ಕೊಲ್ಕತ್ತಾ: ಐಪಿಎಲ್ ನಲ್ಲಿ ಡಕ್ವರ್ತ್ ಲೂಯಿಸ್ ನಿಯಮಗಳ ಬದಲಾಗಿ ಭಾರತೀಯ ಜಯದೇವನ್ ಅವರು ರೂಪಿಸಿರುವ ವಿಜೆಡಿ ನಿಯಮಗಳನ್ನು ಏಕೆ ಬಳಕೆ ಮಾಡಬಾರದು ಎಂದು ಕೆಕೆಆರ್ ತಂಡದ ನಾಯಕ ದಿನೇಶ್ ಕಾರ್ತಿಕ್ ಪ್ರಶ್ನಿಸಿದ್ದಾರೆ.
ಕಿಂಗ್ಸ್ ಇಲೆವೆನ್ ಪಂಜಾಬ್ ವಿರುದ್ಧ ನಡೆದ ಪಂದ್ಯದಲ್ಲಿ ಶನಿವಾರ 9 ವಿಕೆಟ್ ಅಂತರದಲ್ಲಿ ಸೋಲುಂಡ ಬಳಿಕ ಮಾತನಾಡಿದ ದಿನೇಶ್ ಕಾರ್ತಿಕ್, ಮಳೆಯ ಬಳಿಕ ಆರಂಭವಾದ ಪಂದ್ಯದಲ್ಲಿ ಎದುರಾಳಿ ತಂಡ ಎಸೆತಕ್ಕೆ ಒಂದು ರನ್ ಗಳಿಸುವ ಗುರಿ ಪಡೆದಿತ್ತು. ಈ ನಿಯಮಗಳು ತನಗೆ ಅರ್ಥವಾಗಲಿಲ್ಲ. ಪ್ರಸ್ತುತ ಹಲವರು ಡಿಎಲ್‍ಎಸ್ ನಿಯಮಗಳಲ್ಲಿ ಗೊಂದಲ ಮಾಡಿಕೊಳ್ಳುತ್ತಾರೆ. ಅದ್ದರಿಂದ ವಿಜೆಡಿ ನಿಯಮಗಳನ್ನು ಬಳಕೆ ಮಾಡಕೊಳ್ಳಬಹುದು ಎಂದರು.
Advertisement
Advertisement
ಐಪಿಎಲ್ ಟೂರ್ನಿಯನ್ನು ಐಸಿಸಿ ನಿಯಮಗಳ ಅಡಿಯಲ್ಲಿ ನಡೆಸಲಾಗುತ್ತಿದೆ. ಆದರೆ ಬಿಸಿಸಿಐ ಭಾರತೀಯ ಜಯದೇವನ್ ಅವರು ರೂಪಿಸಿರುವ ನಿಯಮಗಳನ್ನು ಬಳಕೆ ಮಾಡಬಹುದು. ಐಪಿಎಲ್ ದೇಶಿಯ ಟೂರ್ನಿ ಆಗಿರುವುದರಿಂದ ಇದು ಸಾಧ್ಯ. ಇದರಿಂದ ಅಂತರಾಷ್ಟ್ರೀಯ ಮಟ್ಟದಲ್ಲಿ ಭಾರತೀಯ ನಿಯಮಗಳ ಕುರಿತು ಪ್ರಚಾರ ಮಾಡಲು ಸಾಧ್ಯವಿದೆ ಎಂದು ಅಭಿಪ್ರಾಯ ಪಟ್ಟಿದ್ದಾರೆ.
Advertisement
ಪಂಜಾಬ್ ವಿರುದ್ಧದ ಪಂದ್ಯದಲ್ಲಿ ನಮ್ಮ ತಂಡ 10 ರಿಂದ 12 ರನ್ ಹೆಚ್ಚು ಗಳಿಸುವ ಅವಕಾಶವಿತ್ತು. ಅಲ್ಲದೇ ನಮ್ಮ ತಂಡದ ಬೌಲರ್ ಗಳು ನಿರಿಕ್ಷೀತ ಪ್ರದರ್ಶನ ನೀಡಿಲ್ಲ. ಗೇಲ್ ಹಾಗೂ ರಾಹುಲ್ ಪಂಜಾಬ್ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದರು ಎಂದು ಹೇಳಿದರು.
Advertisement
ಗೆಲ್ಲಲು 192 ರನ್ ಗುರಿ ಪಡೆದ ಕಿಂಗ್ಸ್ 8.2 ಓವರ್ ಗಳಲ್ಲಿ 96 ರನ್ ಗಳಿಸಿದ್ದ ವೇಳೆ ಪಂದ್ಯಕ್ಕೆ ಮಳೆ ಅಡ್ಡಿ ಪಡಿಸಿತು. ಈ ವೇಳೆ ಪಂಜಾಬ್ 12 ಓವರ್ ಗಳಲ್ಲಿ 103 ರನ್ ಗಳಿಸ ಬೇಕಿತ್ತು. 95 ನಿಮಿಷಗಳ ಬಳಿಕ ಪಂದ್ಯ ಆರಂಭವಾದ ಪಂದ್ಯದಲ್ಲಿ ಡಿಎಲ್‍ಎಸ್ ನಿಯಮಗಳ ಪ್ರಕಾರ ಪಂಜಾಬ್ 28 ಎಸೆಗಳಲ್ಲಿ 29 ರನ್ ಅಂದರೆ 13 ಓವರ್ ಗಳಿಗೆ 125 ರನ್ ಗುರಿ ನೀಡಲಾಗಿತ್ತು.
ಪಂಜಾಬ್ ಪರ ಭರ್ಜರಿ ಬ್ಯಾಟಿಂಗ್ ಪ್ರದಶನ ನೀಡಿದ ಗೇಲ್ 38 ಎಸೆತಗಳಲ್ಲಿ 62 ರನ್ (5 ಬೌಂಡರಿ, 6ಸಿಕ್ಸರ್) ಹಾಗೂ ಕನ್ನಡಿಗ ಕೆಎಲ್ ರಾಹುಲ್ 27 ಎಸೆತಗಳಲ್ಲಿ 60 ರನ್ (9ಬೌಂಡರಿ, 2 ಸಿಕ್ಸರ್) ಸಿಡಿಸಿ ತಂಡದ ಗೆಲುವಿಗೆ ಕಾರಣರಾದರು.