ಬೆಂಗಳೂರು: ಟೀಂ ಇಂಡಿಯಾ ಮಾಜಿ ಕೋಚ್ ಅನಿಲ್ ಕುಂಬ್ಳೆ ತಮ್ಮ ಬೆಸ್ಟ್ ಐಪಿಎಲ್ ಬೆಸ್ಟ್ ತಂಡವನ್ನು ಆಯ್ಕೆ ಮಾಡಿದ್ದು, ಅಚ್ಚರಿ ಎಂಬಂತೆ ಆರ್ ಸಿಬಿ ತಂಡದ ನಾಯಕ ವಿರಾಟ್‍ಕೊಹ್ಲಿ ಅವರಿಗೆ ಪಟ್ಟಿಯಲ್ಲಿ ಸ್ಥಾನ ನೀಡಿಲ್ಲ.
ಡೆಲ್ಲಿ ಕ್ಯಾಪಿಟಲ್ಸ್ ತಂಡದ ನಾಯಕ, ಯುವ ಆಟಗಾರ ಶ್ರೇಯಸ್ ಅಯ್ಯರ್ ಅವರಿಗೆ ತಂಡದಲ್ಲಿ ಸ್ಥಾನ ನೀಡಿದ್ದಾರೆ. ಈ ಕುರಿತು ಪ್ರತಿಕ್ರಿಯೆ ನೀಡಿರುವ ಕುಂಬ್ಳೆ, ಶ್ರೇಯಸ್ ಉತ್ತಮ ಬ್ಯಾಟಿಂಗ್ ಪ್ರದರ್ಶನ ನೀಡಿದ್ದು, ಕಠಿಣ ಪರಿಸ್ಥಿತಿಯಲ್ಲಿ ತಮ್ಮ ಜವಾಬ್ದಾರಿಯನ್ನ ನಿರ್ವಹಿಸಿದ್ದಾರೆ. ಡೆಲ್ಲಿ ಕ್ರೀಡಾಂಗಣದ ಪಿಚ್ ಬ್ಯಾಟಿಂಗ್‍ಗೆ ಉತ್ತಮವಾಗಿಲ್ಲದಿದ್ದರು ತಂಡವನ್ನು ಮುಂದೆ ನಿಂತು ಮುನ್ನಡೆಸಿದ್ದಾರೆ ಎಂದಿದ್ದಾರೆ. ಟೂರ್ನಿಯಲ್ಲಿ ಶ್ರೇಯಸ್ ಅಯ್ಯರ್ 16 ಪಂದ್ಯಗಳಿಂದ 119.94 ಸ್ಟ್ರೈಕ್ ರೇಟ್ ನಲ್ಲಿ 463 ರನ್ ಗಳಿಸಿದ್ದಾರೆ.
Advertisement
Advertisement
ಈ ತಂಡವನ್ನು ಗ್ರೂಪ್ ಹಂತದಲ್ಲಿ ಆಟಗಾರರು ತೋರಿದ ಪ್ರದರ್ಶನ ಮೇಲೆ ಮಾತ್ರ ಆಯ್ಕೆ ಮಾಡಲಾಗಿದೆ ಎಂದು ಕುಂಬ್ಳೆ ತಿಳಿಸಿದ್ದು, ಡೇವಿಡ್ ವಾರ್ನರ್, ಕೆಎಲ್ ರಾಹುಲ್ ಅವರಿಗೆ ಆರಂಭಿಕರ ಸ್ಥಾನ ನೀಡಿದ್ದಾರೆ.
Advertisement
ವಾರ್ನರ್ ಈ ಬಾರಿಯ ಟೂರ್ನಿಯಲ್ಲಿ 12 ಪಂದ್ಯಗಳಿಂದ 692 ರನ್ ಗಳಿಸಿ ಲೀಡಿಂಗ್ ರನ್ ಸ್ಕೋರರ್ ಆಗಿದ್ದು, ಕೆಎಲ್ ರಾಹುಲ್ 14 ಪಂದ್ಯಗಳಿಂದ 521 ರನ್ ಗಳಿಸಿದ್ದಾರೆ. ಉಳಿದಂತೆ ಮಧ್ಯಮ ಕ್ರಮಾಂಕದಲ್ಲಿ ರಿಷಬ್ ಪಂತ್, ಎಂಎಸ್ ಧೋನಿ, ರಸೆಲ್, ಹಾರ್ದಿಕ್ ಪಾಂಡ್ಯರನ್ನು ಆಯ್ಕೆ ಮಾಡಿದ್ದಾರೆ. ಹಾರ್ದಿಕ್ ಪಾಂಡ್ಯ ಹಾಗೂ ಆಂಡ್ರೆ ರಸೆಲ್ ಏಕಾಂಕಿಯಾಗಿ ತಂಡವನ್ನು ಗೆಲ್ಲಿಸುವ ಸಾಮಥ್ರ್ಯ ಹೊಂದಿದ್ದಾರೆ. ಉಳಿದಂತೆ ತಂಡದಲ್ಲಿ ಶ್ರೇಯಸ್ ಗೋಪಾಲ್, ಇಮ್ರಾನ್ ತಹೀರ್ ಸ್ಪಿನ್ನರ್ ಗಳಾಗಿದ್ದರೆ, ರಬಾಡ, ಬುಮ್ರಾ ವೇಗದ ಬೌಲರ್ ಗಳಾಗಿದ್ದಾರೆ.
Advertisement
ತಂಡ ಇಂತಿದೆ: ಡೇವಿಡ್ ವಾರ್ನರ್, ಕೆಎಲ್ ರಾಹುಲ್, ಶ್ರೇಯಸ್ ಅಯ್ಯರ್, ರಿಷಬ್ ಪಂತ್, ಧೋನಿ (ನಾಯಕ), ಹಾರ್ದಿಕ್ ಪಾಂಡ್ಯ, ಆಂಡ್ರೆ ರಸೆಲ್, ಶ್ರೇಯಸ್ ಗೋಪಾಲ್, ಇಮ್ರಾನ್ ತಹೀರ್, ರಬಾಡ, ಜಸ್ಪ್ರೀತ್ ಬುಮ್ರಾ.