ಮುಂಬೈ: ಚೆಂಡು ವಿರೂಪಗೊಳಿಸುವ ಪ್ರಕರಣದಲ್ಲಿ ಸಿಲುಕಿ ಆಸೀಸ್ ತಂಡದ ನಾಯಕತ್ವ ಸ್ಥಾನ ಕಳೆದುಕೊಂಡಿದ್ದ ಸ್ಮಿತ್, ಇಂಡಿಯನ್ ಪ್ರೀಮಿಯರ್ ಲೀಗ್‍ನ ರಾಜಸ್ಥಾನ ರಾಯಲ್ಸ್ ತಂಡದ ನಾಯಕತ್ವ ಸ್ಥಾನವನ್ನು ಕಳೆದುಕೊಂಡಿದ್ದಾರೆ.
ಈ ಕುರಿತು ರಾಜಸ್ಥಾನ ರಾಯಲ್ಸ್ ತಂಡದ ಮಾಲೀಕರು ಸ್ಪಷ್ಟನೆ ನೀಡಿದ್ದು, ಟೀಂ ಇಂಡಿಯಾ ಆಟಗಾರರ ರಹಾನೆ ಅವರಿಗೆ ನಾಯಕತ್ವದ ಜವಾಬ್ದಾರಿ ನೀಡಿರುವುದಾಗಿ ತಿಳಿಸಿದ್ದಾರೆ.
Advertisement
Rajasthan Royals appoint @ajinkyarahane88 as the captain for #IPL2018
“The game is bigger than any individual and we hold this thought close to our heart.”- Manoj Badale , the co-owner of Rajasthan Royals
Read more: https://t.co/qBQbgUFb2u pic.twitter.com/iy3sMVWlc1
— Rajasthan Royals (@rajasthanroyals) March 26, 2018
Advertisement
ಕೇಪ್‍ಟೌನ್‍ನಲ್ಲಿ ನಡೆದಿರುವ ಘಟನೆ ಕ್ರಿಕೆಟ್ ಪ್ರಪಂಚವನ್ನು ತಲ್ಲಣಗೊಳಿಸಿದೆ. ನಾವು ಬಿಸಿಸಿಐ, ಐಸಿಸಿ ಹಾಗೂ ಸ್ಮಿತ್ ರೊಂದಿಗೆ ನಿರಂತರವಾಗಿ ಸಂಪರ್ಕದಲ್ಲಿದ್ದೇವೆ ಎಂದು ರಾಜಸ್ಥಾನ ರಾಯಲ್ಸ್ ತಂಡದ ಅಧಿಕಾರಿ ಝಬಿನ್ ಭರೂಚಾ ಮಾಹಿತಿ ನೀಡಿದ್ದಾರೆ.
Advertisement
ತಂಡದ ಹಿತಾದೃಷ್ಟಿಯಿಂದ ಈ ನಿರ್ಧಾರವನ್ನು ಕೈಗೊಳ್ಳಲಾಗಿದೆ. ಐಪಿಎಲ್ ಟೂರ್ನಿಯಲ್ಲಿ ತಂಡ ಉತ್ತಮ ಪ್ರದರ್ಶನ ನೀಡಲು ತಯಾರಿ ನಡೆಸಲು ಇದು ಸಹಕಾರಿಯಾಗಿರುತ್ತದೆ. ಅಲ್ಲದೇ ನಮ್ಮ ತಂಡ ಕ್ರಿಕೆಟ್ ಮೌಲ್ಯ ಹಾಗೂ ಗೌರವವನ್ನು ಉಳಿಸಲು ಪ್ರಯತ್ನಿಸುತ್ತದೆ. ರಹಾನೆ ರಾಯಲ್ಸ್ ಕುಟುಂಬ ಸದಸ್ಯರಾಗಿದ್ದು, ತಂಡದ ಸಂಸ್ಕೃತಿ ಹಾಗೂ ಮೌಲ್ಯಗಳನ್ನು ಅರಿತುಕೊಂಡಿದ್ದಾರೆ ಎಂದು ತಿಳಿಸಿದರು. ಇದನ್ನೂ ಓದಿ: ಚೆಂಡು ವಿರೂಪಗೊಳಿಸಿದ ಪ್ರಕರಣ: ಐಸಿಸಿ ನೀತಿ ವಿರುದ್ಧ ಹರ್ಭಜನ್ ಕಿಡಿ
Advertisement
ಐಪಿಎಲ್ ನಲ್ಲಿ ಫಿಕ್ಸಿಂಗ್ ಆರೋಪದಡಿ 2 ವರ್ಷ ನಿಷೇಧಕ್ಕೆ ಒಳಗಾಗಿದ್ದ ರಾಜಸ್ಥಾನ ರಾಯಲ್ಸ್ ತಂಡ 11ನೇ ಅವೃತ್ತಿಯ ಐಪಿಎಲ್‍ಗೆ ಕಮ್ ಬ್ಯಾಕ್ ಮಾಡಿತ್ತು. ಇನ್ನು 2008 ರಲ್ಲಿ ಮುಂಬೈ ಇಂಡಿಯನ್ಸ್ ಪರ ಆಡಿದ್ದ ಅಜಿಂಕ್ಯಾ ರಹಾನೆ, 2011 ರಿಂದ 2015 ರವರೆಗೆ ರಾಯಲ್ಸ್ ತಂಡದ ಪರ ಆಡಿದ್ದರು. ಇದನ್ನೂ ಓದಿ: ಚೆಂಡನ್ನು ವಿರೂಪಗೊಳಿಸಿದ್ದು ಯಾಕೆ? ಸ್ಪಿತ್ ಹೇಳಿದ್ದು ಏನು?