ಬೆಂಗಳೂರು: 2019ರ ಐಪಿಎಲ್ ಆವೃತ್ತಿ ಆರಂಭದ ವೇಳಾಪಟ್ಟಿ ಘೋಷಣೆ ಬೆನ್ನಲ್ಲೇ ಪ್ರಥಮ ಪಂದ್ಯದಲ್ಲಿ ಮುಖಾಮುಖಿಯಾಗುತ್ತಿರುವ ಹಾಲಿ ಚಾಂಪಿಯನ್ ಚೆನ್ನೈ ಹಾಗೂ ಆರ್ ಸಿಬಿ ನಡುವೆ ಟ್ವಿಟ್ಟರ್ ವಾರ್ ಆರಂಭವಾಗಿದೆ.
ಟೀಂ ಇಂಡಿಯಾ ಮಾಜಿ ನಾಯಕ ಹಾಗೂ ಹಾಲಿ ನಾಯಕ ಇತ್ತಂಡಗಳ ನಾಯಕತ್ವವನ್ನು ವಹಿಸಿದ್ದು, ಪಂದ್ಯ ಅಭಿಮಾನಿಗಳಲ್ಲಿ ತೀವ್ರ ಕುತೂಹಲ ಮೂಡಿಸಿದೆ. ಇದರ ನಡುವೆಯೇ ಆರ್ ಸಿಬಿ ಟ್ವಿಟ್ಟರ್ ನಲ್ಲಿ ಮೊದಲ ಪಂದ್ಯದ ಬಗ್ಗೆ ಟ್ವೀಟ್ ಮಾಡಿ ಪಂದ್ಯಕ್ಕೆ ಸಿದ್ಧ ಎಂಬ ಸಂದೇಶ ರವಾನಿಸಿದೆ.
Advertisement
A spicy south Indian Derby for starters – but we prefer the sweet sambar…
Our VIVO IPL 2019 begins away from Bengaluru on Day 1 ❤ #PlayBold
— Royal Challengers Bangalore (@RCBTweets) February 19, 2019
Advertisement
ಆರ್ ಸಿಬಿ ಸ್ಪೈಸಿ ಸೌತ್ ಇಂಡಿಯನ್ ಸ್ಟಾರ್ಟರ್ಸ್ ಆದರೆ ನಾವು ಸ್ವೀಟ್ ಸಾಂಬಾರ್ ಇಷ್ಟಪಡುತ್ತೇವೆ ಎಂದು ಟ್ವೀಟ್ಟರ್ ನಲ್ಲಿ ಆರ್ ಸಿಬಿ ಬರೆದುಕೊಂಡಿದ್ದು, ಈ ಟ್ವೀಟ್ ಗೆ ಪ್ರತಿಕ್ರಿಯೆ ನೀಡಿರುವ ಚೆನ್ನೈ, ಸಾಂಬಾರ್ ಯಾವತ್ತಿದ್ದರೂ ಹಳದಿ ಬಣ್ಣವಲ್ಲವೇ ಎಂದು ಹೇಳಿ ಆರ್ ಸಿಬಿ ಕಾಲೆಳೆಯಲು ಪ್ರಯತ್ನಿಸಿದೆ. ಎರಡು ತಂಡಗಳ ಟ್ವೀಟ್ ಗಳಿಗೆ ಅಭಿಮಾನಿಗಳು ಕೂಡ ಪ್ರತಿಕ್ರಿಯೆ ನೀಡಿದ್ದು, ಬೆಂಗಳೂರಿನಲ್ಲಿ ಸಾಂಬಾರ್ ಯಾವಾಗಲೂ ಕೆಪ್ಪು ಬಣ್ಣದಲ್ಲಿ ಇರುತ್ತದೆ ಎಂದು ಟ್ವಿಟ್ವಿಗರೊಬ್ಬರು ಬರೆದುಕೊಂಡಿದ್ದಾರೆ.
Advertisement
But sambar is always #Yellove in colour no? ???????????? https://t.co/f5Rw9ZtpH6
— Chennai Super Kings (@ChennaiIPL) February 19, 2019
Advertisement
ಅಂದಹಾಗೇ ಚೆನ್ನೈ ಸೂಪರ್ ಕಿಂಗ್ಸ್ ಹಾಗೂ ಆರ್ ಸಿಬಿ ನಡುವಿನ ಪಂದ್ಯ ಮಾರ್ಚ್ 23 ರಂದು ಚೆನ್ನೈನ ಪಿ ಚಿದಂಬರಂ ಕ್ರೀಡಾಂಗಣದಲ್ಲಿ ಪಂದ್ಯ ನಡೆಯಲಿದೆ. ಕಳೆದ ಟೂರ್ನಿಯಲ್ಲಿ 2 ವರ್ಷಗಳ ಬ್ಯಾನ್ ಬಳಿಕ ಕಮ್ ಬ್ಯಾಕ್ ಮಾಡಿದ್ದ ಚೆನ್ನೈ ಸೂಪರ್ ಕಿಂಗ್ಸ್ ತಂಡ 3ನೇ ಬಾರಿ ಕಪ್ ಗೆದ್ದು ಸಂಭ್ರಮಿಸಿತ್ತು. ಇತ್ತ ಮೂರು ಬಾರಿ ರನ್ನರ್ ಆಪ್ ಆಡಿರುವ ಆರ್ ಸಿಬಿ ಮೊದಲ ಕಪ್ ಗೆಲ್ಲುವ ನಿರೀಕ್ಷೆಯಲ್ಲಿದೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv