ಮುಂಬೈ: ಐಪಿಎಲ್-11 ಉದ್ಘಾಟನಾ ಕಾರ್ಯಕ್ರಮದಲ್ಲಿ ರಣ್‍ವೀರ್ ಸಿಂಗ್ ಡ್ಯಾನ್ಸ್ ಮಾಡಲು 15 ಕೋಟಿ ರೂ. ಪಡೆದಿದ್ದರು. ಆದರೆ ಈಗ ಅವರು ಭುಜದ ಸಮಸ್ಯೆಯಿಂದ ಬಳಲುತ್ತಿದ್ದು, ಡ್ಯಾನ್ಸ್ ಮಾಡಬಾರದೆಂದು ವೈದ್ಯರು ರಣ್‍ವೀರ್ ಗೆ ತಿಳಿಸಿದ್ದಾರೆ.
ರಣ್‍ವೀರ್ ಸಿಂಗ್ ಫುಟ್‍ಬಾಲ್ ಪಂದ್ಯದ ವೇಳೆ ತಮ್ಮ ಭುಜಕ್ಕೆ ಪೆಟ್ಟು ಮಾಡಿಕೊಂಡಿದ್ದರು. ನಂತರ ವೈದ್ಯರು ಹಲವಾರು ವೈದ್ಯಕೀಯ ಪರೀಕ್ಷೆ ನಡೆಸಿದ ಮೇಲೆ ರಣ್‍ವೀರ್ ಐಪಿಎಲ್ ನಲ್ಲಿ ಡ್ಯಾನ್ಸ್ ಮಾಡುವುದು ಬೇಡ ಎಂದು ವೈದ್ಯರು ಹೇಳಿದ್ದಾರೆ.
Advertisement
Advertisement
ಏಪ್ರಿಲ್ 7 ರಂದು ಮುಂಬೈಯ ವಾಂಖೆಡೆ ಕ್ರೀಡಾಂಗಣದಲ್ಲಿ ನಡೆಯಲಿರುವ ಉದ್ಘಾಟನಾ ಕಾರ್ಯಕ್ರಮದಲ್ಲಿ ರಣ್‍ವೀರ್ ಸಿಂಗ್ ನೃತ್ಯ ಪ್ರದರ್ಶನ ಮಾಡಬೇಕಿತ್ತು. ಆದರೆ ರಣ್‍ವೀರ್ ಹೈ-ಎನರ್ಜಿಯಲ್ಲಿ ಡ್ಯಾನ್ಸ್ ಮಾಡುವ ಕಾರಣ ಭುಜದ ನೋವು ಇನ್ನಷ್ಟು ಹೆಚ್ಚಾಗುವ ಸಾಧ್ಯತೆ ಇದೆ. ಹೀಗಾಗಿ ನೃತ್ಯ ಮಾಡದೇ ಇರುವುದು ಉತ್ತಮ ಎಂದು ವೈದ್ಯರು ಸಲಹೆ ನೀಡಿದ್ದಾರೆ.
Advertisement
Thank you for the good wishes everyone. I’m good. Its just a labral tear in my left shoulder. I intend to come back stronger ????????
Love you all ❤???????? ????
— Ranveer Singh (@RanveerOfficial) April 3, 2018
Advertisement
ಭುಜದ ನೋವಿನಿಂದ ರಣ್‍ವೀರ್ ಸಿಂಗ್ ಬಳಲುತ್ತಿದ್ದು, ತಮ್ಮ ಅಭಿಮಾನಿಗಳಿಗೆ ಟ್ವೀಟ್ ಮಾಡಿದ್ದಾರೆ. “ನಿಮ್ಮ ಎಲ್ಲ ಶುಭ ಹಾರೈಕೆಗಳಿಗೆ ಧನ್ಯವಾದಗಳು. ನಾನು ಆರೋಗ್ಯವಾಗಿದ್ದೇನೆ. ನನ್ನ ಎಡಭಾಗದ ಭುಜ ಸ್ವಲ್ಪ ನೋವಾಗಿದ್ದು, ನಾನು ಇನ್ನಷ್ಟು ಶಕ್ತಿಶಾಲಿಯಾಗಿ ಹಿಂತಿರುಗಿ ಬರುತ್ತೇನೆ. ಲವ್ ಯೂ ಆಲ್” ಎಂದು ರಣ್‍ವೀರ್ ಸಿಂಗ್ ಟ್ವಿಟ್ಟರ್ ನಲ್ಲಿ ಬರೆದುಕೊಂಡಿದ್ದಾರೆ.
ಸದ್ಯ ರಣ್‍ವೀರ್ ಸಿಂಗ್ ‘ಗಲ್ಲಿಬಾಯ್’ ಚಿತ್ರದಲ್ಲಿ ನಟಿಸುತ್ತಿದ್ದಾರೆ. ಈ ಚಿತ್ರದಲ್ಲಿ ಯಾವುದೇ ಸಾಹಸ ದೃಶ್ಯ ಹಾಗೂ ಡ್ಯಾನ್ಸ್ ಇಲ್ಲದ ಕಾರಣ ರಣ್‍ವೀರ್ ಸಿಂಗ್ ಚಿತ್ರೀಕರಣದಲ್ಲಿ ಪಾಲ್ಗೊಂಡಿದ್ದಾರೆ.