ಶಾರ್ಜಾ: ರಾಜಸ್ಥಾನ ವಿರುದ್ಧ 86 ರನ್ ಗಳಿಂದ ಗೆದ್ದ ಕೋಲ್ಕತ್ತಾ ಬಹುತೇಕ ಪ್ಲೇ ಆಫ್‌ಗೆ ಎಂಟ್ರಿ ಕೊಟ್ಟಿದ್ದು, ಪಂಜಾಬ್ ತಂಡ ಟೂರ್ನಿಯಿಂದ ಔಟ್ ಆಗಿದೆ.
ಗೆಲ್ಲಲು 172 ರನ್‌ಗಳ ಕಠಿಣ ಸವಾಲನ್ನು ಪಡೆದ ರಾಜಸ್ಥಾನ 16.1 ಓವರ್ ಗಳಲ್ಲಿ 85 ರನ್‌ಗಳಿಸಿ ಆಲೌಟ್ ಆಯ್ತು. ಕೊನೆಯ ಪಂದ್ಯವನ್ನು ಸೋಲುವ ಮೂಲಕ ರಾಜಸ್ಥಾನ ತಂಡವೂ ಐಪಿಎಲ್‌ನಿಂದ ಔಟ್ ಆಗಿದೆ.
ಕೋಲ್ಕತ್ತಾ ತಂಡ ಬಹುತೇಕ ಪ್ಲೇ ಆಫ್ ಪ್ರವೇಶಿಸಿದೆ. ನಾಳೆ ಸನ್ ರೈಸರ್ಸ್ ಹೈದರಾಬಾದ್ ಮತ್ತು ಮುಂಬೈ ಮಧ್ಯೆ ಪಂದ್ಯ ನಡೆಯಲಿದೆ. ಈ ಪಂದ್ಯದಲ್ಲಿ ಮುಂಬೈ ಮೊದಲು ಬ್ಯಾಟ್ ಮಾಡಿ 170ಕ್ಕೂ ಹೆಚ್ಚು ರನ್‌ಗಳಿಂದ ಜಯಗಳಿಸಿದರೆ ಮಾತ್ರ ಪ್ಲೇ ಆಫ್ ಪ್ರವೇಶಿಸಬಹುದು. ಈ ರೀತಿಯ ಫಲಿತಾಂಶ ದಾಖಲಾಗಬೇಕಾದರೆ ಪವಾಡವೇ ನಡೆಯಬೇಕು.
ಮೊದಲ ಓವರಿನಲ್ಲಿ ವಿಕೆಟ್ ಕಳೆದುಕೊಳ್ಳಲು ಆರಂಭಿಸಿದ ರಾಜಸ್ತಾನ ಪರ ರಾಹುಲ್ ತೆವಾಟಿಯಾ 44 ರನ್(36 ಎಸೆತ, 5 ಬೌಂಡರಿ, 2 ಸಿಕ್ಸರ್) ಹೊಡೆದು ಸ್ವಲ್ಪ ಪ್ರತಿರೋಧ ತೋರಿದರು. ಕೋಲ್ಕತ್ತಾ ಪರ ಶಿವಂ ಮಾವಿ 4 ವಿಕೆಟ್, ಲೂಕಿ ಫರ್ಗ್ಯೂಸನ್ 3 ವಿಕೆಟ್, ಶಕಿಬ್ ಉಲ್ ಹಸನ್ ಮತ್ತು ವರುಣ್ ಚಕ್ರವರ್ತಿ 1 ವಿಕೆಟ್ ಪಡೆದರು. ಇದನ್ನೂ ಓದಿ: ಗೆಳತಿಗೆ ಸ್ಟೇಡಿಯಂನಲ್ಲೇ ಪ್ರಪೋಸ್ ಮಾಡಿದ ದೀಪಕ್ ಚಹರ್
ಮೊದಲು ಬ್ಯಾಟ್ ಮಾಡಿದ ಕೋಲ್ಕತ್ತಾ ಪರ ಶುಭಮನ್ ಗಿಲ್ 56 ರನ್(44 ಎಸೆತ, 4 ಬೌಂಡರಿ, 2 ಸಿಕ್ಸರ್), ವೆಂಕಟೇಶ್ ಅಯ್ಯರ್ 38 ರನ್( 35 ಎಸೆತ, 3 ಬೌಂಡರಿ, 2 ಸಿಕ್ಸರ್), ರಾಹುಲ್ ತ್ರಿಪಾಠಿ 21 ರನ್(14 ಎಸೆತ, 3 ಬೌಂಡರಿ) ಹೊಡೆದು ಔಟಾದರು.