ಕ್ಯಾನ್ಸರ್ ಪೀಡಿತ ಬಾಲಕನಿಗೆ ಧೈರ್ಯ ತುಂಬಿದ ಯುವರಾಜ್ ಸಿಂಗ್

Public TV
1 Min Read
yuvi 1

ಇಂದೋರ್‌: ಕ್ಯಾನ್ಸರ್ ವಿರುದ್ಧ ಹೋರಾಟ ನಡೆಸಿ ಗೆದ್ದಿರುವ ಟೀಂ ಇಂಡಿಯಾ ಆಟಗಾರ ಯುವರಾಜ್ ಸಿಂಗ್ ಎಲ್ಲರಿಗೂ ಸ್ಫೂರ್ತಿಯಾಗಿದ್ದು, ಈ ನಡುವೆ ಕ್ಯಾನ್ಸರ್ ಪೀಡಿತರಿಗೆ ಧೈರ್ಯ ತುಂಬುವ ಕಾರ್ಯವನ್ನು ಮಾಡುತ್ತಿದ್ದಾರೆ.

ಈ ಬಾರಿಯ ಐಪಿಎಲ್ ನಲ್ಲಿ ಕಿಂಗ್ಸ್ ಇಲೆವೆನ್ ತಂಡದ ಪರ ಆಡುತ್ತಿರುವ ಯುವಿ, ಕ್ಯಾನ್ಸರ್ ಪೀಡಿದ ಬಾಲಕನನ್ನು ಭೇಟಿ ಮಾಡಿ ಧೈರ್ಯ ತುಂಬಿದ್ದಾರೆ. ಈ ಕುರಿತ ಫೋಟೋಗಳನ್ನು ಕಿಂಗ್ಸ್ ಇಲೆವೆನ್ ಪಂಜಾಬ್ ತನ್ನ ಟ್ವಿಟ್ಟರ್ ಖಾತೆಯಲ್ಲಿ ಪ್ರಕಟಿಸಿದೆ.

11 ವರ್ಷದ ಬಾಲಕ ರಾಕಿ ಕ್ಯಾನ್ಸರ್ ನಿಂದ ಬಳಲುತ್ತಿದ್ದು, ಯುವರಾಜ್ ಆತನನ್ನು ಭೇಟಿ ಮಾಡಿದ್ದಾರೆ. ಈ ವೇಳೆ ಯುವಿ ಬಾಲಕನೊಂದಿಗೆ ಕೆಲ ಸಮಯ ಕಳೆದಿದ್ದಾರೆ. ಬಾಲಕ ಬಹುಬೇಗ ಚೇತರಿಕೊಳ್ಳಲಿ ಎಂದು ಟ್ವೀಟ್ ನಲ್ಲಿ ಬರೆಯಲಾಗಿದೆ. ಭೇಟಿ ವೇಳೆ ಯುವಿ ಬಾಲಕನಿಗೆ ತಂಡದ ಜರ್ಸಿ ಹಾಗೂ ಕ್ಯಾಪ್ ಗಿಫ್ಟ್ ಮೇಲೆ ಸಹಿ ಮಾಡಿ ನೀಡಿದ್ದಾರೆ. ಯುವಿ ಅವರ ಈ ಫೋಟೋ ನೋಡಿರುವ ಅಭಿಮಾನಿಗಳು ಮೆಚ್ಚುಗೆ ಸೂಚಿಸಿದ್ದಾರೆ.

ಬಹು ಸಮಯ ಕ್ಯಾನ್ಸರ್ ನಿಂದ ಬಳಿದ್ದ ಯುವಿ ಅನಾರೋಗ್ಯದ ನಡುವೆ ಭಾರತದ ಪರ ಆಡಿ ವಿಶ್ವಕಪ್ ಗೆಲುವು ಪಡೆಯಲು ಕಾರಣರಾಗಿದ್ದರು. ದಕ್ಷಿಣ ಆಫ್ರಿಕಾದಲ್ಲಿ ನಡೆದ 2007 ರ ಟಿ-20 ವಿಶ್ವಕಪ್ ನಲ್ಲಿ ಉತ್ತಮ ಪ್ರದರ್ಶನ ನೀಡಿದ್ದರು. ಅಲ್ಲದೇ 2011 ವಿಶ್ವಕಪ್ ಟೂರ್ನಿಯಲ್ಲಿ ಸರಣಿ ಶ್ರೇಷ್ಟ ಪ್ರಶಸ್ತಿ ಪಡೆದಿದ್ದರು. ಬಳಿಕ ಯುವಿ ಕ್ಯಾನ್ಸರ್ ವಿರುದ್ಧ ಹೋರಾಟ ನಡೆಸಿ ಮತ್ತೆ 2012 ರಲ್ಲಿ ಟೀಂ ಇಂಡಿಯಾ ದಲ್ಲಿ ಸ್ಥಾನ ಪಡೆಯಲು ಯಶಸ್ವಿಯಾಗಿದ್ದರು. ಆದರೆ ಫಿಟ್‍ನೆಸ್ ಸಮಸ್ಯೆ ಎದುರಿಸುತ್ತಿರುವ ಯುವಿ ಈ ಬಾರಿಯ ಐಪಿಎಲ್ ನಲ್ಲೂ ನೀರಸ ಪ್ರದರ್ಶನ ಮುಂದುವರೆಸಿದ್ದಾರೆ. ಟೂರ್ನಿಯಲ್ಲಿ 7 ಪಂದ್ಯಗಳನ್ನು ಆಡಿರುವ ಯುವಿ 64 ರನ್ ಮಾತ್ರ ಗಳಿಸಿದ್ದಾರೆ. ಈಗ ಪಂಜಾಬ್ ತಂಡದ ಅಂತಿಮ 11 ಆಟಗಾರರ ಪಟ್ಟಿಯಲ್ಲಿ ಸ್ಥಾನಗಳಿಸುವ ವಿಶ್ವಾಸವನ್ನು ಹೊಂದಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *