ಮುಂಬೈ: ಶಿವಂ ದುಬೆ ಮತ್ತು ರಾಬಿನ್ ಉತ್ತಪ್ಪ ಅವರ ಸ್ಫೋಟಕ ಅರ್ಧಶತಕದಿಂದ ಆರ್‌ಸಿಬಿ ವಿರುದ್ಧ ಚೆನ್ನೈ ಸೂಪರ್ ಕಿಂಗ್ಸ್ 23 ರನ್‌ಗಳ ಜಯ ಸಾಧಿಸಿದೆ.
ಗೆಲ್ಲಲು 217 ರನ್‌ಗಳ ಕಠಿಣ ಗುರಿ ಪಡೆದ ಬೆಂಗಳೂರು 20 ಓವರ್‌ಗಳಲ್ಲಿ 9 ವಿಕೆಟ್ ನಷ್ಟಕ್ಕೆ 193 ರನ್ ಗಳಿಸಿತು. ಈ ಮೂಲಕ ಸತತ 4 ಪಂದ್ಯಗಳನ್ನು ಸೋತಿದ್ದ ಚೆನ್ನೈ ಮೊದಲ ಬಾರಿಗೆ ಗೆಲುವಿನ ನಗೆ ಬೀರಿದೆ.
Advertisement
Advertisement
ಆರಂಭದಲ್ಲೇ ವಿಕೆಟ್ ಕಳೆದುಕೊಳ್ಳಲು ಆರಂಭಿಸಿದ ಆರ್‌ಸಿಬಿ 50 ರನ್‌ಗಳಿಸುವಷ್ಟರಲ್ಲೇ 4 ವಿಕೆಟ್ ಕಳೆದುಕೊಂಡಿತ್ತು. ನಂತರ ಮ್ಯಾಕ್ಸ್‌ವೆಲ್ 26 ರನ್(11 ಎಸೆತ, 2 ಬೌಂಡರಿ, 2 ಸಿಕ್ಸರ್) ಶಬಾಜ್ ಅಹ್ಮದ್ 41 ರನ್(27 ಎಸೆತ, 4 ಬೌಂಡರಿ) ಪ್ರಭುದೇಸಾಯಿ 34 ರನ್(18 ಎಸೆತ, 5 ಬೌಂಡರಿ, 1 ಸಿಕ್ಸರ್) ಸಿಡಿಸಿ ಔಟಾದರು. ಕೊನೆಯಲ್ಲಿ ದಿನೇಶ್ ಕಾರ್ತಿಕ್ ಸ್ಫೋಟಕ ಬ್ಯಾಟಿಂಗ್ ಪ್ರದರ್ಶನ ನೀಡಿದರು. ಆದರೆ 34 ರನ್(14 ಎಸೆತ, 2 ಬೌಂಡರಿ, 3 ಸಿಕ್ಸರ್) ಹೊಡೆದ ವೇಳೆ ಸಿಕ್ಸ್ ಸಿಡಿಸಲು ಹೋಗಿ ಬೌಂಡರಿ ಗೆರೆಯ ಬಳಿ ಜಡೇಜಾ ಹಿಡಿದ ಅತ್ಯುತ್ತಮ ಕ್ಯಾಚ್‌ಗೆ ಔಟಾದರು. ಇದನ್ನೂ ಓದಿ: ಐಪಿಎಲ್ 2022ರಲ್ಲಿ ಫಾಫ್ ಡು ಪ್ಲೆಸಿಸ್ ಚೆನ್ನೈ ಸೂಪರ್ ಕಿಂಗ್ಸ್ ನಾಯಕನಾಗಬೇಕಿತ್ತು: ರವಿಶಾಸ್ತ್ರಿ
Advertisement
Advertisement
ಸ್ಫೋಟಕ ಅರ್ಧಶತಕ: 6.4 ಓವರ್ ಆಗಿದ್ದಾಗ ಚೆನ್ನೈ 36 ರನ್‌ಗಳಿಗೆ 2 ವಿಕೆಟ್ ಕಳೆದುಕೊಂಡಿತ್ತು. ಈ ವೇಳೆ ಜೊತೆಯಾದ ಉತ್ತಪ್ಪ ಮತ್ತು ಶಿವಂ ದುಬೆ ನಿಧನವಾಗಿ ರನ್ ಏರಿಸತೊಡಗಿದರು.
10 ಓವರ್‌ಗೆ 60 ರನ್‌ಗಳಿಸಿದ್ದ ಚೆನ್ನೈ ನಂತರದ 10 ಓವರ್‌ನಲ್ಲಿ ಬರೋಬ್ಬರಿ 156 ರನ್ ಗಳಿಸಿತ್ತು. ಉತ್ತಪ್ಪ ಮತ್ತು ದುಬೆ ಮೂರನೇ ವಿಕೆಟ್‌ಗೆ ಕೇವಲ 74 ಎಸೆತಗಳಲ್ಲಿ 165 ರನ್ ಚಚ್ಚಿದರು.
ಮ್ಯಾಕ್ಸ್‌ವೆಲ್ ಎಸೆದ ಇನ್ನಿಂಗ್ಸ್‌ನ 13ನೇ ಓವರ್‌ನಲ್ಲಿ ಉತ್ತಪ್ಪ 3 ಸಿಕ್ಸ್ ಸಿಡಿಸಿದರು. ಸಿರಾಜ್ ಎಸೆದ 18ನೇ ಓವರ್‌ನಲ್ಲಿ 24 ರನ್ ಬಂತು.
ಅಂತಿಮವಾಗಿ ಉತ್ತಪ್ಪ 88 ರನ್(50 ಎಸೆತ, 4 ಬೌಂಡರಿ, 9 ಸಿಕ್ಸರ್) ಶಿವಂ ದುಬೆ 95 ರನ್(46 ಎಸೆತ, 5 ಬೌಂಡರಿ, 8 ಸಿಕ್ಸರ್) ಸಿಡಿಸಿ ಔಟಾದರು. 4 ಬೈ, 2 ಲೆಗ್ ಬೈ, 1 ನೋಬಾಲ್, 6 ವೈಡ್ ಹಾಕಿದ ಆರ್‌ಸಿಬಿ ಇತರ ರೂಪದಲ್ಲಿ 13 ರನ್ ನೀಡಿತ್ತು. ಆಕಾಶ್ ದೀಪ್ 4 ಓವರ್ ಎಸೆದು 58 ರನ್ ನೀಡಿ ದುಬಾರಿಯಾದರು.
ರನ್ ಏರಿದ್ದು ಹೇಗೆ?
50 ರನ್ – 52 ಎಸೆತ
100 ರನ್ -78 ಎಸೆತ
150 ರನ್ – 98 ಎಸೆತ
200 ರನ್ -112 ಎಸೆತ
216 ರನ್ – 120 ಎಸೆತ