ಬೆಂಗಳೂರು: ಒಂದು ವಿಡಿಯೋ ಸಾಂಗ್ ಮೂಲಕ ಅಪಾರ ಅಭಿಮಾನಿಗಳನ್ನು ಪಡೆದು ಇಂಟರ್ ನೆಟ್ ಸೆನ್ಸೇಷನ್ ಆಗಿದ್ದ ನಟಿ ಪ್ರಿಯಾ ವಾರಿಯರ್ ಗೆ ಪೈಪೋಟಿ ನೀಡುವಂತೆ ಆರ್ ಸಿಬಿ ಆಟಗಾರ ಬ್ರೆಂಡನ್ ಮೆಕ್ಕಲಂ ಹುಬ್ಬೆರಿಸಿರುವ ವಿಡಿಯೋ ಸದ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಸದ್ಯ ಈ ವಿಡಿಯೋವನ್ನು ಆರ್ ಸಿಬಿ ತನ್ನ ಟ್ವಿಟ್ಟರ್ ಖಾತೆಯಲ್ಲಿ ಪೋಸ್ಟ್ ಮಾಡಿದ್ದು, ಪ್ರಿಯಾ ವಾರಿಯಾರ್ ಗೆ ಪೈಪೋಟಿ ನೀಡಿದ್ದರಾ ಎಂದು ಬರೆದುಕೊಂಡಿದೆ. ಈ ಹಿಂದೆಯೂ ಹಲವು ನಟ ನಟಿಯರು ಪ್ರಿಯಾ ವಾರಿಯರ್ ರೀತಿ ಹುಬ್ಬೆರಿಸಿ ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ಹರಿಬಿಟ್ಟಿದ್ದರು. ಸದ್ಯ ನ್ಯೂಜಿಲೆಂಡ್ ತಂಡದ ಮಾಜಿ ನಾಯಕ ಬ್ರೆಡಮ ಮೆಕಲಮ್ ಸಹ ಈ ಸಾಲಿಗೆ ಸೇರಿದ್ದಾರೆ.
- Advertisement 2
Does @Bazmccullum closely compete with Priya? Expressions that make your ❤ melt ???? #PlayBold #RRvRCB #RCB pic.twitter.com/5QiuvCLR6m
— Royal Challengers Bangalore (@RCBTweets) May 19, 2018
- Advertisement 3
ಸದ್ಯದ ಟೂರ್ನಿಯಲ್ಲಿ ನಿರೀಕ್ಷಿತ ಪ್ರದರ್ಶನ ನೀಡಲು ವಿಫಲರಾಗಿರುವ ಮೆಕ್ಕಲಂ 6 ಜನ್ನಿಂಗ್ಸ್ ಗಳಲ್ಲಿ ಕೇವಲ 127 ರನ್ ಮಾತ್ರ ಗಳಿಸಿದ್ದಾರೆ. ಶನಿವಾರ ನಡೆದ ರಾಜಸ್ಥಾನ ವಿರುದ್ಧ ಪಂದ್ಯದಲ್ಲಿ ಸೋಲುವ ಮೂಲಕ ಆರ್ ಸಿಬಿ 2018 ರ ಐಪಿಎಲ್ನಿಂದ ಹೊರಬಿದ್ದಿದೆ. ಟೂರ್ನಿಯಲ್ಲಿ 14 ಪಂದ್ಯಗಳನ್ನು ಆಡಿರುವ ಕೊಹ್ಲಿ ನಾಯಕತ್ವದ ಆರ್ ಸಿಬಿ ಕೇವಲ 6 ಪಂದ್ಯಗಳನ್ನು ಮಾತ್ರ ಗೆದ್ದು 12 ಅಂಕಗಳನ್ನು ಮಾತ್ರ ಪಡೆದಿದೆ.
- Advertisement 4
ಪಂದ್ಯದಲ್ಲಿ ರಾಜಸ್ಥಾನದ ಪರ ಕನ್ನಡಿಗ ಶ್ರೇಯಸ್ ಗೋಪಾಲ್ ಮಿಂಚಿನ ಬೌಲಿಂಗ್ ಪ್ರದರ್ಶನ ನೀಡಿ ಆರ್ ಸಿಬಿ ಸೋಲಿಗೆ ಕಾರಣರಾದರು. ಪಂದ್ಯದಲ್ಲಿ ಆರ್ ಸಿಬಿ ನಾಯಕ ವಿರಾಟ್ ಕೊಹ್ಲಿ ಸೇರಿದಂತೆ ಪ್ರಮುಖ ಆಟಗಾರರ 4 ವಿಕೆಟ್ ಪಡೆದ ಗೋಪಾಲ್ ಕೇವಲ 16 ರನ್ ಬಿಟ್ಟುಕೊಟ್ಟರು. ಈ ಮೂಲಕ ಪಂದ್ಯಶ್ರೇಷ್ಠ ಪ್ರಶಸ್ತಿಯನ್ನು ಪಡೆದರು. ಈ ಗೆಲುವಿನೊಂದಿಗೆ ರಾಜಸ್ಥಾನ ರಾಯಲ್ಸ್ ತಂಡ ಅಂಕಪಟ್ಟಿಯಲ್ಲಿ 14 ಪಂದ್ಯಗಳಿಂದ 14 ಅಂಕ ಪಡೆದರೂ ಪಟ್ಟಿಯಲ್ಲಿ 4ನೇ ಸ್ಥಾನಕ್ಕೆ ಜಿಗಿದಿದೆ. ಇದನ್ನು ಓದಿ: ಪ್ರಿಯಾ ವಾರಿಯರ್ `ಒರು ಅಡರ್ ಲವ್’ ಸಾಂಗ್ ಟೀಸರ್ ವೈರಲ್