ಮುಂಬೈ: ಪಾಕಿಸ್ತಾನ ಸೂಪರ್ ಲೀಗ್‍ಗಿಂತ ಇಂಡಿಯನ್ ಪ್ರೀಮಿಯರ್ ಲೀಗ್ ಉತ್ತಮವಾಗಿದೆ ಎಂದು ಪಾಕಿಸ್ತಾನದ ಮಾಜಿ ಸ್ಪೀನ್ ಬೌಲರ್ ಡ್ಯಾನಿಶ್ ಕನೇರಿಯಾ ಹೇಳಿದ್ದಾರೆ.
ಪಾಕಿಸ್ತಾನದ ಮಾಜಿ ಸ್ಪಿನ್ನರ್ ಕನೇರಿಯಾ ಅವರು ದೊಡ್ಡ ಐಪಿಎಲ್ ಅಭಿಮಾನಿಯಾಗಿದ್ದಾರೆ. ಈ ಕುರಿತು ಮಾತನಾಡಿದ ಅವರು, ಐಪಿಎಲ್ ಭಾರತೀಯ ಕ್ರಿಕೆಟ್‍ಗೆ ಸಾಕಷ್ಟು ಕೊಡುಗೆ ನೀಡಿದೆ. ಆದರೆ ಪಿಎಸ್‍ಎಲ್ ಪಾಕಿಸ್ತಾನ ಕ್ರಿಕೆಟ್ ತಂಡಕ್ಕೆ ಯಾವುದೇ ರೀತಿಯ ಕೊಡುಗೆ ನೀಡಿಲ್ಲ ಎಂದಿದ್ದಾರೆ. ಇದನ್ನೂ ಓದಿ: 89 ಜನರಿಗೆ ಕೊರೊನಾ, 85 ಜನ ಡಿಸ್ಚಾರ್ಜ್ – 4 ಸಾವು
ಅತ್ಯಂತ ವೃತ್ತಿಪರ ಕಾರ್ಯಕ್ರಮವಾಗಿರುವುದರಿಂದ, ಐಪಿಎಲ್ ಭಾರತೀಯ ಕ್ರಿಕೆಟ್‍ಗೆ ಹಲವಾರು ಪ್ರತಿಭೆಗಳನ್ನು ಒದಗಿಸುತ್ತಿದೆ. ಕ್ರಿಕೆಟ್ ಅಭಿಮಾನಿಗಳಿಗೆ ಐಪಿಎಲ್ ಪ್ರತೀ ವರ್ಷವು ಒಂದು ಹಬ್ಬದಂತೆ ಭಾಸವಾಗುತ್ತದೆ. ಆದರೆ ಪಿಎಸ್‍ಎಲ್ ಪಾಕಿಸ್ತಾನ ಕ್ರಿಕೆಟ್‍ಗೆ ಅಷ್ಟೇನೂ ಮಾಡುತ್ತಿಲ್ಲ. ಕೆಲವು ಆಟಗಾರರು ಪಿಎಸ್‍ಎಲ್‍ನಲ್ಲಿ ಉತ್ತಮ ಪ್ರದರ್ಶನ ನೀಡಿದರೆ. ಅಂತಹವರಿಗೆ ಪಾಕಿಸ್ತಾನ ಕ್ರಿಕೆಟ್ ಮಂಡಳಿಯು ರಾಷ್ಟ್ರೀಯ ತಂಡಕ್ಕೆ ಪ್ರವೇಶಿಸುವ ಅವಕಾಶವನ್ನು ಹಾಳುಮಾಡುತ್ತದೆ ಎಂದು ಆರೋಪಿಸಿದ್ದಾರೆ. ಇದನ್ನೂ ಓದಿ: ವುಹಾನ್ ನಂತರ ಚೀನಾದಲ್ಲಿ ಅತಿದೊಡ್ಡ ಲಾಕ್‌ಡೌನ್: 2.6 ಕೋಟಿ ಜನ ಮನೆಯಲ್ಲೇ ಲಾಕ್
ಐಪಿಎಲ್ ಎಲ್ಲಾ ಕ್ರಿಕೆಟಿಗರು ಆಡಲು ಬಯಸುವ ಪಂದ್ಯಾವಳಿಯಾಗಿದೆ. ನೀವು ನೋಡಿ, ದಕ್ಷಿಣ ಆಫ್ರಿಕಾದ ಅನೇಕ ಆಟಗಾರರು ಐಪಿಎಲ್‍ನಲ್ಲಿ ಆಡಲು ತಮ್ಮ ರಾಷ್ಟ್ರೀಯ ತಂಡದಿಂದ ರಜೆ ತೆಗೆದುಕೊಂಡಿದ್ದಾರೆ. ಹಾಗಾಗಿ ಇದು ಪ್ರತಿ ವರ್ಷವೂ ದೊಡ್ಡ ಹಬ್ಬವಾಗಿ ಕಾಣಿಸುತ್ತಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.