ಬೆಂಗಳೂರು: ವಿಶ್ವದ ಶ್ರೇಷ್ಠ ಕ್ರಿಕೆಟ್ ಆಟಗಾರರಾಗಿ ಮಿಂಚಿದ ಸುರೇಶ್ ರೈನಾ, ಡೇವಿಡ್ ಮಿಲ್ಲರ್, ಸ್ಟೀವ್ ಸ್ಮಿತ್ ಮತ್ತು ಶಕೀಬ್ ಅಲ್ ಹಸನ್ 2022ನೇ ಐಪಿಎಲ್ ಮೆಗಾ ಹರಾಜಿನಲ್ಲಿ ಅನ್‍ಸೋಲ್ಡ್ ಅಗಿದ್ದಾರೆ.
ಟಿ20 ಕ್ರಿಕೆಟ್‍ನಲ್ಲಿ ಈ ಹಿಂದೆ ದೊಡ್ಡ ಮಟ್ಟದಲ್ಲಿ ಸದ್ದು ಮಾಡಿದ್ದ ಈ ಆಟಗಾರರನ್ನು ಖರೀದಿಸಲು ಯಾವ ತಂಡ ಕೂಡ ಮುಂದಾಗಿಲ್ಲ. ಡೇವಿಡ್ ಮಿಲ್ಲರ್ ಮತ್ತು ಸ್ಟೀವ್ ಸ್ಮಿತ್ ಬ್ಯಾಟಿಂಗ್ ಮತ್ತು ಫೀಲ್ಡಿಂಗ್‍ನಲ್ಲಿ ಬಲಿಷ್ಠ ಆಟಗಾರರು. ಇನ್ನೂ ಆಲ್‍ರೌಂಡರ್ ಆಗಿ ಮಿಂಚಿದ್ದ ಶಕೀಬ್ ಅಲ್ ಹಸನ್‍ರನ್ನು ಕೂಡ ಖರೀದಿಸಲು ಮುಂದಾಗಿಲ್ಲ. ಇದನ್ನೂ ಓದಿ: ಈ ಹಿಂದಿನ ಆವೃತ್ತಿಗಳ ಐಪಿಎಲ್‍ನ ಕೋಟಿ ವೀರರು
ಈ ಎಲ್ಲರೊಂದಿಗೆ ಅಚ್ಚರಿ ಎಂದರೆ ಐಪಿಎಲ್‍ನ ಸ್ಟಾರ್ ಆಟಗಾರ ಸುರೇಶ್ ರೈನಾರನ್ನು ಯಾರು ಕೂಡ ಖರೀದಿಸಲು ಮುಂದಾಗದಿರುವುದು ವಿಪರ್ಯಾಸ. ಸಿಎಸ್‍ಕೆ ತಂಡ ಐಪಿಎಲ್ ಇತಿಹಾಸದಲ್ಲಿ ನಾಲ್ಕು ಬಾರಿ ಚಾಂಪಿಯನ್ ಆಗಿದೆ. ಈ ನಾಲ್ಕು ಬಾರಿ ಚಾಂಪಿಯನ್ ಆದಾಗಲೂ ರೈನಾ ಸಿಎಸ್‍ಕೆ ತಂಡದಲ್ಲಿ ಮಧ್ಯಮ ಕ್ರಮಾಂಕದ ಬ್ಯಾಟ್ಸ್‌ಮ್ಯಾನ್ ಆಗಿ ತಂಡಕ್ಕೆ ಬಲ ತುಂಬಿದ್ದರು. ಅದಲ್ಲದೆ ಚೆನ್ನೈ ಪರ 171 ಪಂದ್ಯಗಳಿಂದ 1 ಶತಕ ಮತ್ತು 33 ಅರ್ಧಶತಕ ಸಹಿತ 4,687 ರನ್ ಗಳಿಸಿದ್ದಾರೆ. ಇದು ಸಿಎಸ್‍ಕೆ ತಂಡದಲ್ಲಿದ್ದ ಆಟಗಾರನ ವ್ಯಯಕ್ತಿಕ ಹೆಚ್ಚು ರನ್, ಅದೇ ರೀತಿ ಅತಿ ಹೆಚ್ಚು ಅರ್ಧಶತಕ ಸಿಡಿಸಿದ ಆಟಗಾರ ಕೂಡ ರೈನಾ. ಇಷ್ಟು ಮಾತ್ರವಲ್ಲದೆ ರೈನಾ ಬ್ಯಾಟಿಂಗ್ ಜೊತೆಗೆ ಅದ್ಭುತ ಫೀಲ್ಡಿಂಗ್ ಕೂಡ ಮಾಡಿದ್ದಾರೆ. ಸಿಎಸ್‍ಕೆ ಪರ ಪರ ಅತಿ ಹೆಚ್ಚು ಕ್ಯಾಚ್ ಪಡೆದ ದಾಖಲೆ ಕೂಡ ರೈನಾ ಹೆಸರಲ್ಲೇ ಇದೆ. ಅಲ್ಲದೇ ಮಿಸ್ಟರ್ ಐಪಿಎಲ್ ಎಂದೇ ಖ್ಯಾತರಾಗಿದ್ದರು ಆದರೆ ಇದೀಗ ರೈನಾ ಅನ್‍ಸೋಲ್ಡ್ ಆಟಗಾರನಾಗಿದ್ದಾರೆ. ಇದನ್ನೂ ಓದಿ: ತವರಿನಲ್ಲಿ ಕೊಹ್ಲಿ ಹೊಸ ಮೈಲಿಗಲ್ಲು – ಧೋನಿ, ಸಚಿನ್ ಜೊತೆ Elite ಪಟ್ಟಿಗೆ ಸೇರ್ಪಡೆ