ಮುಂಬೈ: ವಿಶ್ವದ ಶ್ರೀಮಂತ ಕ್ರಿಕೆಟ್ ಲೀಗ್ ಎಂದೇ ಹೆಸರು ಪಡೆದಿರುವ ಇಂಡಿಯನ್ ಪ್ರೀಮಿಯರ್ ಲೀಗ್(ಐಪಿಎಲ್) ನಲ್ಲಿ ಕಪ್ ಗೆದ್ದ ಚೆನ್ನೈ ಸೂಪರ್ ಕಿಂಗ್ಸ್ ತಂಡ ಭರ್ಜರಿ ಬಹುಮಾನ ಪಡೆದಿದ್ದು ಎಲ್ಲರಿಗೂ ತಿಳಿದ ವಿಚಾರ. ಆದರೆ ಟೂರ್ನಿಯ ತಂಡದ ಕೋಚ್ ಗಳಿಗೆ ಎಷ್ಟು ಸಂಭಾವನೆ ನೀಡಲಾಗಿದೆ ಎಂಬುವುದು ಮಾತ್ರ ಅಚ್ಚರಿಯಾಗಿ ಉಳಿದಿದ್ದು, ಸದ್ಯ ಈ ಕುರಿತು ಮಾಹಿತಿ ಲಭಿಸಿದೆ.
ಅಂದಹಾಗೇ ಕಿಂಗ್ಸ್ ಇಲೆವೆನ್ ಪಂಜಾಬ್ ತಂಡದ ಕೋಚ್ ಆಗಿದ್ದ ವಿರೇಂದ್ರ ಸೆಹ್ವಾಗ್ ಅತೀ ಹೆಚ್ಚು ಸಂಭಾವನೆ ಪಡೆದವರು ಎನ್ನಲಾಗಿತ್ತು, ಆದರೆ ಖಾಸಗಿ ಮಾಧ್ಯಮವೊಂದು ಮಾಡಿರುವ ವರದಿಯ ಅಂಕಿ ಅಂಶಗಳ ಪ್ರಕಾರ ಆರ್ ಸಿಬಿ ತಂಡದ ಮುಖ್ಯ ಆಗಿ ಕಾರ್ಯನಿರ್ವಹಿಸಿದ್ದ ನ್ಯೂಜಿಲೆಂಡ್ ಮಾಜಿ ಆಟಗಾರ ಡೇನಿಯಲ್ ವೆಟ್ಟೋರಿ ಹೆಚ್ಚು ಸಂಭಾವನೆ ಪಡೆದ ಕೋಚ್ ಆಗಿದ್ದಾರೆ. ಆದರೆ ವೆಟ್ಟೋರಿ ಪಡೆದ ಮೊತ್ತದ ಖಚಿತ ಮಾಹಿತಿ ನೀಡಿಲ್ಲ. ಉಳಿದಂತೆ ಆರ್ ಸಿಬಿ ಬೌಲಿಂಗ್ ಕೋಚ್ ನೆಹ್ರಾ ಅವರು 4 ಕೋಟಿ ರೂ. ಪಡೆದು ಎರಡನೇ ಸ್ಥಾನ ಪಡೆದಿದ್ದಾರೆ.
Advertisement
Advertisement
ಉಳಿದಂತೆ ಅಧಿಕ ಸಂಭಾವನೆ ಪಡೆದ ಕೋಚ್‍ಗಳ ಪಟ್ಟಿಯಲ್ಲಿ ಡೆಲ್ಲಿ ಡೇರ್ ಡೆವಿಲ್ಸ್ ಮುಖ್ಯ ಕೋಚ್ ರಿಕ್ಕಿ ಪಾಂಟಿಂಗ್ ಹಾಗೂ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಸ್ಟಿಫನ್ ಫ್ಲೆಮಿಂಗ್ ಕ್ರಮವಾಗಿ 3.7 ಕೋಟಿ ರೂ. ಹಾಗೂ 3.2 ಕೋಟಿ ರೂ. ಪಡೆದಿದ್ದಾರೆ. ಇನ್ನು ಪಂಜಾಬ್ ತಂಡದ ಕೋಚ್ ವಿರೇಂದ್ರ ಸೆಹ್ವಾಗ್ 3 ಕೋಟಿ ರೂ. ರಾಜಸ್ಥಾನ ರಾಯಲ್ಸ್ ತಂಡದ ಕೋಚ್ ಶೇನ್ ವಾರ್ನ್ 2.7 ಕೋಟಿ ರೂ. ಕೋಲ್ಕತ್ತಾ ತಂಡದ ಜ್ಯಾಕ್ ಕಾಲಿಸ್ ಹಾಗೂ ಮುಂಬೈ ಇಂಡಿಯನ್ಸ್ ತಂಡದ ಕೋಚ್ ಮಹೇಲಾ ಜಯವರ್ಧನೆ 2.25 ಕೋಟಿ ರೂ. ಸಂಭಾವನೆ ಪಡೆದಿದ್ದಾರೆ.
Advertisement
ಸನ್ ರೈಸರ್ಸ್ ಹೈದರಾಬಾದ್ ತಂಡದ ವಿವಿಎಸ್ ಲಕ್ಷ್ಮಣ್ ಮತ್ತು ಟಾಮ್ ಮೂಡಿ 2 ಕೋಟಿ ರೂ. ಹಾಗೂ ಆರ್ ಸಿಬಿ ತಂಡದ ಬ್ಯಾಟಿಂಗ್ ಕೋಚ್ ಗ್ಯಾರಿ ಕಸ್ಟರ್ನ್ ಮುಂಬೈ ಬೌಲಿಂಗ್ ಕೋಚ್ ಲಸಿತ್ ಮಾಲಿಂಗ 1.5 ಕೋಟಿ ರೂ. ಪಡೆದಿದ್ದಾರೆ.
Advertisement
ಟೂರ್ನಿಯಲ್ಲಿ ಉತ್ತಮ ಪ್ರದರ್ಶನ ನೀಡಿ ಕಪ್ ಗೆದ್ದ ಚೆನ್ನೈ ತಂಡ 20 ಕೋಟಿ ರೂ. ಹಾಗೂ ರನ್ನರ್ ಆಪ್ ಆಗಿದ್ದ ಹೈದರಾಬಾದ್ ತಂಡ 12.5 ಕೋಟಿ ರೂ. ಬಹುಮಾನ ಪಡೆದಿತ್ತು. ಉಳಿದಂತೆ ಟೂರ್ನಿಯಲ್ಲಿ ಕ್ರಮವಾಗಿ 3 ಮತ್ತು 4ನೇ ಸ್ಥಾನ ಪಡೆದಿದ್ದ ಕೋಲ್ಕತ್ತಾ ಹಾಗೂ ರಾಜಸ್ಥಾನ ತಂಡಗಳು 8.75 ಕೋಟಿ ರೂ. ಪಡೆದುಕೊಂಡಿತ್ತು.