಿಗೆ ಕಾರಣರಾದು. ಇದಕ್ಕೆ ಬ್ಯಾಟಿಂಗ್ ಸಾಥ್ ನೀಡಿದ ಶಾರ್ದೂಲ್ ಠಾಕೂರ್ ಸಹ 17 ಎಸೆತಗಳಲ್ಲಿ 24 ರನ್ ಪೇರಿಸಿ ಜವಾಬ್ದಾರಿ ಮೆರೆದರು. ಇದೆಲ್ಲರ ಫಲವಾಗಿ 147 ರನ್‌ಗಳ ಗುರಿ ಬೆನ್ನತ್ತಿದ ಡೆಲ್ಲಿ ತಂಡವು 19ನೇ ಓವರ್‌ಗೆ 150 ರನ್‌ಗಳಿಸುವ ಮೂಲಕ ತನ್ನ ಗೆಲುವು ದಾಖಲಿಸಿತು.