ದುಬೈ: 14ನೇ ಅವೃತ್ತಿಯ ಐಪಿಎಲ್ ಪಂದ್ಯಗಳು ದಿನೇ ದಿನೇ ರೋಚಕತೆ ಪಡೆದುಕೊಳ್ಳತ್ತಿವೆ. ಟೂರ್ನಿಯ ಕೊನೆಯ ಹಂತದ ಕೆಲವೇ ಕೆಲವು ಲೀಗ್ ಪಂದ್ಯಗಳು ಬಾಕಿ ಉಳಿದಿದ್ದು, ಇನ್ನೂ ಪ್ಲೇ ಆಫ್‍ಗೆ ಯಾವ ತಂಡಗಳು ಎಂಟ್ರಿ ಕೊಡಲಿವೆ ಎಂಬುದು ಖಚಿತವಾಗಿಲ್ಲ.
Advertisement
ದುಬೈನಲ್ಲಿ ನಡೆಯುತ್ತಿರುವ ದ್ವಿತೀಯಾರ್ಧದ ಐಪಿಎಲ್ ಪಂದ್ಯಗಳು ಅಭಿಮಾನಿಗಳಿಗೆ ರಸದೌತಣ ನೀಡುತ್ತಿವೆ. ಇದುವರೆಗೂ ಒಟ್ಟು ಲೀಗ್‍ನಲ್ಲಿ 43 ಪಂದ್ಯಗಳು ನಡೆದಿದೆ. ಇನ್ನೂ 13 ಪಂದ್ಯಗಳು ಮಾತ್ರ ಬಾಕಿ ಉಳಿದಿವೆ. ಆದರೂ ಯಾವ ಯಾವ ತಂಡಗಳು ಪ್ಲೇ ಆಫ್‍ಗೆ ಲಗ್ಗೆಯಿಡಲಿವೆ ಎಂಬುದು ಕೂತಹಲಕಾರಿಯಾಗಿದೆ. 10 ಪಂದ್ಯಗಳನ್ನಾಡಿರುವ ಚೆನ್ನೈ ಸೂಪರ್ ಕಿಂಗ್ಸ್, 8 ಗೆಲುವು ಹಾಗೂ 2 ಸೋಲುಗಳಿಂದ ಅಂಕಪಟ್ಟಿಯಲ್ಲಿ ಅಗ್ರ ಸ್ಥಾನ ಕಾಯ್ದುಕೊಂಡಿದೆ. 11 ಪಂದ್ಯಗಳನ್ನಾಡಿರುವ ಡೆಲ್ಲಿ, 8 ಗೆಲುವು ಹಾಗೂ 3 ಸೋಲುಗಳಿಂದ 16 ಅಂಕಗಳೊಂದಿಗೆ ಅಂಕಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿದೆ. ಇದನ್ನೂ ಓದಿ: ಪತ್ನಿಯಾಗುವವಳು ನನ್ನಂತೆಯೇ ಕ್ರೀಡಾಪಟುವಾಗಿರಬೇಕು: ನೀರಜ್ ಚೋಪ್ರಾ
Advertisement
Advertisement
ಬೆಂಗಳೂರು ರಾಯಲ್ ಚಾಲೆಂಜರ್ಸ್ ಕೂಡ ಚೆನ್ನೈ ಹಾಗೂ ಡೆಲ್ಲಿ ನಂತರದ ಸ್ಥಾನದಲ್ಲಿದೆ. 11 ಪಂದ್ಯಗಳನ್ನಾಡಿರುವ ಆರ್‍ಸಿಬಿ 7 ಗೆಲುವು ಹಾಗೂ 4 ಸೋಲುಗಳಿಂದ 14 ಅಂಕಗಳೊಂದಿಗೆ 3ನೇ ಸ್ಥಾನದಲ್ಲಿದೆ. 11 ಪಂದ್ಯಗಳಲ್ಲಿ 5 ಗೆಲುವು, 6 ಸೋಲು ಕಂಡಿರುವ ಕೆಕೆಆರ್ 10 ಅಂಕಗಳೊಂದಿಗೆ 4ನೇ ಸ್ಥಾನದಲ್ಲಿದೆ. ಹಾಲಿ ಚಾಂಪಿಯನ್ಸ್ ಮುಂಬೈ ಇಂಡಿಯನ್ಸ್ 5 ಗೆಲುವು, 6 ಸೋಲುಗಳಿಂದ 5ನೇ ಸ್ಥಾನದಲ್ಲಿದೆ. ಇದನ್ನೂ ಓದಿ: ಮ್ಯಾಕ್ಸ್‌ವೆಲ್ ಅಬ್ಬರ -ರಾಜಸ್ಥಾನ ವಿರುದ್ಧ ಬೆಂಗಳೂರಿಗೆ 7 ವಿಕೆಟ್ ಜಯ
Advertisement
ಎಲ್ಲಾ ತಂಡಗಳಿಗೂ 10 ಪಂದ್ಯಗಳೂ ಮುಗಿದರೂ ಇನ್ನೂ ಪ್ಲೇ ಆಫ್ ಲಗ್ಗೆಯಿಡಲು ಮಾತ್ರ ಸಾಧ್ಯವಾಗಿಲ್ಲ. ಉಳಿದ 13 ಲೀಗ್ ಪಂದ್ಯಗಳ ನಂತರವಷ್ಟೇ ಮುಂದಿನ ಹಂತಕ್ಕೆ ಹೋಗುವ ತಂಡಗಳು ಯಾವುವು ಎಂಬುದು ಖಚಿತವಾಗುತ್ತದೆ.
ಚೆನ್ನೈ, ಡೆಲ್ಲಿ ಪ್ಲೇ ಆಫ್ ಖಚಿತ
ಈಗಾಗಲೇ 16 ಅಂಕಗಳೊಂದಿಗೆ ಕ್ರಮವಾಗಿ ಒಂದು ಹಾಗೂ 2ನೇ ಸ್ಥಾನದಲ್ಲಿರುವ ಚೆನ್ನೈ ಸೂಪರ್ ಕಿಂಗ್ಸ್ ಹಾಗೂ ಡೆಲ್ಲಿ ಕ್ಯಾಪಿಟಲ್ಸ್ ಪ್ಲೇ ಆಫ್‍ನತ್ತ ಮುನ್ನಡೆದಿವೆ. ಉಳಿದಿರುವ 4 ಪಂದ್ಯಗಳಲ್ಲಿ ಒಂದು ಪಂದ್ಯ ಗೆದ್ದ, ಡೆಲ್ಲಿ 3ರಲ್ಲಿ ಒಂದು ಪಂದ್ಯ ಗೆದ್ದರೂ ಪ್ಲೇ ಆಫ್ ಪ್ರವೇಶಿಸಲಿದೆ. ಎರಡು ತಂಡಗಳ ನೆಟ್ ರನ್‍ರೇಟ್ ಕೂಡ ಉತ್ತಮವಾಗಿದೆ.
ಒಂದು ಪಂದ್ಯ ಗೆದ್ದೂ ಆರ್‍ಸಿಬಿ ಪ್ಲೇ ಆಫ್‍ಗೆ
ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ 14 ಅಂಕಗಳೊಂದಿಗೆ ಅಂಕಪಟ್ಟಿಯಲ್ಲಿ ಮೂರನೇ ಸ್ಥಾನದಲ್ಲಿದೆ. ಉಳಿದಿರುವ 3 ಪಂದ್ಯಗಳಲಿ ನೆಟ್ ರನ್‍ರೇಟ್ ಜೊತೆಗೆ ಒಂದು ಪಂದ್ಯ ಗೆದ್ದರೂ ಆರ್‍ಸಿಬಿ ಪ್ಲೇ ಆಫ್ ಪ್ರವೇಶಿಸುವ ಸಾಧ್ಯತೆ ದಟ್ಟವಾಗಿದೆ. ನಿನ್ನೆ ರಾಜಸ್ತಾನ ವಿರುದ್ಧ ನಡೆದ ಪಂದ್ಯದಲ್ಲಿ ಅಮೋಘ ಜಯಗಳಿಸಿರುವ ಬೆಂಗಳೂರು, ಚೆನ್ನೈ ಹಾಗೂ ಡೆಲ್ಲಿ ಜೊತೆ ಪ್ಲೇ ಆಫ್‍ಗೆ ಎಂಟ್ರಿ ಕೊಡಲಿದೆ.
ಸನ್ ರೈಸರ್ಸ್, ರಾಜಸ್ತಾನ್, ಪಂಜಾಬ್ ದೂರ
ಟೂರ್ನಿಯಲ್ಲಿ ಸತತ ಸೋಲುಗಳಿಂದ ಕಂಗೆಟ್ಟಿರುವ ಹೈದರಾಬಾದ್ ಈಗಾಗಲೇ ಪ್ಲೇ ಆಫ್ ಕನಸನ್ನು ಕೈ ಚೆಲ್ಲಿದೆ. ರಾಜಸ್ಥಾನ, ಪಂಜಾಬ್ 11 ಪಂದ್ಯಗಳಿಂದ 8 ಅಂಕ ಪಡೆದಿದ್ದರೂ ಪ್ಲೇ ಆಫ್ ಪ್ರವೇಶ ಕಷ್ಟ. ಎರಡು ತಂಡಗಳು, ಉಳಿದಿರುವ ಮೂರು ಪಂದ್ಯಗಳನ್ನು ಗೆದ್ದರೂ ನೆಟ್ ರನ್‍ರೇಟ್ ಕೊರತೆಯುಂಟಾಗಿ ಟೂರ್ನಿಯಿಂದ ಹೊರಬರುವ ಸಾಧ್ಯತೆ ಹೆಚ್ಚಿದೆ.
ಕೆಕೆಆರ್, ಮುಂಬೈ, ಪಂಜಾಬ್ ನಡುವೆ ಪ್ಲೇ ಆಫ್‍ಗಾಗಿ ಹಣಾಹಣಿ
ಪ್ಲೇ ಆಫ್‍ಗಾಗಿ ಮೂರು ತಂಡಗಳಿಗೂ ಉಳಿದಿರುವ 3 ಪಂದ್ಯಗಳನ್ನು ಗೆಲ್ಲಲೇಬೇಕಾದ ಅನಿವಾರ್ಯತೆ ಎದುರಾಗಿದೆ. 5 ಜಯದೊಂದಿಗೆ 10 ಅಂಕಗಳಿಸಿರುವ ಮುಂಬೈ ಕೆಕೆಆರ್ ನಾಲ್ಕನೇ ಸ್ಥಾನಕ್ಕಾಗಿ ತೀವ್ರ ಕಸರತ್ತು ನಡೆಸಿವೆ. ಮುಂದಿನ ಪಂದ್ಯಗಳನ್ನು ಗೆದ್ದು ನೆಟ್ ರನ್‍ರೇಟ್‍ನಲ್ಲಿ ಚೇತರಿಕೆ ಕಂಡು ಸೆಮಿಸ್ ಹಂತಕ್ಕೆ ತಲುಪಲು ಕೆಕೆಆರ್ ಹಾಗೂ ಮುಂಬೈ ಹರಸಾಹಸ ಪಡಬೇಕಿದೆ.