ಮುಂಬೈ: ಐಪಿಎಲ್‍ಗೆ ಸೇರ್ಪಡೆಗೊಂಡಿರುವ ಅಹಮದಾಬಾದ್ ಫ್ರಾಂಚೈಸ್ ಅಧಿಕೃತವಾಗಿ ತಂಡದ ಹೆಸರನ್ನು ಗುಜರಾತ್ ಟೈಟಾನ್ಸ್ ಎಂದು ಘೋಷಿಸಿದೆ.
Advertisement
CVC Capital Partners ತಂಡದ ಮಾಲಕರಾದ ಸಿದ್ದಾರ್ಥ್ ಪಾಟೀಲ್ ಅಹಮದಾಬಾದ್ ಫ್ರಾಂಚೈಸ್‍ನ ಹೆಸರು ಗುಜರಾತ್ ಟೈಟಾನ್ಸ್ ಎಂಬುದಾಗಿ ನಾಮಕರಣ ಮಾಡಿರುವುದನ್ನು ದೃಢಪಡಿಸಿದ್ದಾರೆ. ಇದನ್ನೂ ಓದಿ: ದಾದಾ ಮಾತನ್ನು ಡೋಂಟ್ ಕೇರ್ ಎಂದ್ರಾ ಹಾರ್ದಿಕ್ ಪಾಂಡ್ಯ?
Advertisement
ಈಗಾಗಲೇ ಗುಜರಾತ್ ಟೈಟಾನ್ಸ್ ತಂಡದ ನಾಯಕರನ್ನಾಗಿ ಟೀಂ ಇಂಡಿಯಾದ ಆಲ್‍ರೌಂಡರ್ ಹಾರ್ದಿಕ್ ಪಾಂಡ್ಯರನ್ನು ನೇಮಕಮಾಡಲಾಗಿದೆ. ಜೊತೆಗೆ ರಶೀದ್ ಖಾನ್ ಮತ್ತು ಶುಭಮನ್ ಗಿಲ್‍ರನ್ನು ಹರಾಜಿಗೂ ಮೊದಲು ತಂಡಕ್ಕೆ ಸೇರಿಸಿಕೊಳ್ಳಲಾಗಿದೆ. ಪಾಂಡ್ಯ ಮತ್ತು ರಶೀದ್ ಖಾನ್‍ಗೆ 15 ಕೋಟಿ ರೂ. ನೀಡಿದರೆ, ಗಿಲ್‍ಗೆ 8 ಕೋಟಿ ರೂ. ನೀಡಿ ತಂಡಕ್ಕೆ ಆಯ್ಕೆ ಮಾಡಿಕೊಳ್ಳಲಾಗಿದೆ.
Advertisement
???? Here's more about our name, before you 'Remember The Name'! ???? #GujaratTitans pic.twitter.com/UA1KcjT1Hr
— Gujarat Titans (@gujarat_titans) February 9, 2022
Advertisement
2011ರಲ್ಲಿ ಟೀಂ ಇಂಡಿಯಾದ ಕೋಚ್ ಆಗಿದ್ದ ಗ್ಯಾರಿ ಕಸ್ಟರ್ನ್‌ರನ್ನು ತಂಡದ ಮೆಂಟರ್ ಹಾಗೂ ಬ್ಯಾಟಿಂಗ್ ಕೋಚ್ ಆಗಿ ಆಯ್ಕೆ ಮಾಡಲಾಗಿದೆ. ಟೀಂ ಇಂಡಿಯಾದ ಮಾಜಿ ವೇಗಿ ಆಶಿಶ್ ನೆಹ್ರಾ ಅವರನ್ನು ಕೋಚ್ ಆಗಿ ನೇಮಕಮಾಡಲಾಗಿದೆ. ಇದನ್ನೂ ಓದಿ: ಕೆಲವೇ ಗಂಟೆಗಳಲ್ಲಿ ಭಾರತ vs ಪಾಕಿಸ್ತಾನ ಪಂದ್ಯದ ಟಿಕೆಟ್ ಸೋಲ್ಡ್ ಔಟ್
ಚೆನ್ನೈ ಸೂಪರ್ ಕಿಂಗ್ಸ್ ಮತ್ತು ರಾಜಸ್ಥಾನ್ ರಾಯಲ್ಸ್ ತಂಡಗಳು ಫಿಕ್ಸಿಂಗ್ ಆರೋಪದಲ್ಲಿ ಬ್ಯಾನ್ ಆದ ಸಂದರ್ಭ ಅಹಮದಾಬಾದ್ ಫ್ರಾಂಚೈಸ್ 2016 ಮತ್ತು 17 ರಲ್ಲಿ ಐಪಿಎಲ್‍ನಲ್ಲಿ ಆಡಿತ್ತು. ಈ ವೇಳೆ ತಂಡದ ಹೆಸರು ಗುಜರಾತ್ ಲಯನ್ಸ್ ಎಂದಿತ್ತು. ತಂಡವನ್ನು ಸುರೇಶ್ ರೈನಾ ಮುನ್ನಡೆಸಿದ್ದರು. ಇದೀಗ ಗುಜರಾತ್ ತಂಡ ಮತ್ತೊಮ್ಮೆ ಐಪಿಎಲ್‍ನಲ್ಲಿ ಮಿಂಚಲು ಸಿದ್ಧವಾಗುತ್ತಿದೆ.